ದಿನಾ೦ಕ : 21_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ ಚಿ೦ತನ - `ಅಮನಸ್ಸು' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)
Friday, October 21, 2016
ಚಿ೦ತನ - `ಅಮನಸ್ಸು'
ದಿನಾ೦ಕ : 21_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ ಚಿ೦ತನ - `ಅಮನಸ್ಸು' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)
Sunday, October 16, 2016
'ಚಿ೦ತನ - ಅರಳುವಿಕೆ'
ದಿನಾ೦ಕ : 14_10_2016ರ೦ದು ಆಕಾಶವಾಣಿ, ಹಾಸನ ಕೇ೦ದ್ರ(FM)ದಿ೦ದ ಪ್ರಸಾರವಾದ ನನ್ನ 'ಚಿ೦ತನ - ಅರಳುವಿಕೆ' ಇಲ್ಲಿದೆ. ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :)
Saturday, October 8, 2016
Thursday, October 6, 2016
ಅ೦ದಿನ ಬರಹ ಇ೦ದಿನ ಓದಿಗೆ - ಲಲಿತ ಪ್ರಬ೦ಧ `ಕಾಫ್ಯಾತುರಾಣಾ೦..........'
ಅ೦ದಿನ ಬರಹ ಇ೦ದಿನ ಓದಿಗೆ::)
2008ರ 'ಮಯೂರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `
ಕಾಫ್ಯಾತುರಾಣಾ೦..........'
:
`ಬೆಳಗಾಗಿ ನಾನೆದ್ದು ಯಾರಾರ
ನೆನೆಯಾಲಿ..?..?...’ ಎ೦ದು
ನಮ್ಮ ಜಾನಪದರು
ಹಾಡಿದ್ದಾರೆ. ಆದರೆ
ಯಾರಾರನ್ನು ನೆನೆಯುವ
ಮೊದಲು ಸಾಮಾನ್ಯವಾಗಿ ಕುಡಿಯುವ
ಪ್ರಾತ:ಕಾಲದ
ಪೇಯವಾದ ಕಾಫಿಯನ್ನು ನೆನೆವುದಕ್ಕೆ ಬಹಳ
ಪ್ರಾಮುಖ್ಯತೆಯನ್ನು ಕೊಡುತ್ತಾರೆ ನಮ್ಮ ಕಾಫೀಪ್ರಿಯರು! ವಿದೇಶೀಯರು ನಮ್ಮ
ನೆಲವನ್ನು ಆಕ್ರಮಿಸುವ ಸ೦ದಭ೯ದಲ್ಲೇ ನಮ್ಮ
ದೇಶಕ್ಕೆ ಲಗ್ಗೆ
ಇಟ್ಟು ನಮ್ಮ ನೆಲದಲ್ಲಿ ತಳವೂರಿದ್ದಲ್ಲದೇ ನಮ್ಮ
ಮನೆಯ ಅಡುಗೆ
ಮನೆಗಳಲ್ಲಿ ಪ್ರಮುಖ
ಸ್ಥಾನ ಪಡೆದು
ನಮ್ಮೆಲ್ಲರ ಮನದಲ್ಲಿ
ಮನೆಮಾಡಿ ಮನೆಮಾತಾಗಿರುವ `ಕಾಫಿ’ಯ ಸಾಹಸ
ಮೆಚ್ಚಬೇಕಾದ್ದೇ. ಕಾಫಿ
ಇಲ್ಲದ ಹಗಲೇ
ನೀರಸ ಎನ್ನುವ
ನನ್ನವರ೦ಥಾ ರಸಋಷಿಗಳು ಎದ್ದ
ತಕ್ಷಣವೇ ಒ೦ದು ಲೋಟ ಕಾಫಿ
ಹಿಡಿದು ಹೀರುವ
ದೃಶ್ಯ ಅನನ್ಯ!
ಚಹಾ ಕಪ್
ಹಿಡಿದ ಝೆನ್ಗಳ ತದ್ರೂಪ!
ಆದರೆ ಈ ಮೊದಲ ಕಪ್
ಕಾಫಿ ನನ್ನವರಿಗೆ ತೃಪ್ತಿ
ನೀಡುತ್ತದೆ ಎ೦ದು
ಭಾವಿಸಿದರೆ ತಪ್ಪಾಗುತದೆ. ಎದ್ದ
ತಕ್ಷಣ ಫ್ರೆಶ್
ಆಗಿ ಕಾಫಿ
ಡಿಕಾಕ್ಷನ್ ಹಾಕಿ
ಅದಕ್ಕೆ ರಾತ್ರಿಯ
ಹಾಲು ಬೆರಸಿ
ಕುಡಿಯುವುದರಿ೦ದ ದಿನದ
ಕಾಫಿಯ ಪ್ರತಾಪ
ಪ್ರಾರ೦ಭವಾಗುತ್ತದೆ. `ರಾತ್ರಿ ಹಾಲಿನ
ಕಾಫಿ ಅಷ್ಟೇನೂ
ರುಚಿಯಿಲ್ಲ,’
ಎನ್ನುತ್ತಾ ಹಾಲಿನಾಕೆ ಬರುವುದನ್ನೇ ಕಾಯ್ದು
ಮತ್ತೊ೦ದು ಲೋಟ
(ಕಪ್ ಎ೦ದ್ರೆ
ಚಿಕ್ಕದಾಯ್ತು!) ಕಾಫಿಯ
ಸೇವನೆಯಾಗುತ್ತದೆ. `ಇವತ್ತೇಕೋ ಹಾಲು
ನೀರು, ಕಾಫಿ
ರುಚಿಸಲೇಇಲ್ಲ,’
ಎನ್ನುವ ಮಾಮೂಲಿ
ರಾಗದೊಡನೆ ಹಾಲಿನ
ಡೈರಿಯ ಕಡೆಗೆ
morning walk ಹೊರಡಲು ಕಾಫಿ
ಪ್ರೇರಕವಾಗುತ್ತದೆ! ಆ ಹಾಲಿನ ಗಟ್ಟಿ
ಕಾಫಿಯನ್ನ೦ತೂ ಪೂಣ೯
ಮನದಿ೦ದ ಕಣ್ಣುಮುಚ್ಚಿಯೇ (ಕಳ್ಳ
ಬೆಕ್ಕಿನ೦ತೆ!) ಸವಿದು, `ಏನೆ೦ದರೂ ನಮ್ಮದೇ
ಮನೆಯ ಎಮ್ಮೆ
ಹಾಲಿನ ಕಾಫಿಯ
ರುಚಿಯೇ ರುಚಿ’ ಎನ್ನುತ್ತಾ ತಾವು
ಬಾಲ್ಯದಲ್ಲಿ ಹಳ್ಳಿಯ
ಅಜ್ಜಿಯ ಮನೆಯಲ್ಲಿ ಸವಿದ
ಕಾಫಿಯ ರುಚಿಯನ್ನು ನೆನೆಸಿಕೊಳ್ಳುತ್ತಾ ಒ೦ದು
ಸುತ್ತು ಕಾಫಿ
ಕಥೆಗೆ ಮುಕ್ತಾಯ
ಹಾಡುತ್ತಾರೆ. ಇದು
ಹೀಗೇ ಮು೦ದುವರಿದರೆ ನಾನೆಲ್ಲಿ ಎಮ್ಮೆಯ
ಒಡತಿಯಾಗಬೇಕಾಗುತ್ತದೋ ಎನ್ನುವ
ದಿಗಿಲಾಗುತ್ತದೆ! ಹೀಗೆ
ಉದಯಕಾಲದ ಕಾಫಿ
ಪ್ರಕರಣ ಅತೃಪ್ತಿಯಿ೦ದ
ತೃಪ್ತಿಯೆಡೆಗೆ ಸತತ
ಪಯಣ ಬೆಳೆಸಿದರೂ ತೃಪ್ತಿ
ಮರೀಚಿಕೆಯಾಗಿಯೇ ಉಳಿಯುತ್ತದೆ.
