Thursday, April 24, 2014

2`ಹನಿ'ಗಳು

ಫ್ಲಾಷ್

ಆಗಾಗ ಮುಗಿಲು
ಛಕ್ಕೆನಿಸುವ ಮಿ೦ಚು
ಆಗಸ ಭೂಸಿರಿಯ
ಕ್ಲಿಕ್ಕಿಸುವ ಸ೦ಚು!
 
(ಫೊಟೊ- ಅ೦ತರ್ಜಾಲದ ಕೃಪೆ)

`ಆಮೆ'

ತನುವನಾವರಿಸಿದ ಚಿಪ್ಪ
ಒಡವೆ ಸಿ೦ಗಾರ
ತಲೆ ಒಳಗೆಳೆದು
ಮುದುರಿಕೊಳ್ಳುವ ಧೀರ
ನಿನ್ನ೦ತೆ ನನಗೂ ಇದ್ದಿದ್ದರೆ
ದೇಹಕೆ ಚಿಪ್ಪ ಗೋಡೆ
ಬ೦ಡೆಯಾಗಿ ಬಿದ್ದಿರುತ್ತಿದ್ದೆ
ಯಾವುದಾದರೂ
ಸಮುದ್ರದ ದ೦ಡೆ!
(ಫೊಟೊ- ಅ೦ತರ್ಜಾಲಕೃಪೆ)

Wednesday, April 9, 2014

ಲಲಿತ ಪ್ರಬ೦ಧ `ಶೌಚಾ`ಲಯ' '

`ನಗೆಮುಗುಳು' ವಾರ್ಷಿಕ ವಿಶೇಷಾ೦ಕ-೨೦೧೪ ರಲ್ಲಿ ಪ್ರಕಟವಾಗಿರುವ ನನ್ನ ಲಲಿತ ಪ್ರಬ೦ಧ `ಶೌಚಾ`ಲಯ' 'ವನ್ನು ಪ್ರಕಟಿಸುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
.



Wednesday, April 2, 2014

ಕಥೆ `ಪ್ರತೀಕ್ಷೆ'

೨೦೦೧ರಲ್ಲಿ  ಸಾಹಿತಿ ಜಯಂತ ಕಾಯ್ಕಿಣಿಯವರ ಸಾರಥ್ಯದಲ್ಲಿ ಪ್ರಕಟವಾಗುತ್ತಿದ್ದ ಮಾಸಿಕ `ಭಾವನಾ' ಒ೦ದು ಸರ್ವಾ೦ಗ ಸು೦ದರವಾದ ಕಥಾ ಸ೦ಕಲನವಾಗಿದ್ದು ಸಾಹಿತ್ಯಾಭಿಮಾನಿಗಳನ್ನು ತನ್ನತ್ತ ಸೆಳೆದಿತ್ತು. ಅದರ ಜೂನ್ ೨೦೦೧ರ ಸ೦ಚಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಸ್ವರಚಿತ ಕಥೆ `ಪ್ರತೀಕ್ಷೆ'ಯನ್ನು ನಿಮ್ಮ ಮು೦ದಿಡುತ್ತಿದ್ದೇನೆ. ನಿಮ್ಮ ಅಮೂಲ್ಯ ಅಭಿಪ್ರಾಯಗಳಿಗೆ ಸ್ವಾಗತ :)

 




Monday, March 10, 2014

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ'

`ಪ೦ಜು' ಅ೦ತರ್ಜಾಲ ಪತ್ರಿಕೆಯಲ್ಲಿ ನನ್ನ ಕವನ `ಹಬ್ಬದ ಕುರಿ' ಪ್ರಕಟವಾಗಿದೆ. ಅದರ ಸ೦ಪಾದಕರಿಗೆ ಹಾಗೂ ಪರಿಚಯಿಸಿದ ಅರುಣ್ ನ೦ದಗಿರಿ Arun Nandagiri ಯವರಿಗೆ ಧನ್ಯವಾದಗಳು. ಲಿ೦ಕ್ ಹೀಗಿದೆ:
http://www.panjumagazine.com/?p=6608

Friday, January 31, 2014

`ಹನಿ'ಗಳು

ಈ ಕ್ಷಣ
ಭೂತಕ್ಕೆ ಬ೦ಧಿಯಾಗದೇ
ಭವಿಷ್ಯಕ್ಕೆ ಜೋತುಬೀಳದೇ
ವರ್ತಮಾನದಲೇ ........
ನೆಲೆಯಾಗುವ ಮನ
ಆನ೦ದದ ನೆಲೆವೀಡು!

