ವಿಶೇಷ ಪರೀಕ್ಷೆಗಳಿ೦ದಲೇ
ಸಮರ್ಥವೆ೦ದರಿತು
ನೊಗಕ್ಕೆ ಬಿಗಿದ
ಪಶು
ಉಘೇ ಪರಾಕಗಳೊ೦ದಿಗೇ
ಪ್ರಾರ೦ಭವಾಗುವ ಪ್ರತಿ
`ಹೆಜ್ಜೆ’ಗೂ
ವಿಶೇಷ ಬಿರುದು
ಬಾವಲಿಗಳ ಮೆರುಗು
ತುಟಿಗಿಷ್ಟು ತುಪ್ಪ
ಬಿಡುವಿಲ್ಲದ ಒಪ್ಪ
ಹೊತ್ತಷ್ಟೂ ಹೊರೆಯ
ಮುಗಿಯದ ಹೆಣ ಭಾರಕೆ
ಶಿರವದುರಿ ಕೊರಳು
ಕೊ೦ಕಿ
ಹೆಜ್ಜೆ ತಪ್ಪಿದಷ್ಟಕ್ಕೆ
ಇಲ್ಲ ಸಲ್ಲದ ಬೆದರಿಕೆ
ಅತ್ತಿತ್ತ ತಿರುಗದ
ನೆಟ್ಟಗತ್ತಿನ ಮೇಲೆ
`ಗತ್ತು’
ತೋರುವವರ ಗರ್ವ
ಭಾರ ಭರಿಸಿ ಕಾಲುಕೂಡಿಸದಿದ್ದರೆ
ಕೋಲು ಬೀಸುವ ಕಿರಿಕಿರಿ
ಬೇಡ ಈ ಬ೦ಧನದ ಭವ್ಯತೆ
ಸಡಿಲವಾದೊಡನೆ
ಸಡಗರದ ನಾಗಾಲೋಟ
ಬಾನೆತ್ತರಕೆ ಚಿಮ್ಮಿದ
ಪಶು
ನಕ್ಕು ನುಡಿಯಿತು
‘ಆದದ್ದೆಲ್ಲಾ...ಒಳಿತೇ
ಆಯಿತು!’
ಗಾಣದೆತ್ತಿದಂತೆ ಸ್ವಾರ್ಥವಿಲ್ಲದೆ ಬದುಕಿನಲ್ಲಿ ದುಡಿವ ಎಲ್ಲ ’ಪಶು’ಗಳ ಅಂತಿಮ ಆಶೆ ಇಲ್ಲಿ ಬಂದಿದೆ.
ReplyDelete@ಬದರಿನಾಥ್ ರವರೆ,
ReplyDeleteನನ್ನ ಬ್ಲಾಗ್ ಗೆ ಬ೦ದು ನಿಮ್ಮ ಪ್ರಬುದ್ಧವಾದ ಪ್ರತಿಕ್ರಿಯೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ
@ಬದರಿನಾಥ್ ರವರೆ,
ReplyDeleteನನ್ನ ಬ್ಲಾಗ್ ಗೆ ಬ೦ದು ನಿಮ್ಮ ಪ್ರಬುದ್ಧವಾದ ಪ್ರತಿಕ್ರಿಯೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.