ಉದಯ ಕಾಲದೊಳೆದ್ದು ಗಡಗಡ
ನಡುಗುತ
ಬಿಸಿ ಬಿಸಿ
ಕಾಫಿಯ ಕುಡಿಯುತಲಿ............
ಬೆಳಿಗ್ಗೆ ೪.೩೦ ರಿ೦ದ
೭.೩೦ರವರಗೆ
ಕಾಫಿ ಸ೦ಭ್ರಮದಲ್ಲೇ ಇವರು
ಮುಳುಗಿರುವುದರಿ೦ದ ಅವರ
ಸ್ವಾತ೦ತ್ರ್ಯಕ್ಕೆ ಧಕ್ಕೆ
ತರಲಿಚ್ಚಿಸದ ನಾನು
೭.೩೦ರ
ನ೦ತರವೇ ಪ್ರಥಮ
ಭಾನು ಕಿರಣಕ್ಕೆ(!) ಕಣ್ಣು
ತೆರೆಯುತ್ತೇನೆ!
ಕಾಫಿಯ ಬಗ್ಗೆ
`ಅಷ್ಟಕ್ಕಷ್ಟೇ’
ಎನ್ನುವ ಭಾವನೆ
ನನಗಿರಬಹುದು ಎ೦ದು
ನೀವ೦ದುಕೊ೦ಡರೂ ನಾನು
ದಿನದ ಎಚ್ಚರದ
ಕ್ಷಣಗಳಲ್ಲೆಲ್ಲಾ ಕಾಫಿಯ
ಬಗ್ಗೇ ಒ೦ದಲ್ಲಾ
ಒ೦ದು ಯೋಚನೆ
ಮಾಡುತ್ತಿರುತ್ತೇನೆ. ನಮ್ಮ
ಮಿತ್ರರಿಗಿ೦ತಾ ಶತ್ರುಗಳೇ ಸದಾ
ಮನದಲ್ಲಿ ಸುತ್ತುವ೦ತೆ! ಮೊದಲಿನಿ೦ದ ನನಗೇನೂ
ಈ ಚಿveಡಿsioಟಿ ಇರಲಿಲ್ಲ. ಅಮ್ಮ
ಮನೆಗೆ ಯಾರೇ
ಅತಿಥಿ ಬ೦ದರೂ
ಪ್ರಥಮ ಕಾಫಿ
ಸೇವೆ ಮಾಡುವಾಗ
ಅದರ ರುಚಿ
ಮಾಪಕವಾಗಿ ನನ್ನೇ
ಬಳಸುತ್ತಿದ್ದುದರಿ೦ದ ಒ೦ದೆರಡು
ಗುಟುಕು ಸೇವನೆಯ೦ತೆ ದಿನಕ್ಕೆ
೪-೫ ಲೋಟವಾದರೂ ಕಾಫಿಯನ್ನು ಹೀರುತಿದ್ದೆ. ಇವರ
ಹೃದಯದಲ್ಲಿ ಮೊದಲ
ಸ್ಥಾನ `ಕಾಪಿ’ಗೆ ಎ೦ದು ತಿಳಿದಾಗಿನಿ೦ದ ಒ೦ದು
ರೀತಿ `ಸವತಿ ಮಾತ್ಸಯ೯’ ದಿ೦ದಲೋ ಏನೋ
ಹೊಟ್ಟೆ ಉರಿಯಲಾರ೦ಭಿಸಿತು. ವೈದ್ಯರು
ಅದಕ್ಕೆ `ಗ್ಯಾಸ್ಟ್ರಿಕ್’
ಎ೦ಬ ಹೆಸರಿಟ್ಟು ಕಾಫಿ
ಕುಡಿಯಲೇ ಬೇಡಿ’ ಎ೦ಬ ಸಲಹೆ
ಕಟ್ಟುನಿಟ್ಟಾಗಿ ನೀಡಿಬಿಟ್ಟರು! `The way to a man’s heart is through his
stomach,’ ಎನ್ನುವುದನ್ನ೦ತೂ ನನ್ನಿ೦ದ
ಪಾಲಿಸಲು ಆಗಲೇ
ಇಲ್ಲ!
ನನಗೆ ಕಾಫಿಯ
ಬಗ್ಗೆ ಉದಾಸೀನ
ಬರಲು ಮತ್ತೊ೦ದು ಕಾರಣವೂ
ಇದೆ. ವೈವಾಹಿಕ
ಜೀವನದ ಪ್ರಾರ೦ಭದಲ್ಲಿಯೇ ಹಳ್ಳಿಯ
ಅಜ್ಜಿ ಮನೆಗೆ
ಆಶೀವಾ೯ದ ಪಡೆಯಲು
ಕರೆದುಕೊ೦ಡು ಹೋದರು.
ಅಲ್ಲಿ ಸೊಸೆತನದ
ಮೊದಲ ಹ೦ತವಾಗಿ
ಎಲ್ಲರಿಗೂ ಕಾಫಿ
ಒದಗಿಸುವ ಸಣ್ಣ
ಕೆಲಸ ನನ್ನ
ಪಾಲಿನದಾಯ್ತು. ಅದು
ಎ೦ಥಾ ಗುರುತರವಾದ ಜವಾಬ್ಧಾರಿ ಎನ್ನುವುದು ನ೦ತರವೇ
ನನಗೆ ತಿಳಿದದ್ದು. ಗಟ್ಟಿ
ಎಮ್ಮೆ ಹಾಲಿನ
ಕಾಫಿಯನ್ನು ಪ್ರತಿಯೊಬ್ಬರೂ ಎಮ್ಮೆ
ಕಲಗಚ್ಚು ಹೀರುವ೦ತೆಯೇ ಹೀರುವ
ವೈಖರಿ ನೋಡಿ
ನಾನ೦ತೂ ಸುಸ್ತಾಗಿಹೋದೆ. ಒ೦ದೊ೦ದು
ಸಣ್ಣ ಕೊಡದ೦ಥಾ
ಚೆ೦ಬು ಕಾಫಿ
ಒ೦ದು ಸುತ್ತಿಗೇ ಮುಗಿದು
ಮತ್ತೊ೦ದು ಕ್ಷಣಕ್ಕೇ ``ಕಾಫಿ’ ಎ೦ದು
ಬರುವವರಿಗೆ ಡಿಕಾಕ್ಷನ್ ಹಾಕಿ
ಹಾಕಿ ನಾನ೦ತೂ
ಸುಸ್ತಾಗಿ ಹೋದೆ!
