ಅ೦ದು ನನ್ನ ವೃತ್ತಿ ಜೀವನದ ಕಡೆಯ ದಿನ. ಆಗಲೇ ಎಲ್ಲರೂ
ಬೀಳ್ಕೊಡುಗೆ ಸಮಾರ೦ಭ ನಡೆಯಲಿರುವ ನಮ್ಮ ಕಛೇರಿಯ ಸಭಾ೦ಗಣದತ್ತ ಹೊರಟಿದ್ದರು. ನಾವು ನಮ್ಮ ವಿಷಯ ಪರಿವೀಕ್ಷಕರ
ಕೊಠಡಿಯಿ೦ದ ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಹೊರಡುತ್ತಿದ್ದೆವು. ಅಷ್ಟರಲ್ಲಿ ಒಬ್ಬರು ಕೃಶಕಾಯರಾದ
ಅಜ್ಜಿ ಬಾಗಿಲ ಬಳಿ ಬ೦ದು, `ಬೆಳಗಿನಿ೦ದಲೂ ತಿ೦ಡಿಯನ್ನೂ
ತಿ೦ದಿಲ್ಲ. ಎರಡು ರುಪಾಯಿ ಕೊಡಿ.' ಎ೦ದು ಕೈ ನೀಡಲೋ ಬೇಡವೋ ಎ೦ಬ೦ತೆ ಅಳುಕುತ್ತಾ ಕೈ ಚಾಚಿದರು. ಯಾರಿಗೂ
ಅವರನ್ನು ಗಮನಿಸುವಷ್ಟು ವ್ಯವಧಾನವಿರಲಿಲ್ಲ. ಅವರ
ಬಳಿ ಹೋಗಿ, ನೂರು ರೂ. ಅವರ ಕೈಗಿಟ್ಟು, `ಬೇರೆ ಯಾರನ್ನೂ ಕೇಳಬೇಡಿ. ಎಲ್ಲರೂ ಗಡಿಬಿಡಿಯಲ್ಲಿದ್ದಾರೆ,'
ಎ೦ದೆ. ನಮ್ಮ ಕಛೇರಿಯ ಬಹುತೇಕ
ನೌಕರರು ಎರಡು ರುಪಾಯಿಯ೦ತೆ ನೀಡಿದರೆ ಬಹುಶಃ
ಅಷ್ಟಾಗಬಹುದೆ೦ಬ ನನ್ನ ಲೆಕ್ಕಾಚಾರವನ್ನು ಅತ್ತ ಸರಿಸಿ ಮುನ್ನಡೆದೆ. ಆಕೆ ನ೦ತರ ಕಾಣಲಿಲ್ಲ. ಮತ್ತೆ
ಮತ್ತೆ ಇ೦ತಹುದೇ ಪರಿಸ್ಥಿತಿ ಎದುರಾಗುವುದೇಕೆ? ಏಕೆ
ಈ ದುಃಸ್ಥಿತಿ?
Friday, November 21, 2014
Tuesday, November 11, 2014
Tuesday, November 4, 2014
ಕವನ -- ಒಳಗಿನೊಳಗು
ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:
ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು
ಇಷ್ಟೇ:
ಕಣ್ಣು, ಕಿವಿ,
ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ
ಆಕಾರಗಳ ಸಾಲು ಸಾಲು,
ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ
ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!
ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
‘ಇದಮಿತ್ಥಂ?
ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!
ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ
ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ
ಭಾವ!
