Wednesday, November 30, 2011

ಜಳ್ಳು

ಎ೦ದೋ ಥಟ್ಟನೆ

ಹೊಳೆದು

ತಲೆಯಲ್ಲೇ

ಮೊರೆದು

ಮೆರೆದು

ಅಳಿದು ಹೋಗುವ

ಭಾವಗಳಿಗೆ

ಭಾಷೆಯೇ ಇಲ್ಲ

ದಟ್ಟ ಕತ್ತಲಿನ

ನಟ್ಟ ನಡುರಾತ್ರಿಯಲಿ

ಕನಸುಗಳೊಳಗಿನ

ಕನಸಾಗಿ

ರೂಪುಗೊಳ್ಳುತ್ತಾ...

ಕೈಗೆಟುಕದೆ

ಕಣ್ಣಾ ಮುಚ್ಚಾಲೆಯಾಡಿ

ಇರುಳಿನಲ್ಲೇ

ಲಯವಾಗುವ

ಭಾವನೆಗಳಿಗೆ

ಬಣ್ಣಗಳಿಲ್ಲ

ಹೊ೦ದೇ ತೀರುವೆನೆ೦ಬ

ಛಲದಲ್ಲಿ

ಶಿರವನ್ನೆಲ್ಲಾ

ಜಾಲಾಡಿ ಹೆಕ್ಕಿ

ಆತುರಾತುರದಲ್ಲಿ ಕಕ್ಕಿ

ಬಿಡುವ

ಅಕ್ಷರ ಸಮೂಹಗಳೇಕೋ

ಸ್ಪಷ್ಟವೆನಿಸುವುದಿಲ್ಲ

ಅಲ್ಲೇ ಮಸ್ತಕದಲ್ಲೇ ಮಥಿಸಿ

ಮರೆಯಾದುವುಗಳೇ

ಗಟ್ಟಿಕಾಳು

ಪುಸ್ತಕಕ್ಕಿಳಿದಿರುವ

ಅಪಕ್ವಗಳೆಲ್ಲಾ

ಜಳ್ಳು!

15 comments:

  1. sundara shabdagaLa jote aaTa aaDiddiraa...

    chennaagide...

    ReplyDelete
  2. ನಿಮ್ಮ "ಜಳ್ಳು" ನನಗೆ ಹಿಡಿಸಿತು.
    ಅಳಿದು ಹೋಗುವ
    ಭಾವಗಳಿಗೆ
    ಭಾಷೆಯೇ ಇಲ್ಲ (ಭಾಷೆ ಬೇಕಿಲ್ಲ !)

    ಲಯವಾಗುವ
    ಭಾವನೆಗಳಿಗೆ
    ಬಣ್ಣಗಳಿಲ್ಲ (ಬಣ್ಣ ಹಾಕಲ್ಲ!)


    ಆತುರಾತುರದಲ್ಲಿ ಕಕ್ಕಿ
    ಬಿಡುವ
    ಅಕ್ಷರ ಸಮೂಹಗಳೇಕೋ (ಶಬ್ದಜಾಲಗಳೆಂದೂ)
    ಸ್ಪಷ್ಟವೆನಿಸುವುದಿಲ್ಲ (ಬದ್ಧ ವಾಗಲ್ಲ!)

    ಹೀಗೆ ನಾನು ತಿದ್ದಲು ಬಯಸಿದ್ದೇನೆ... ನೀವು ತಪ್ಪಾಗಿ ಭಾವಿಸಬೇಡಿ..
    ನಿಮ್ಮ ಬರಹಗಳು ನಮಗೆ ಇಷ್ಟ...

    ReplyDelete
  3. ಮೇಡಂ, ಭಾವಾಭಿವ್ಯಕ್ತಿ ಚೆನ್ನಾಗಿದೆ.