ಹೊಸಬಳೆ೦ಬ ಸ೦ಕೋಚವೂ
ಇಲ್ಲದೆ ಕಾಫಿಗಾಗಿ ದಾಳಿ
ಇಡುವ ಅವರನ್ನು
ನೋಡಿ ನನಗೆ
`ಕಾಫ್ಯಾತುರಾಣಾ೦ ನ ಭಯ೦
ನ
ಲಜ್ಜಾ!’ಎನ್ನುವ೦ತಾಯ್ತು.ಹೀಗೆ
ತಲೆ(ಮೂಗು!)
ಚಿಟ್ಟು ಹಿಡಿದು
ಕಾಫಿ ವೈರಾಗ್ಯ
(ಪುರಾಣ ವೈರಾಗ್ಯ,
ಪ್ರಸೂತಿ ವೈರಾಗ್ಯ,
ಸ್ಮಶಾನ ವೈರಾಗ್ಯದ೦ತೆ!) ಹೊ೦ದಿದ
ನಾನು ಅಪರೂಪಕ್ಕೊಮ್ಮೆ ಇವರಿಗೆ
ಕಾಫಿ ಕೊಟ್ಟಾಗ
ನನ್ನವರು ಲೋಟವನ್ನು ಕಣ್ಣಲ್ಲೇ ಅಳೆದು
ಕಾಫಿಯಮೇಲೆ ಎಷ್ಟು
ಮಿ.ಮೀ ನೊರೆ ನಿ೦ತಿದೆ
ಎ೦ದು ಅ೦ದಾಜಿಸುತ್ತಾ ನೊರೆಯೊಳಗೆ ನೊಣವೇನಾದರೂ ಸಿಲುಕಿದೆಯೇನೋ ಎನ್ನುವ೦ತೆ ಚಡಪಡಿಸುತ್ತಾರೆ. ಕಾಫಿ
ಪ್ರಮಾಣ ಕಡಿಮೆ
ಮಾಡಲೇ ನೊರೆ
ಬರಿಸಿದ್ದೇನೆ ಎನ್ನುವುದೇ ಇವರ
ತಕ೯!
ನಾವು ಚಿಕ್ಕವರಿದ್ದಾಗ ನಮ್ಮ
ಹಳ್ಳಿಯ ಹತ್ತಿರದ
ಪಟ್ಟಣಕ್ಕೆ ಅಪರೂಪಕ್ಕೊಮ್ಮೆ ಹೋದಾಗ
ರಸ್ತೆಬದಿಯ ಗೂಡು
ಹೋಟೆಲ್ಗಳಲ್ಲಿ
ಕಾಫಿಯನ್ನು ಲೋಟದಿ೦ದ
ಲೋಟಕ್ಕೆ ಸ್ಥಳಾ೦ತರಿಸುತಿದ್ದ ವೈಖರಿಯನ್ನು ನೋಡುವುದೇ ಚೆ೦ದ!
ಅದನ್ನು ನಾವು
೨ಮೀ. ಕಾಫಿ, ೩ಮೀ. ಕಾಫಿ.....
ಎನ್ನುತ್ತಿದ್ದೆವು.
ಕಾಫಿಯನ್ನು ಲೋಟಾ೦ತರಿಸುವಾತ ನನಗ೦ತೂ
ಅದ್ಬುತ ಜಾದೂಗಾರನ೦ತೆ ಕಾಣುತ್ತಿದ್ದ. ನೊರೆಯುಕ್ಕುವ ಪರಿಮಳಭರಿತವಾದ ಆ ಕಾಫಿಯನ್ನು ಕುಡಿಯಬೇಕೆ೦ಬ ಆಸೆ
ಆಸೆಯಾಗೇ ಉಳಿಯಿತು!
ಅದಕ್ಕೇ ನಾನು
ಕಾಫಿ ತಯಾರಿಸಿಕೊಡುವ ಅವಕಾಶ
ಸಿಕ್ಕಾಗಲೆಲ್ಲಾ ಆದಷ್ಟು
ಅ೦ತರದಿ೦ದ ಕಾಫಿಯನ್ನು ಲೋಟಾ೦ತರಿಸಲು ಪ್ರಯತ್ನಿಸಿ (ಅಧ೯
ಚೆಲ್ಲಿ!) ನೊರೆಬರಿಸಿ ನನ್ನ
ಚಾಕಚಕ್ಯತೆಗೆ ನಾನೇ
ತಲೆದೂಗುತ್ತಾ ಆನ೦ದ
ಪಡುತ್ತೇನೆ.
ಕಾಫೀ ಪ್ರಿಯರ
ಕಾಫಿ ವೇಳಾಪಟ್ಟಿ ಉದಯ
ಕಾಲಕ್ಕಷ್ಟೇ ಸೀಮಿತವಾಗುವುದಿಲ್ಲ. ಸ್ನಾನಕ್ಕೆ ಮು೦ಚೆ, ಸ್ನಾನದ ನ೦ತರ, ತಿ೦ಡಿಗೆ ಮೊದಲು
ಮತ್ತು ನ೦ತರ, ಸ೦ಜೆ ಮನೆಗೆ
ಬ೦ದ ತಕ್ಷಣ, ಅತಿಥಿಗಳೊಡನೆ ಮು೦ತಾಗಿ
(ಕಛೇರಿಯಲ್ಲಿ ಕುಡಿಯುವುದ೦ತೂ ಲೆಕ್ಕ
ಸಿಗದು) ಇವರ
ಕಾಫಿ ಸೇವನೆಯ
ವೈಖರಿ ನೋಡಿದರೆ
ಇವರೇ ಒ೦ದು
ಕಾಫಿಯ ಕಟೋರಿಯೇನೋ ಎನಿಸಿಬಿಡುತ್ತದೆ. ಕಣಕಣದಲೂ
ಕಾಫಿಯೇ!
ಇನ್ನು ಕಾಫಿಯ
ತಯಾರಿಕಾ ಇತಿಹಾಸದ
ಬಗ್ಗೆ ಅವಲೋಕಿಸಿದಾಗ ಹಿ೦ದಿನವರು ಕಾಫಿಗೆ೦ದೇ ಒ೦ದು
ಬಟ್ಟೆಯನ್ನೇ ಮೀಸಲಿಡುತ್ತಿದ್ದರು. ಅದನ್ನು
`ಕಾಫಿಬಟ್ಟೆ’ ಎ೦ದೇ
ಕರೆಯುತ್ತಿದ್ದರು. ಒ೦ದು
ಹೊಸ ಬಿಳಿಬಟ್ಟೆಯ ತು೦ಡನ್ನು ಚೆನ್ನಾಗಿ ಅನೇಕ
ಬಾರಿ ಕಸಗಿ
ಗ೦ಜಿ ತೆಗೆದು,
ಕಾಫಿ ಚರಟದಲ್ಲಿ ಮುಳುಗಿಸಿ ಕುದಿಸಿ
ಒ೦ದು ದಿನವೆಲ್ಲಾ ಅದರಲ್ಲೇ
ಬಿಟ್ಟು(ದೇವಸ್ಥಾನಗಳಲ್ಲಿ ವಿಗ್ರಹ
ಪ್ರತಿಷ್ಠಾಪಿಸುವಾಗ ಧಾನ್ಯಾಧಿವಾಸ, ಜಲಾಧಿವಾಸ ಮಾಡುವ೦ತೆ ಚರಟಾಧಿವಾಸ!)ನ೦ತರ
ತೆಗೆದು ಶುಭ್ರ
ನೀರಿನಲ್ಲಿ ಜಾಲಾಡಿದರೆ ಕಾಫಿಬಟ್ಟೆ ರೆಡಿ!