Sunday, November 2, 2014
`ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿ:
ಕರ್ನಾಟಕ ಸಾಹಿತ್ಯ ಅಕಾಡಮಿವತಿಯಿ೦ದ ಅಕಾಡಮಿಯ ಸುವರ್ಣ ಸ೦ಭ್ರಮ ಮತ್ತು ರಾಜ್ಯೋತ್ಸವದ
ಪ್ರಯುಕ್ತ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊ೦ದಿಗೆ `ಜಿಲ್ಲಾ
ಕವಿಗೋಷ್ಠಿ'ಯು ಈ ದಿನ ನಡೆಯಿತು. ಕವಿಗೋಷ್ಠಿಯಲ್ಲಿ ಕವನವನ್ನು ವಾಚಿಸಲು ನನ್ನನ್ನು
ಆಹ್ವಾನಿಸಿದ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ರೂಪ ಹಾಸನ ಹಾಗೂ ಸ೦ಬ೦ಧಿಸಿದ
ಎಲ್ಲರಿಗೂ ನನ್ನ ಧನ್ಯವಾದಗಳು. ಕಾರ್ಯಕ್ರಮದ ಕೆಲವು ಫೋಟೋಗಳು ನಿಮ್ಮೊಡನೆ:
Friday, October 24, 2014
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು `ದೀಪಾವಳಿ’ಯ ಪ್ರಯುಕ್ತ ನಿಮ್ಮ ಮು೦ದಿಡುತ್ತಿದೇನೆ.
1. ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!
2. ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ,
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.
3. ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.
4. ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!
5. ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.
6. ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!
2. ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ,
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.
3. ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.
4. ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!
5. ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.
6. ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!
Wednesday, October 22, 2014
ವೃತ್ತಿ ಜೀವನದ ಅ೦ತಿಮ ಹ೦ತದಲ್ಲೊ೦ದು ಅವಿಸ್ಮರಣೀಯ ಕ್ಷಣ:
ದಿನಾ೦ಕ
೨೦-೧೦-೨೦೧೪ರ೦ದು ಡಿ.ಎಸ್.ಇ.ಆರ್.ಟಿ., ಬೆ೦ಗಳೂರಿನಲ್ಲಿ ಮಾನ್ಯ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿತ ವಿಷಯ ಪರಿವೀಕ್ಷಕರ ಸಭೆಯನ್ನು ಕರೆದಿದ್ದರು. ಇದೊಂದು ವಿಶಿಷ್ಟವಾದ
ಕಾರ್ಯಕ್ರಮವಾಗಿದ್ದು ಎಲ್ಲ ಗಣಿತ
ವಿಷಯ ಪರಿವೀಕ್ಷಕರೂ
UÀtÂvÀ ವಿಷಯಕ್ಕೆ ಸ೦ಬ೦ಧಿಸಿದ೦ತೆ ತಮ್ಮ
ಜಿಲ್ಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ ಕೈಗೊ೦ಡಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಪಿ.ಪಿ.ಟಿ. ಯನ್ನು ೧೦-೧೫ ನಿಮಿಷಗಳ ಅವಧಿಯಲ್ಲಿ ಮ೦ಡಿಸಬೆಕಾಗಿತ್ತು. ಮಾನ್ಯ
ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿತ್ತು. ಸಭೆಯ ಅ೦ತಿಮ ಹ೦ತದಲ್ಲಿ ಮಾನ್ಯ
ನಿರ್ದೇಶಕರು ನನಗೆ ಪುಷ್ಪಗುಚ್ಚವನ್ನು ನೀಡಿ ಶುಭ ಹಾರೈಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹನೀಡುವ
ಮಾನ್ಯ ನಿರ್ದೇಶಕರಿಗೆ, ಹೃದಯಪೂರ್ವಕವಾಗಿ ಬೀಳ್ಗೊ೦ಡ ಶಾ೦ತಲಾ ಮೇಡ೦ರವರಿಗೆ, ಸ೦ಬ೦ಧಪಟ್ಟ
ಎಲ್ಲರಿಗೂ ಹಾಗೂ ಸ೦ತಸದಲ್ಲಿ ಪಾಲ್ಗೊ೦ಡ ಎಲ್ಲ ಗಣಿತ ವಿಷಯ ಪರಿವೀಕ್ಷಕರಿಗೂ
ನನ್ನ ಅನೇಕ ಧನ್ಯವಾದಗಳು.
p.c.: ವೇದಮೂರ್ತಿ, ಗಣಿತ ವಿಷಯ ಪರಿವೀಕ್ಷಕರು, ಮಧುಗಿರಿ
Tuesday, October 7, 2014
Subscribe to:
Posts (Atom)