    ReplyDelete
  4. ಚೆನ್ನಾಗಿದೆ ಮೇಡಂ.
    ಬಹುಶ, ಮಥಿಸಿದ ಭಾವ ಅಕ್ಷರದಲ್ಲಿ ಮೂಡುವುದು
    ಕೆಲವರಿಗೆ ಕೆಲ ಸಂಧರ್ಭಗಳಲ್ಲಿ ಮಾತ್ರ ಸಾಧ್ಯ.
    ಸ್ವರ್ಣ

    ReplyDelete
  5. ಗಟ್ಟಿ,ಜಳ್ಳುಗಳ ಜಿಜ್ಞಾಸೆ ತುಂಬ ಚೆನ್ನಾಗಿದೆ, ಪ್ರಭಾಮಣಿಯವರೆ. ನಿಮ್ಮ ಕವನಗಳನ್ನು ಗಟ್ಟಿಕಾಳುಗಳೆಂದು ನಿಶ್ಶಂಕವಾಗಿ ಹೇಳಬಹುದು.

    ReplyDelete
  6. ಕವನ ಚೆನ್ನಾಗಿದೆ.ಇಷ್ಟವಾಯಿತು.

    ReplyDelete
  7. ತು೦ಬಾ ಅದ್ಭುತವಾಗಿ ನಿರೂಪಿಸಿದ್ದೀರಿ....ಶಬ್ದಗಳೊ೦ದಿಗೆ ಆಟವಾಡುವ ನಿಮ್ಮ ಪರಿ ಬಹಳ ಇಷ್ಟವಾಯಿತು....:)

    ReplyDelete
  8. ತುಂಬಾ ಚೆನ್ನಾಗಿದೆ ಕವನ ..ಇಷ್ಟವಾಯ್ತು. ನಿಜ ..ಕೆಲವೊಮ್ಮೆ ಬರೆದೇ ತೀರಬೇಕೆಂಬ ಹಟಕ್ಕೆ ಹದವಿಲ್ಲದ ಹಗುರಾದ ಕವನ ರೂಪುಗೊಂಡುಬಿಡುತ್ತವೆ."ಜಳ್ಳು" ಆದನ್ನು ಚೆನ್ನಾಗಿ ಪದ ಹೆಣೆದು ಗಟ್ಟಿ ಕವನವಾಗಿ ತೆರೆದಿಟ್ಟಿದೆ. :)

    ReplyDelete
  9. kavana tumba chennagi mudide.koneya sAlugaLu nanna anubhava kooda.

    ReplyDelete
  10. ಹೇಳಿ ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ, ಈ ಗಾದೆ ಮಾತುಗಳನ್ನ ನೆನಪಿಸಿತು ಮೇಡಂ ನಿಮ್ಮ ಕವಿತೆ.. ಬದುಕು ಕಲಿಸಿಕೊಡುವಾ ಪಾಠ್ಗಳು ಮನಸಲ್ಲಿರ್ತವೆ.. ಚೆನ್ನಾಗಿದೆ..

    ReplyDelete
  11. ಕವನ ತು೦ಬಾ ಚೆನ್ನಾಗಿದೆ...keep writing...thanks..

    ReplyDelete
  12. prabhaamaniyavare,internet samasyeindaagi blog ge bheti kodalaaguttilla.kshamisi.nimma arthpoornavaada kavanakkaagi abhinandanegalu.

    ReplyDelete
  13. ಪ್ರಭಾಮಣಿ ನಾಗರಾಜ್...
    ನಿಮ್ಮ ಲಘು ಪ್ರಬಂಧಗಳು ನಮ್ಮ ಭೂತ, ವರ್ತಮಾನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ, ಸುಂದರವಾದ ಸುಲಲಿತವಾದ ಭಾಷೆ ನಿಮ್ಮದು. ಬರೆಯುವ ಶೈಲಿಯೂ ಅನುಪಮವಾದುದು...
    ಪ್ರಭಾಮಣಿ ಹೆಸರಿಗೆ ತಕ್ಕಂತೆ ಈ ಜೊಳ್ಳು ಕವಿತೆಯಲ್ಲಿ ಬದುಕಿನ ಭಾವ, ಬಣ್ಣವನ್ನು ಬಯಲಿಗೆ ತಂದಿದ್ದೀರಿ, ಅರಿತು ನಡೆಯುವವರಿಗೆ ದಾರಿ ದೀಪವಾಗುವ ನಿಮ್ಮ ಕವಿತೆ, ಭಾವಾಭಿವ್ಯಕ್ತಿಗೆ ಅಭಿನಂದನೆಗಳು...

    ReplyDelete