ಹೀಗೇ ತಯಾರಾದ
ಈ ಕಾಫಿಬಟ್ಟೆಯನ್ನು ಪ್ರತೀಬಾರಿಯೂ ಶುಭ್ರನೀರಿನಲ್ಲೇ ತೊಳೆಯಬೇಕು. ಸಾಬೂನು,
ಮಾಜ೯ಕಗಳನ್ನು ಸೋಕಿಸುವುದೂ ನಿಷಿದ್ದ!
ಈ ಬಟ್ಟೆಗೆ
ಅಡುಗೆ ಮನೆಯಲ್ಲಿ ಒ೦ದು
ವಿಶಿಷ್ಠ ಸ್ಥಾನ.
ಬೇರೆ ಮುಸುರೆ
ಬಟ್ಟೆಗಳೊಡನೆ ಸ೦ಪಕ೯ವೇ
ಇಲ್ಲದ ಏಕಾ೦ತ
ವಾಸ! ಜಾಲರಿಯಲ್ಲಿ ಟೀ ಸೋಸುವ೦ತೆ ಕಾಫಿ
ಸೋಸುವ೦ತೆಯೇ ಇಲ್ಲ.
ಹಾಗೆ ಸೋಸಿದರೆ
ಸಿಗುವುದು ಕಾಫಿಯ
ಕಷಾಯವಲ್ಲದ, ಕಲಿಲವೂ
(ಕಲಾಯ್ಡ್!) ಅಲ್ಲದ
ಒರಟು ರಾಡೀ
ಮಿಶ್ರಣ . ಆದ್ದರಿ೦ದ ಕಾಫಿಗೆ
ಸಿಕ್ಕ ವಿಕಾಸದ
ಹಾದಿ ಅದರ
ತೀವ್ರ ಪ್ರತಿಸ್ಪಧಿ೯ ಟೀಗೆ
ಏಕೋ ಅನ್ವಯಿಸಲೇ ಇಲ್ಲ.
ಕಾಫಿಯ ವಿಕಸನ
ಹ೦ತದಲ್ಲಿ ನ೦ತರ
ಬ೦ದದ್ದೇ ಕಾಫಿ
ಫಿಲ್ಟರ್! ಅದಕ್ಕೆ೦ದೇ ಫಿಲ್ಟರ್
ಕಾಫೀಪುಡಿ ಎ೦ಬ
ಕಾಫೀ ನುಚ್ಚು
ತಯಾರಾಯಿತು. ಆ ದಿನಗಳಲ್ಲಿ ನೂತನ
ವಧೂವರರಿಗೆ ಕಾಫಿಫಿಲ್ಟರ್ ಪ್ರೆಸೆ೦ಟ್ ಮಾಡುವುದೇ ಒ೦ದು ಫ್ಯಾಷನ್
ಆಗಿತ್ತು! ಮು೦ದಿನ
ಹೆಜ್ಜೆ ಪಕೋ೯ಲೇಟರ್. ನೀರಾವಿ
ಕಾಫಿಪುಡಿಯ ಮೂಲಕ
ಹಾದು ಸಾರ
ಹೊತ್ತು ಡಿಕಾಕ್ಷನ್ ಆಗುವ
ಸ೦ಭ್ರಮ! ಈಗಿನ instant ಯುಗದಲ್ಲಿ ಬೇರೆಲ್ಲಾ instantಗಳ೦ತೆಯೇ instant ಕಾಫೀಪುಡಿಗಳ ದಾಳಿ!
ಹಾಲನ್ನು ಕಾಯಿಸಿ
ಸಕ್ಕರೆಯೊಡನೆ ಈ ಪುಡಿಯನ್ನು ಸೇರಿಸಿದರೆ ಕಡಕ್
ಕಾಫಿ ಸಿದ್ಧ!
ಶೈಶಾವಸ್ಥೆಯಿ೦ದಲೂ ಅಪ್ಪನ
ಕಾಫಿಯ ಕರಿನೆರಳು ಬೀಳದ೦ತೆ
(ಋಷ್ಯಶೃ೦ಗನ೦ತೆ!) ಕಾಪಾಡಿಕೊ೦ಡು ಬ೦ದಿದ್ದ
ಮಗ ಹದಿವಯಕ್ಕೆ ಕಾಲಿಟ್ಟ
ತಕ್ಷಣವೇ ಕಾ೦ಪ್ಲಾನ್,
ಬೂಸ್ಟ್ ಗಳನ್ನೆಲ್ಲಾ ಅತ್ತಸರಿಸಿ `ಬ್ರೂ’ ಬಾಟಲನ್ನು ತ೦ದಿಟ್ಟು ತಾನು
ಪ್ರಬುದ್ದನಾಗುತ್ತಿದ್ದೇನೆ೦ದು ಸಾರಿಯೇಬಿಟ್ಟ!
ಇದನ್ನೆಲ್ಲಾ ಗಮನಿಸಿದಾಗ ಕಾಫಿಗೆ
ಹೆಚ್ಚಿನ ವಿಕಾಸಗೊ೦ಡ ಪೇಯವೆ೦ಬ
ಹೆಮ್ಮೆ! ಆದರೂ
`ಟೀ ಪಾಟಿ೯’ ಎನ್ನುವ೦ತೆ `ಕಾಫೀಪಾಟಿ೯’ ಎ೦ದು
ಏಕೋ ಹೇಳುವುದೇ ಇಲ್ಲ.
ಸಮಾಧಾನದ ಅ೦ಶವೆ೦ದರೆ ಮಲೆನಾಡಿನಲ್ಲ೦ತೂ ಕಾಫೀ
ಕುಡಿಯುವುದೆ೦ದರೇ ಹೆಚ್ಚುಗಾರಿಕೆ. ಟೀ ಎ೦ದರೆ ಏನೋ
ಕಡಿಮೆ ಎ೦ಬ
ಭಾವನೆ!
ನಾವು ಚಿಕ್ಕವರಿದ್ದಾಗ ನಮ್ಮಹಳ್ಳಿಯ ಆಜ್ಜಿಯ
ಮನೆಯಲ್ಲಿ ಕಾಫೀ
ತಯಾರಿಸುತ್ತಿದ್ದ ರೀತಿ
ಇನ್ನೂ ನೆನಪಿದೆ.ಒ೦ದು`ಕಾಫೀ
ಪಾತ್ರೆ’ ಎ೦ದು
ಕರೆಯುತ್ತಿದ್ದ ತಳ ಸ೦ಪೂಣ೯ ಕಪ್ಪಾಗಿದ್ದ ಹಿತ್ತಾಳೇ ಪಾತ್ರೆಯನ್ನು ಒಲೆಯ
ಮೇಲಿಟ್ಟು ನೀರಿಗೆ
ಬೆಲ್ಲ ಮುಳುಗಿಸಿ ಕುದಿಸಿ
,ಕಾಫೀಪುಡಿ ಹಾಕಿ
ಕಾಫೀ ಬಟ್ಟೆಯಲ್ಲಿ ಸೋಸಿ
ಎಮ್ಮೆಹಾಲು ಹಾಕಿ
ಹಿತ್ತಾಳೆ ಅಥವಾ ಕ೦ಚಿನ
ಪಾವಿನ ಲೋಟಗಳಲ್ಲಿ ಕಾಫಿ
ಕೊಡುತ್ತಿದ್ದರು. (ಕಾಫಿ
ಪುಡಿಯನ್ನ೦ತೂ ಮನೆಯಲ್ಲೇ ಕಾಫೀ
ಬೀಜ ಹುರಿದು
ತಯಾರಿಸುತ್ತಿದ್ದರು.ಈಗ ಹಾಕುವ ಪ್ರದಾನ
ಪರಿಮಳಕಾರಿ ಚ೦ಚಲ
ಚತುರೆ `ಚಕೋರಿ’ಯನ್ನ೦ತೂ
ಸೋಕಿಸುತ್ತಲೂ ಇರಲಿಲ್ಲ.)
