Thursday, June 6, 2013

ಮುಕ್ತ

ತಿ೦ದಷ್ಟೂ ಅತೃಪ್ತ
ಹೊಟ್ಟೆಬಾಕ ಹುಳುವಿಗೂ
ವೈರಾಗ್ಯ!
ಸೆರೆ
ಕೋಶದಲಿ ಬ೦ಧಿಯಾಗಿ,
ಫಲಿಸಿತು
ಸತತ ಮೌನ
ಧ್ಯಾನದ ಭಾಗ್ಯ,
ಹೊರಹೊಮ್ಮಿತು
ಚಿಟ್ಟೆಯಾಗಿ!

 

12 comments:

  1. ಪರಿವರ್ತನಾ ಘಟ್ಟದ ಸಮರ್ಥ ವಿಶ್ಲೇಷಣೆ.

    ReplyDelete
    Replies
    1. ಸೂಕ್ತ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿಯವರೇ.

      Delete
  2. ಆಹ! ಓದು ಓದುತ್ತಿದ್ದಂತೆಯೇ ಹಾಗೆ ಕಣ್ಣೆದುರಿಗೆ ಹೊಸ ಚಿಟ್ಟೆಯೊಂದು ಹಾರಿಹೋದಂತನಿಸಿತು! ಸುಂದರ ಕವನ!

    ReplyDelete
    Replies
    1. ಸು೦ದರ ಕಲ್ಪನೆಯ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪ್ರದೀಪ್ .

      Delete
  3. ಸೂಪರ್.. ಮನದ ಚಿಟ್ಟೆ ಹಾರುವ ಸಮಯ ಅನ್ನಿಸಿತು. ಸುಂದರವಾಗಿದೆ

    ReplyDelete
    Replies
    1. ಅರ್ಥಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಕಾಂತ್ ರವರೆ. .

      Delete
  4. Replies
    1. ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು ಸುನಾಥ್ ಸರ್.. .

      Delete
  5. ಈ materialistic ಪ್ರಪಂಚದಲ್ಲಿ ಅನುಭವಿಸುವುದೆಲ್ಲವನ್ನೂ ಅನುಭವಿಸಿದ ಮನ ಬೇಸತ್ತು ಧ್ಯಾನದ ಕೋಶದೊಳ ಹೊಕ್ಕು ಹೊರ ಬಂದಾಗ ಮನಸ್ಸು ಬಂಧನ ಕಳಚಿದ ಚಿಟ್ಟೆ!!! ನನ್ನ ಬ್ಲಾಗಿಗೆ ಭೇಟಿ ಕೊಡಿ.ಅಪರೂಪಕ್ಕೊಂದು ಹೊಸ ಬರಹವಿದೆ.

    ReplyDelete
    Replies
    1. ಅರ್ಥಗರ್ಭಿತ ವಿವರಣಾತ್ಮಕ ಪ್ರತಿಕ್ರಿಯೆಗೆ ವ೦ದನೆಗಳು ಕೃಷ್ಣಮೂರ್ತಿಸರ್.. .

      Delete
  6. ಆಹಾ... ಸೊಗಸಾಗಿ ಹೇಳಿದ್ದೀರಾ....
    ಸರಳವಾಗಿ ಕೂಡ...

    ReplyDelete
    Replies
    1. ಸರಳ, ಸು೦ದರ ಪ್ರತಿಕ್ರಿಯೆಗೆ ನಮನಗಳು ದಿನಕರ್ ರವರೆ.

      Delete