ದು:ಖ-ಹೆಜ್ಜೆಗೆ
ಅಡ್ಡವಾಗುವ
ಬಂಡೆ
ಸುಖ-ಪಾದಕ್ಕೆ
ತಂಪೆರೆದು
ಸಾಗುವ
ಸಲಿಲ
ಶ್ರಮವಹಿಸಿ
ಬಂಡೆ
ಸರಿಸಿದಾಗ
ಪಥ ನಿಚ್ಚಳ
ಹರಿದು
ಸಾಗುವ
ಜಲವೋ
ಹಿಡಿಯಲಾಗದಷ್ಟು
ಚಂಚಲ!
ಸುಖದ ಹಿಂದೆ
ದು:ಖವೋ
ದು:ಖದ ಹಿಂದೆ
ಸುಖವೋ
ತಿಳಿಯಲು
ಬೆನ್ನಟ್ಟಿದೆ
ಓಡಿದಷ್ಟೂ
ಮುಗಿಯದ ಪಥ
ವೃತ್ತಾಕಾರವಾಗಿದೆ!
ತುಂಬಿ
ಉಕ್ಕೇರುವ
ದು:ಖವ
ಹೊರಚಲ್ಲ
ಬಯಸಿ
ಆಗಬೇಕೆಂದಿದ್ದೆ
ನಿರಾಳ
ಸುತ್ತಿನವರ
ಸಲಹೆಗಳ
ಕೋಟೆ
ಹೆಚ್ಚಿಸುತ್ತಿದೆ
ಅದರ ಆಳ!
ಹೊರಗಿನ
ಸಂತಸ
ಒಳಗಿನ
ಆನಂದದೊಡನೆ
ಸೇರಿ
ಉಕ್ಕೇರಿ
ಸುತ್ತಲೂ ಪಸರಿಸಿ
ಮೂಸೆಯ
ಹಗುರಗೊಳಿಸಲಿ
ಹೊರಗಿನ ದ:ಖ
ಒಳಗುಳಿದ
ಪಾಕದೊಡನೆ
ಬೆರೆತು
ಇಂಗಿ
ಮೂಸೆಯ
ಗಟ್ಟಿಗೊಳಿಸಲಿ!
(ಮನದ ಅ೦ಗಳದಿ ............... ಯಲ್ಲಿ `ಸುಖ-ದು:ಖ' ಬರೆದ ನ೦ತರ ಈ ಕವನವನ್ನು ಹಾಕಬೆಕೆ೦ದಿದ್ದೆ. ಆದರೆ ನನ್ನ ಪಿ.ಸಿ.ತೊ೦ದರೆಯಿ೦ದ ಆಗಿರಲಿಲ್ಲ. ಈಗ ನಿಮ್ಮ ಮು೦ದಿದೆ.)
ಸುಂದರ ಕವನ.ಅಭಿನಂದನೆಗಳು ಮೇಡಂ.ಬ್ಲಾಗಿಗೆ ಬನ್ನಿ.ನಮಸ್ಕಾರ.
ReplyDeleteಸುಖ ದುಃಖಗಳ ಆವರ್ತನವನ್ನು ಚೆನ್ನಾಗಿ ತಿಳಿಸಿರುವಿರಿ. ಬಾಳು ಎನ್ನುವ ನಾಣ್ಯದ ಎರಡು ಮುಖಗಳು ಈ ಸುಖ ದುಃಖಗಳು ಎನ್ನಬೇಕೆನೊ? ಸೊಗಸಾದ ಕವನ.
ReplyDeleteಚಿಕ್ಕ-ಚಿಕ್ಕ ಸಾಲುಗಳ ಮಧ್ಯೆ ವಿಶಾಲ ಅರ್ಥಗಳನ್ನು ಮೂಡಿಸಿದ್ದೀರಿ.. ಚೆನ್ನಾಗಿದೆ.
ReplyDeleteಚಕ್ರವತ್ ಪರಿವರ್ಥಂತೆ ದುಃಖಾನಿ ಚ ಸುಃಖಾನಿ ಎಂಬ ಸುಭಾಷಿತದ ಮಾತು ನೆನಪಾಯ್ತು ನಿಮ್ಮ ಕವನ ಓದಿ.
ReplyDeleteವಂದನೆಗಳು.
prabhaamaniyavare,sukha dukkhkke naandi,dukkha sukhakke naandi.eradannu samaanavaagi svikarisuvagina anubhava, vishishtavaada svaadavulla haagalakaayi gojjina savyante.kavanadalli chennagi bidisiddira.dhanyavaadagalu.
ReplyDeleteಪ್ರತಿ ಕವನದ ಕೊನೆಯಲ್ಲಿ ಉತ್ತಮ ಪದಗಳ ಬಳಕೆ ಸುಂದರವಾಗಿದೆ..
ReplyDelete@ ಸುನಾಥ್ ರವರೆ,
ReplyDelete`ಸುಖ ದುಃಖಗಳು ಬಾಳು ಎನ್ನುವ ನಾಣ್ಯದ ಎರಡು ಮುಖಗಳು' ಎಂಬ ಸು೦ದರ ಉಕ್ತಿಯೊ೦ದಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ವ೦ದನೆಗಳು.
@ ಡಾ. ಕೃಷ್ಣಮೂರ್ತಿಯವರೇ,
ReplyDeleteಆತ್ಮೀಯವಾಗಿ ಪ್ರತಿಕ್ರಿಯಿಸಿ, ಶುಭ ಹಾರೈಸಿದ್ದೀರಿ ಸರ್, ಧನ್ಯವಾದಗಳು ಸರ್.
@ ಪ್ರದೀಪ್ ರವರೆ,
ReplyDeleteನನ್ನ ಕವನದ ಅರ್ಥ ವೈಶಾಲ್ಯತೆಯನ್ನು ಮೆಚ್ಚಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.
@ ಸಾನ್ವಿಯ ತ೦ದೆಯವರೇ,
ReplyDeleteಸು೦ದರ ಸುಭಾಷಿತದೊ೦ದಿಗೆ ನನ್ನ ಕವನವನ್ನು ಮೆಚ್ಚಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ವ೦ದನೆಗಳು.
@ ಕಲಾವತಿಯವರೆ,
ReplyDeleteವಿಶಿಷ್ಟವಾದ ಸ್ವಾದವುಳ್ಳ ಹಾಗಲಕಾಯಿ ಗೊಜ್ಜನ್ನು ನೆನಪಿಸಿ ಬಾಯಲ್ಲಿ ನೀರೂರಿಸಿದ್ದೀರಿ! ಉತ್ತಮ ಉಪಮೆಯೊ೦ದಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದಕ್ಕಾಗಿ ಧನ್ಯವಾದಗಳು.
@ ಗುರುಪ್ರಸಾದ್ ರವರೆ,
ReplyDeleteಕವನದ ಪದ ಸೌ೦ದರ್ಯವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
tilipadagala sundara kavana.
ReplyDelete