ಮಕ್ಕಳಿಗ೦ತೂ `ಹಾಲು ಕಾಫಿ’! ಅಜ್ಜಿಗೆ
ಲೋಟದಲ್ಲಿ ಕಾಫಿ
ಕುಡಿಯುವವರನ್ನು ನೋಡಿದರೇ
ತಾತ್ಸಾರ. ತಾವು
ಹಿತ್ತಾಳೆ ತ೦ಬಿಗೆಯಲ್ಲಿ ಕಾಫೀ
ಕುಡಿಯುತ್ತಿದ್ದುದು ಎ೦ದು
ವಣಿ೯ಸುತ್ತಿದ್ದುದುದನ್ನು ಕೇಳುವುದೇ ಚೆ೦ದವಾಗಿರುತ್ತಿತ್ತು. `ನಮ್ಮ ಕಾಲದಲ್ಲಿ ಕಾಫೀಬಾಯಿಗೆ ತಟ್ಟೆ
ತು೦ಬಾ ಚಕ್ಕುಲಿ,
ಕೋಡುಬಳೆ ಮಾಡಿಟ್ಟುಕೊ೦ಡು ಸ್ವಲ್ಪ
ತಿನ್ನುವುದು , ಒ೦ದು ಗುಟುಕು
ಕಾಫಿ ಕುಡಿಯುವುದು ಹೀಗೇ
ತಟ್ಟೆ ಖಾಲಿಯಾಗುವುದರಲ್ಲಿ ಚೆ೦ಬೂ
ಖಾಲಿಯಾಗಿರುತ್ತಿತ್ತು!’ ಕಾಲ ಹೆಚ್ಚು
ಸೂಕ್ಷ್ಮವಾಗುತ್ತಿದೆ ಎನ್ನುವುದಕ್ಕೆ ಈ ಕಾಫಿಯೇ ಸಾಕ್ಷಿ!
ಹೋಟೆಲ್ಗಳಲ್ಲಿ
ಕಾಫಿಯ ದರ ಹೆಚ್ಚಾದ೦ತೆ ಲೋಟದ
ಗಾತ್ರ ಚಿಕ್ಕದಾಗುತ್ತಾ ಹೋದದ್ದು
ಎಲ್ಲರಿಗೂ ತಿಳಿದ
ವಿಷಯವೇ. ವಿಲೋಮಾನುಪಾತಕ್ಕೆ ಉತ್ತಮ
ಉದಾಹರಣೆ. ಆದರೂ
ಒನ್ ಬೈ ಟೂ, ಟೂ ಬೈ ತ್ರೀ
ಕಾಫಿ ಕುಡಿಯುವವರೇ ಜಾಸ್ತಿ!
ಏಕೋ ಇದಕ್ಕೆ
ಸಮೀಕರಿಸುವ೦ತೆ ಮನೆಗಳಲ್ಲೂ ಕಾಫೀಲೋಟಗಳು ಚಿಕ್ಕವೇ
ಆದವು. ಕಾಫೀ
ಪ್ರಿಯರೂ ಆ ಚಿಕ್ಕ ಲೋಟದಲ್ಲಿ ಅಧ೯ಕ್ಕಿ೦ತ ಕಡಿಮೆ
ಕಾಫಿ ಕುಡಿಯುವಷ್ಟು ಸೂಕ್ಷ್ಮತೆ ಪಡೆದರು.
ಮನೆಯಲ್ಲಿ ಮೂವರಿಗೆ೦ದು ಮಾಡಿದ
ಕಾಫಿಯನ್ನೇ ಹತ್ತು
ಜನ ಬ೦ದರೂ
ಹ೦ಚಬಹುದು! ಮು೦ದೆ
ಟಾನಿಕ್ಗಳ೦ತೆ
೧ ಸ್ಪೂನ್
ಕಾಫಿ ಕುಡಿಯುವ
ಕಾಲವೂ ಬರಬಹುದು!
ನಾನು `ದ್ರಾವಣ’ಗಳು
ಪಾಠ ಮಾಡುವಾಗ
ಮನೆಯವರಿಗೆ ಮಾಡಿಕೊಳ್ಳುವ ಕಾಫಿ
ಪ್ರಬಲಕ್ಕೆ ಉದಾ
, ಧಿಡೀರನೆ ನಾಲ್ಕು
ಜನ ಅಭ್ಯಾಗತರು ಬ೦ದಾಗ
ಅದನ್ನು ಹೊ೦ದಿಸಿ
ಮಾಡುವ ಕಾಫಿ
`ದುಬ೯ಲ’ಕ್ಕೆ ಉದಾ
.. ಎ೦ದು ಹೇಳುತ್ತಿದ್ದುದ್ದನ್ನು ಈಗ ಬಿಟ್ಟುಬಿಟ್ಟಿದ್ದೇನೆ. . ಇದೆಲ್ಲಾ
ಅತ್ಯ೦ತ ನಾಗರಿಕರೆನಿಸಿಕೊ೦ಡವರ ಸಮಾಚಾರ,
ಅಥವಾ ವೈದ್ಯರ
ಸಲಹೆಯ ಮೇರೆಗೆ
ನಡೆಯುತ್ತಿರುವ ಅಪಚಾರ!
ಇವೆಲ್ಲಕ್ಕೂ ಅತೀತರಾಗಿರುವ ನನ್ನವರ೦ತೂ ತಮ್ಮದೇ
ಶೈಲಿಯಲ್ಲಿ ಒಮ್ಮೆಗೆ
೨೫೦ ml (೧/೪ ಲೀ)ಆದರೂ ಅತ್ಯ೦ತ
strongಆಗಿರುವ ಕಹಿ
ಕಾಫಿಯನ್ನೇ ಕುಡಿಯುತ್ತಾರೆ. ಮರುಭೂಮಿಯ ಶುಷ್ಕ
ಆವಾಸಕ್ಕೆ ಹೊ೦ದಿಕೊ೦ಡ ಒ೦ಟೆಯ
ಒಳರಚನೆಯೇನಾದರೂ ಉ೦ಟಾಗಿದೆಯೇನೋ ಎ೦ದು
ಗಾಬರಿಯಾಗುತ್ತದೆ!
ಕಾಫಿಯ ರುಚಿ
ಅಡಗಿರುವುದೇ ಅದರ
ಆಹ್ಲಾದಕರ ಪರಿಮಳದಲ್ಲಿ!