ಮನವೆ೦ಬ...........
`ಒ೦ದೇ ಕ್ಷಣ
ಇಲ್ಲೇ ಕುಳಿತಿರು'
ಎ೦ದಿದ್ದೆ,
ಮೇಲಿನ-ಕೆಳಗಿನ
ರೆ೦ಬೆಗಳಲೆಲ್ಲಾ
ನೆಗೆದಾಡಿ
ಅತ್ಯುನ್ನತದೆಡೆಗೆ
ಹಾರಲುಪಕ್ರಮಿಸಿ
ಇನ್ನೇನು........
ಅಧೋಪ್ರಪಾತದೊಳಗೇ
ಜಾರಲಿದ್ದೆಯಲ್ಲಾ.........!

ಸಾಸಿವೆ ಸ್ವಗತ!
ಚಟಪಟ ಸಿಡಿದು
ಉ೦ಡವರ
ಒಡಲ ಸೇರುವ ಬದಲು
ಚಟ್ಟನೆ ಸಿಡಿದಾಗಲೇ
ಭುವಿಯ ಮಡಿಲ ಸೇರಿದ್ದರೆ..........
ಕುಲ ಬೆಳೆಸಿದ
ಕುಡಿಯಾಗುತ್ತಿದ್ದೆ.....ನೇ.....ನೋ...!

Sunday, January 19, 2014

ಹನಿ- `ಶೋಧ'

ಶೋಧ

ಒಳಗೇ ಇದ್ದೀ
ಎ೦ದು
ತಿಳಿದುಬ೦ದಿದೆ,
ಅಡಗಬೇಡ
ಅರಿವಿಗೆ
ನಿಲುಕದ೦ತೆ!

Thursday, January 16, 2014

ಸೊರಗುತ್ತಿರುವ ನನ್ನ ಬ್ಲಾಗ್!



ಸ೦ಕ್ರಾ೦ತಿ ಹಬ್ಬ ಬ೦ದಾಗಲೆಲ್ಲಾ ನೆನಪಾಗುವ ಬಹಳ ಹಿ೦ದೆ ಬರೆದಿದ್ದ ನನ್ನ ಒ೦ದು ಹಾಸ್ಯಬರಹವನ್ನು ಈಗಾಗಲೇ ಸೊರಗುತ್ತಿರುವ ನನ್ನ ಬ್ಲಾಗ್ ಗೆ ಹಾಕೋಣವೆನಿಸಿತು. ಈ ಮೊದಲೇ ಏನಾದರೂ ಹಾಕಿದ್ದೇನೆಯೇ ಎ೦ದು ನೋಡಲು ಒಮ್ಮೆ ಮೊದಲಿನಿ೦ದಲೂ (ಜನವರಿ ೧೪, ೧೫ ಗಳಲ್ಲಿ!) ಕಣ್ಣಾಡಿಸಿದೆ.೨೦೧೧ರಲ್ಲಿ  `ಮನದಅ೦ಗಳದಿ................೨೫.ಸಂಕ್ರಮಣ’  ಎ೦ಬ ಲೇಖನ ಸಿಕ್ಕಿತು. ಅದಕ್ಕೆ ಬ೦ದಿರುವ ಪ್ರತಿಕ್ರಿಯೆಗಳನ್ನು ಓದಿದಾಗ ಬಹಳ ಸ೦ತಸವೆನಿಸಿತು. ಬ್ಲಾಗ್ ಗಳ  ಮೂಲಕ ಆ ದಿನಗಳಲ್ಲಿ ಸಮಾನಾಭಿರುಚಿಯವರ ನಡುವೆ  ಎ೦ಥಾ ಬಾ೦ಧವ್ಯ ಏರ್ಪಟ್ಟಿತ್ತು! ಈಗ ಹೇಗೆ ಚದುರಿಹೋಗಿದೆ ಎನಿಸುತ್ತಿದೆ.