Monday, September 19, 2016

`ಹನಿ'ಗವನಗಳು


ಮಿಂಚು!

ಥಟ್ಟನೆ ಹೊಳೆವ
ಮಿಂಚು
ಕೀಲಿಸಿದ
ಕಣ್ಣಿಗಷ್ಟೇ ಗೋಚರ,
ಹೃದಯಾಂತರಾಳದಲಿ
ವಿದ್ಯುತ್ ಸಂಚಾರ!


ಶುಚಿ?

ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿಶುದ್ಧ!

ತುಳಿತ

ತುಳಿಸಿಕೊಳ್ಳಲೂ ಬಾರದು
ತುಳಿಯಲೂ ಬಾರದು
ಎಂದು ಒತ್ತಟ್ಟಿಗಿರಲು
ಪ್ರಯತ್ನಿಸಿದಷ್ಟೂ.....
ತುಳಿತಗಳ
ಒತ್ತಡವೇರುತಿದೆ
ಒಲುಮೆಗಿಲ್ಲಿ ತಾವಿಲ್ಲವೆ?










4 comments:

  1. ಮಿಂಚಿನಂತಹ ಮೂರು ಹನಿಗವನಗಳನ್ನು ನೀಡಿರುವಿರಿ. ಧನ್ಯವಾದಗಳು.

    ReplyDelete
  2. ಫಳಕ್ ಎಂದು ಕಿರು ದೀಪ ಬೆಳಗಿಸಿ ಹೋಗುವ ಆಗಸದಲ್ಲಿ ಮೂಡುವ ಆ ಯಕ್ಷಿಣಿಯಿಂದ ಶುರುಮಾಡಿರುವ ಕವಿತೆಗಳ ಪುಟ್ಟ ಗುಚ್ಛ ಸೊಗಸಾಗಿದೆ

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಶ್ರೀಕಾ೦ತ್ ಮ೦ಜುನಾಥ್ ರವರೇ :)

      Delete