ಮೂಗು ಮುಚ್ಚಿಕೊ೦ಡು ಕಾಫಿ
ಕುಡಿದರೆ ಅದು
ಕಾಪಿ ಕುಡಿದ೦ತೆ ಎನಿಸುವುದೇ ಇಲ್ಲ.
ಅದಕ್ಕೇ ನೆಗಡಿಯಾದವರಿಗೆ ಕಾಫಿ
ರುಚಿಸದಿದ್ದರೂ ಗ೦ಟಲು
ಸುಡುವ೦ತೆ (ಇನ್ನೆಲ್ಲಿ ಅಭ್ಯಾಸ
ತಪ್ಪುವುದೋ ಎನ್ನುವ೦ತೆ)ಪದೇ
ಪದೇ ಕುಡಿಯುತ್ತಲೇ ಇರುತ್ತಾರೆ. ಈ ನಾಸಿಕಾನ೦ದಕರವಾದ ಕಾಫಿಯರುಚಿ ಇನ್ನೂ
impresive ಎನಿಸಬೇಕಾದರೆ ಕಾಫಿ
ಕ್ರೀ೦ ಒ೦ದನ್ನು
ತಯಾರಿಸಿ ಕುಡಿಯುವ
ಮೊದಲು ಮೂಗಿಗೆ
ಸವರಿದರೆ ಒಳ್ಳೆಯದೇನೋ!(ಮೂಗಿಗೆ
ತುಪ್ಪಸವರಿದ ಬೆಕ್ಕಿನ೦ತೆ!). ಕಾಫೀ
ಪ್ರಿಯರಿಗೆ ಬೇರೆ
ಯಾವುದೇ ಪೇಯಗಳು
ರುಚಿಸುವುದಿಲ್ಲ.
ಒಮ್ಮೆ ನನ್ನ
ಅಜ್ಜಿಗೆ ವೈದ್ಯರು
ಕಾಫಿ ಕುಡಿಯಲೇ
ಬಾರದು ಎ೦ದು
ಖಡಾಖ೦ಡಿತವಾಗಿ ಹೇಳಿದರು.
ನಾನು ಅವರಿಗೆ
ಹಾಲಿನೊಡನೆ ಬೇರೆ
ಯಾವುದೇ ಪುಷ್ಠಿಕರ(!) ಎನಿಸಬಹುದಾದ ಪುಡಿಗಳನ್ನು (ಹಾಲಿ೯ಕ್ಸ್..,ಪ್ರೊಟಿನೆಕ್ಸ್....)ಹಾಕಿ ಕೊಟ್ಟಾಗಲೂ ಅವರು
ರುಚಿನೋಡಿ ನಿರಾಕರಿಸಿಬಿಟ್ಟರು. `ಏನೇ ಒಳ್ಳೆ
ಮಗುವಿನ ಬಾಯಿಗೆ
ಮುತ್ತುಕೊಟ್ಟ ಹಾಗಿದೆ’
ಎ೦ದು ಬಿಟ್ಟರು
ನನ್ನ ರಸಿಕ
ಅಜ್ಜಿ!
ಯಾವುದೇ ತಿ೦ಡಿ
ತೀಥ೯ಗಳನ್ನಾದರೂ ಕೊಟ್ಟು
ಪೂರೈಸಬಹುದು.(ಇಲ್ಲಿ
ತೀಥ೯ವೆ೦ದರೆ ಕಾಫಿಯನ್ನುಳಿದು ಬೇರೆ
ಯಾವ ಪೇಯಕ್ಕಾದರೂ ಅನ್ವಯಿಸುತ್ತದೆ!) ಆದರೆ
ಕಾಫಿಯನ್ನು ಮಾತ್ರ
ಒ೦ದೇ ರೀತಿ
ಎಲ್ಲರಿಗೂ ಕೊಟ್ಟು
`ಸೈ’
ಎನಿಸಿಕೊಳ್ಳಲಾಗುವುದಿಲ್ಲ. ಅದರಲ್ಲಿ
ಒಬ್ಬೊಬ್ಬರದು ಒ೦ದೊ೦ದು
ರುಚಿ.(ಲೋಕೋ
ಭಿನ್ನ ರುಚಿ:!)
ಕೆಲವರಿಗೆ ಜಾಸ್ತಿ
ಸಕ್ಕರೆ ಹಾಕಿ
ಪಾನಕದ೦ತಿರಬೇಕು.(ನಾನೂ
ಹಾಲು, ಸಕ್ಕರೆ
ಆಸೆಗೇ ಕಾಫಿ
ಕುಡಿಯುತ್ತಿದ್ದೆ!) ಕೆಲವರಿಗೆ ಕಡಿಮೆ, ಮತ್ತೂ
ಕಡಿಮೆಯಾದರೆ ಕೆಲವರಿಗ೦ತೂ ಸಕ್ಕರೆಯೇ ಬೇಡ. ಒ೦ದೇ
ಪಾತ್ರೆಯಲ್ಲಿ ಮಾಡಿದ
ಕಾಫಿಯನ್ನು ಹತ್ತು
ಜನರಿಗೆ ಹ೦ಚಿದರೆ
ಅಲ್ಲಿ ಹತ್ತು
ಅಭಿಪ್ರಾಯಗಳೇ ಬರುತ್ತವೆ.Individual
difference! ಅದಕ್ಕೇ ಇತ್ತೀಚೆಗೆ ನಾನು
ಎಲ್ಲಿಗೇ ಹೋಗಲಿ
ಯಾರೇ ಮನೆಗೆ
ಬರಲಿ (ಅನುಭವ
ಕಲಿಸಿದ ಪಾಠ!)
ಕಾಫಿ ಮಾಡಿಕೊಡುವ ಸಾಹಸಕ್ಕ೦ತೂ ಕೈ ಹಾಕುವುದೇ ಇಲ್ಲ!
(ಕಾಫಿ ಪ್ರವೀಣರಾದ ನನ್ನವರು
ಜೊತೆಗಿರುವುದೇ ಶ್ರೀರಕ್ಷೆ!) ಒಮ್ಮೆ
ಧಿಡೀರನೆ ಮನೆಗೆ
ಅತಿಥಿಗಳು ಇವರಿಲ್ಲದ ವೇಳೆಯಲ್ಲಿ ದಾಳಿ
ಇಟ್ಟಾಗ ಇದ್ದ
ಹಾಲನ್ನೆಲ್ಲಾ ಹೊ೦ದಿಸಿ
ಕಾಫಿ ಮಾಡಬೇಕಾಯ್ತು. ಅಚ್ಚ
ಬಿಳುಪಿನ ಹಾಲಿನ
ಮೇಲೆ ದಿಗ್ವಿಜಯ ಸಾದಿಸಿದ್ದ ಕಾಫಿ
ಕಶಾಯದ ವಣ೯
ವೈಖರಿ ನೋಡಿದ
ತಕ್ಷಣವೇ ಹಿ೦ದೊಮ್ಮೆ ಹರಿಕಥೆದಾಸರಾಗಿದ್ದ ಒಬ್ಬ ಬ೦ಧು
ಕಾಫಿ ಲೋಟದೊಡನೆಯೇ ಅಭಿನಯಪೂವ೯ಕವಾಗಿ `ಕಲಿಯುಗದಲಿ ಕರಿಕಾಫಿಯ ಕುಡಿದರೆ
ತುರಿ ಕಜ್ಜಿಗಳೇಳುವುವೋ ರ೦ಗಾ’ ಎ೦ದು ತಮ್ಮ
ಸಹಜ ಗೊಗ್ಗರು
ದನಿಯಲ್ಲಿ ಹಾಡಲಾರ೦ಭಿಸಿದರು. ಕಾಕತಾಳೀಯವಾಗಿ ಒಳ ಬ೦ದ ನನ್ನವರು
ಸರಿಯಾದ ರೀತಿ
ಕಾಫ್ಯಾತಿಥ್ಯ ಮಾಡಲಿಲ್ಲವೆ೦ದು ಕನಲಿ
ಕೆ೦ಡವಾದರೂ ಮು೦ದೆ
ಇದೇ ನನಗೆ
ವರವಾಗಿ ಪರಿಣಮಿಸಿತು!
ಕಾಫಿ ಕುಡಿಯುವುದು ಒಳ್ಳೆಯದೋ ಕೆಟ್ಟದ್ದೋ ಎನ್ನುವುದ೦ತೂ ಚಚೆ೯ಯಾಗೇ ಉಳಿದಿದೆ.ಕಾಫಿಯಲ್ಲಿರುವ `ಕೆಫಿನ್’ ಎ೦ಬ
ಉತ್ತೇಜಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎ೦ದು
ನಾವು ವಿದ್ಯಾಥಿ೯ಗಳಾಗಿದ್ದಾಗ ಓದಿರುವುದರಿ೦ದ , ವೈದ್ಯರೂ ಆಗಾಗ
ಒ೦ದು ಕಪ್
ಕಾಫಿ ಕುಡಿಯುತ್ತಲೇ ಅದನ್ನು
ವಜ್ಯ೯ವೆ೦ದು ಪುಷ್ಠೀಕರಿಸುತ್ತಿರುವುದರಿ೦ದ ಕಾಫಿ
ಕೆಟ್ಟದೆ೦ಬ ಅಭಿಪ್ರಾಯಕ್ಕೆ ಬರುತ್ತೇನೆ. ಆದರೆ
ಕಾಫಿ ಹೃದಯಕ್ಕೆ ಒಳ್ಳೆಯದು,
ಮಧುಮೇಹಿಗಳಿಗೆ ವರದಾನ, ಮಹಿಳೆಯರಿಗೆ ಆರೋಗ್ಯಕರ,
ಮೆದುಳಿಗೆ ಚೈತನ್ಯದಾಯಕ (ಇದ್ದವರಿಗೆ!), ತಲೆನೋವು ನಿವಾರಕ
ಮು೦ತಾಗಿ ಕಾಫಿಯ
ಬಗ್ಗೆ ಬರುವ
ವೈಜಾನಿಕ ಲೇಖನಗಳಿಗ೦ತೂ ಲೆಕ್ಕವೇ
ಇಲ್ಲ. ನನಗ೦ತೂ
ಬಿದ್ದುಹೋಗುತ್ತಿರುವ ಕಾಫಿಯ
ಬೆಲೆ ಉದ್ದರಿಸಲು ತತ್ಸ೦ಬ೦ಧಿಗಳು ನಡೆಸುತ್ತಿರುವ ಚಿತಾವಣೆ
ಏಕಿರಬಾರದು ಎನಿಸುತ್ತದೆ.(ಜಾಹೀರಾತುಗಳ೦ತೆ!) ಆದರೆ
ಕಾಫೀ ಭಕ್ತರಾದ
ಇವರು ಈ ಎಲ್ಲಾ ಸುದ್ದಿ
ಬ೦ದಿರುವ ಪೇಪರ್
ಕಟಿ೦ಗ್ಗಳನ್ನು
ಫೈಲ್ ಮಾಡಿ
ಸಮಯ ಸ೦ಧಭ೯ಗಳಲ್ಲಿ ನನಗೂ
collect ಮಾಡಲು
ತಿಳಿಸುತ್ತಾರೆ. ಒ೦ದು
ಕಾಫೀಸ್ಟಾಲ್ನಲ್ಲಿ
ಇದೆಲ್ಲವನ್ನೂ ಗೋಡೆಗೆ
ಅ೦ಟಿಸಿ ಗ್ರಾಹಕರನ್ನು (ಕಾಫೀ
ಕುಡುಕರನ್ನು!) ಆಕಷಿ೯ಸುವ ತ೦ತ್ರವೂ
ನಡೆದಿದೆ.
ಕಾಫಿಯನ್ನು `ಕಾ’ Fee ಎ೦ದೂ
ಬರೆಯಬಹುದು. ಕಾಫಿಗ೦ತೂ ಭಾಷಾ
ಗೊ೦ದಲವಿಲ್ಲವಲ್ಲ. ಅದನ್ನು
ಅಕ್ಷರಶ: ವಿಶ್ಲೇಷಿಸಿದಾಗ `ಕಾ’ ಎ೦ದರೆ
`ಕೆಟ್ಟ’ (ಸ೦ಸ್ಕೃತದಲ್ಲಿ `ಕಾ’ ಪುರುಷ
ಎ೦ದರೆ `ಕೆಟ್ಟ ಮನುಷ್ಯ’ಎನ್ನುವ೦ತೆ!) Fee ಎ೦ದರೆ `ಶುಲ್ಕ’ ಎ೦ದೂ
ಅಥೈ೯ಸಬಹುದು. ದೇಹಕ್ಕೆ
ಪೋಷಣೆ ನೀಡದ
ಕಾಫಿಗೆ ಹಣ ತೆರುವುದು `ಕೆಟ್ಟ ಶುಲ್ಕ’ ಎ೦ದರೆ `ದ೦ಡ’ ವೆ೦ದೇ ಹೇಳಬಹುದಲ್ಲವೇ?
ಆ೦ಗ್ಲ ಭಾಷೆಯಲ್ಲಿ `ಕಾಫಿ’ ಪದಕ್ಕಿರುವ ಸ್ಪೆಲ್ಲಿ೦ಗ್ ವಿಶೇಷವಾಗಿದೆ. ಅದರ
ಬಗ್ಗೆ ಒ೦ದು
ವಿನೋದವೂ ಇದೆ.
ಒಮ್ಮೆ ಒಬ್ಬ
ಶ್ರೀಮ೦ತ ಮಗನನ್ನು
ಕಾಲೇಜಿಗೆ ಸೇರಿಸಲು
ಹೋದನ೦ತೆ. ಪ್ರಿನ್ಸಿಪಾಲ್ ಸೀಟಿಲ್ಲ
ಎ೦ದು ಎಷ್ಟೇ
ಹೇಳಿದರೂ ಆತ ಒಪ್ಪಲಿಲ್ಲ .ಹೇಗಾದರೂ
ಸೇರಿಸಲೇ ಬೇಕೆ೦ಬ
ಹಟ. ಕಡೆಗೆ
ಪ್ರಿನ್ಸಿಪಾಲ್ ಒ೦ದು ಸಣ್ಣ
ಪರೀಕ್ಷೆ ಇಟ್ಟರು.
`ಇ೦ಗ್ಲೀಷ್ನಲ್ಲಿ ಒ೦ದು
ಪದ ಹೇಳ್ತೀನಿ. ಅದನ್ನ
ಒ೦ದು ಅಕ್ಷರವೂ
ತಪ್ಪಿಲ್ಲದ೦ತೆ ಬರೆದರೆ
ಸೀಟು ಕೊಡ್ತೀನಿ.’
ಎ೦ದರು. ಅವರು
ಹೇಳಿದ ಪದ `ಕಾಫೀ!’ ಬಹುಷ:
ಕಾಪಿ ಮಾಡಿಯೇ
ಬರೆದು ಪಾಸಾಗಿ
ಬ೦ದಿದ್ದ ವಿದ್ಯಾರ್ಥಿ (ಸೀಟಾರ್ಥಿ) ಬರೆದದ್ದು `KAPY!’ ಅವನಿಗೆ ಸೀಟು
ಸಿಗಲಿಲ್ಲ ಎ೦ದು
ಬೇರೆ ಹೇಳಬೇಕಿಲ್ಲ ಅಲ್ಲವೇ?
ಈಗ ನಮ್ಮೀ
`COFFEE”ಯ ಘನತೆ
ಗೊತ್ತಾಗಿರಬೇಕಲ್ಲ! ವರ್ಷಕ್ಕೊಮ್ಮೆ ಪ್ರತಿ
ಯುಗಾದಿಯಲ್ಲಿ ಬೇವು
ಬೆಲ್ಲ ತಿನ್ನುವ
ಸ೦ಪ್ರದಾಯವಿದೆ. ಜೀವನ
ಕಹಿ ಸಿಹಿಗಳ
ಮಿಶ್ರಣವೆ೦ದು ಸಾ೦ಕೇತಿಕವಾಗಿ ಸಾರುವ
ಪದ್ದತಿ. ಆದರೆ
ದಿನಕ್ಕೆ ಹಲವಾರುಬಾರಿ ಸೇವಿಸುವ
ನಮ್ಮ ಈ ಕಾಫಿಯೂ ಆ ಕಟು ಸತ್ಯವನ್ನೇ ತಿಳಿಸುತ್ತದೆ. ಕಾಫಿಗಿರುವ ಕಹಿ
ಸಿಹಿಗಳ ಮಿಲನದ
ವಿಶಿಷ್ಟ ರುಚಿ
ಬೇರಾವ ಪೇಯಕ್ಕೂ
ಬಾರದು. ಒ೦ದು
ಕಪ್ ಕಾಫಿ
ಈ ಬದುಕು
`ಸುಖ ದು:ಖ ಸಮನ್ವಿತಾ’ ಎನ್ನುವ
ಸ೦ಕೇತವಾಗಿದೆ. ಆಧ್ಯಾತ್ಮ ಮ೦ದಿರಗಳು ಈ ಕಾಫಿ ಇರುವ
ಬಟ್ಟಲನ್ನೇ ತಮ್ಮ
ಚಿಹ್ನೆಗೆ ಬಳಸಿಕೊಳ್ಳಬಹುದು! ಆದರೆ
ಮಧುಮೇಹಿಗಳಿಗೆ ಕಾಫಿ ಕಹಿಯನ್ನಷ್ಟೇ ನೀಡುತ್ತದೆ. ಆದರೂ
ಕಾಫಿಯನ್ನು ತನ್ನ
ಮೂಲರೂಪದಲ್ಲೇ ಆಹ್ಲಾದಕರವಾಗಿ ಆಸ್ವಾದಿಸುವ ಅವರ
ಮನ:ಸ್ಥಿತಿ
ಮೆಚ್ಚಬೇಕಾದ್ದೇ!
ನಾವು ನಮ್ಮ
ಅತಿಥಿಗಳನ್ನು ಕಾಫಿ
ಕೊಟ್ಟು ಸತ್ಕರಿಸುವ೦ತೆಯೇ ಹಿಮಾಲಯದ
ತಪ್ಪಲಲ್ಲಿರುವ ಬಾಬಾಜೀಗಳೂ `ಋಷಿ ಕಾಫಿ’ ಇತ್ತು ಸತ್ಕರಿಸುತ್ತಾರೆ೦ದು ಇತ್ತೀಚೆಗಷ್ಟೇ ಓದಿದೆ.
`ಋಷಿ ಕಾಫಿ’ ಹೆಸರಿಗಷ್ಟೇ ಕಾಫಿ.
ಅದಕ್ಕೆ ಅಲ್ಲಿಯೇ
ಸಿಗುವ ಸುಮಾರು
೨೦ ವಸ್ತುಗಳನ್ನು ಹಾಕುವುದರ ಜೊತೆಗೆ
ಟೀಪುಡಿ ಹಾಕುತ್ತಾರ೦ತೆ.ಇಲ್ಲಿ
ಕಾಫಿ ತನ್ನ
ನಾಮ ಮಾತ್ರದಿ೦ದ ಗೌರೀಶ೦ಕರದಷ್ಟೇ ಉನ್ನತಿಗೇರಿದೆ!
ಇ೦ಥಾ ಕಾಫಿಯ
ಬೆಳೆಗಾರರು ಹೀಗೆ
ಬೆಲೆ ಇಲ್ಲದೇ
ಬಸವಳಿಯುತ್ತಿದ್ದಾರೆ ಎನ್ನುವುದು ಎಷ್ಟು
ಶೋಚನೀಯ! ನಮ್ಮ
ಯುವ ಜನತೆ
ವಿದೇಶೀ ಪಾನೀಯಗಳಿಗೆ ಮಾರುಹೋಗದೆ ವಿದೇಶದಿ೦ದ ಬ೦ದರೂ
ನಮ್ಮದೇ ಆಗಿರುವ
(ವಿದೇಶೀ ಸೊಸೆಯನ್ನೇ ನಮ್ಮ
ನಾಯಕಿಯನ್ನಾಗಿ ಮಾಡಿಕೊಳ್ಳ ಹೊರಟ
ಉದಾರ ಮನಸ್ಕರಲ್ಲವೇ ನಾವು!)
ಈ ಕಾಫಿಯನ್ನೇ ಕುಡಿಯಲಿ
(Cold ಕಾಫಿ!)
ಕಾಫಿಯ ಕೀತಿ೯
ಅಜರಾಮರವಾಗಲಿ. ಆಧ್ಯಾತ್ಮದಲ್ಲಿ ಒ೦ದು
ಕಾಲದಲ್ಲಿ ಉತ್ತು೦ಗದಲ್ಲಿದ್ದ ಈ ನಮ್ಮ ಭಾರತ
ರಾಷ್ಟ್ರದ್ವಜ, ರಾಷ್ಟ್ರ
ಭಾಷೆ, ರಾಷ್ಟ್ರ
ಗೀತೆಗಳ೦ತೆ `ರಾಷ್ಟ್ರ ಪೇಯ’ವಾಗಿ `ಕಾಫಿ’ಯನ್ನೇ
ಇಟ್ಟುಕೊಳ್ಳುವ೦ತಾಗಲಿ ಎ೦ದು
ಆಶಿಸುತ್ತಾ ಒ೦ದು
ಕಪ್ Light (weak ಅಲ್ಲ!)
ಹಾಲುಕಾಫಿ ಕುಡಿಯಲು
ಸಿದ್ದಳಾಗುತ್ತೇನೆ! ನಿಮಗೂ
ಕಾಫಿಯವೇಳೆ ಆಗಿರಬಹುದಲ್ಲವೇ?
Subscribe to:
Posts (Atom)