Monday, July 25, 2016

ಹನಿ - `ಆಸರೆ'

ಆಸರೆ

ನನ್ನಾಂತರ್ಯಕೆ
ಸಾಂತ್ವನ ನೀಡಿ
ಮುನ್ನಡೆಸುತ್ತಿದ್ದ
ಸಾಥಿ ನೀನು
ದಬ್ಬಿ ಹೊರ ದೂಡದಿರು
ಮತ್ತೊಮ್ಮೆ
ತಬ್ಬಲಿಯಾಗುವೆನೆಂಬ
ಭಯವಿದೆ!








Sunday, July 24, 2016

ಪ್ರಕೃತಿಯ ಹಸಿರುಡುಗೆ :)

ಈವರೆಗೆ ಒಂದಾದರೂ ಫಲವನ್ನು ಬಿಡಲಾಗದ ಪುಷ್ಪಭರಿತ ಪಪ್ಪಾಯಿಗೆ ಪ್ರಕೃತಿಯ ಹಸಿರುಡುಗೆ :)


                                                       

Sunday, July 17, 2016

ಹನಿ - `ನಾನು-ನೀನು'

ನಾನು-ನೀನು

ನಾನು ನೀನಾದಾಗ
ಸಕಲ ಕಾರ್ಯಗಳೂ
ಫಲಿತ
ಸಮತೋಲಿತ,
ನಾನು ನಾನೇ ಆದಾಗ
ಅಬ್ಬರದ ಉಬ್ಬರ
ಎಣೆಯಿಲ್ಲದಿಳಿತ

ಆಗಾಗ ಸ್ಥಗಿತ!

Sunday, July 10, 2016

ಅ೦ದಿನ ಬರಹ ಇ೦ದಿನ ಓದಿಗೆ - ಲಲಿತ ಪ್ರಬ೦ಧ `ಗೊಮೆಯ ಸುತ್ತಮುತ್ತ'

ಅ೦ದಿನ ಬರಹ ಇ೦ದಿನ ಓದಿಗೆ::)
21-05-2006ರ 'ಕರ್ಮವೀರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಗೊಮೆಯ ಸುತ್ತಮುತ್ತ' 


Monday, June 27, 2016

ಹನಿ - `ಪರಿಣಾಮ'

ದರ್ಶಿಸಿದೆ ದ್ವ೦ದ್ವಕ್ಕೆ
ದಿವ್ಯ ಚೇತನವ
ದಟ್ಟ ಮೌನದ
ನ೦ತರ......
ಅನಿರೀಕ್ಷಿತ
ವಿಮುಖ ಗತಿ!

Saturday, June 18, 2016

ಅ೦ದಿನ ಬರಹ ಇ೦ದಿನ ಓದಿಗೆ : ಲಲಿತ ಪ್ರಬ೦ಧ `ಪ್ರಸಿದ್ಧಿಯ ಬೆನ್ನೇರಿ'


ಅ೦ದಿನ ಬರಹ ಇ೦ದಿನ ಓದಿಗೆ:ಮೇ,2007ರ 'ತುಷಾರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಪ್ರಸಿದ್ಧಿಯ ಬೆನ್ನೇರಿ'





Thursday, June 16, 2016

ಹೆಸರಿನ ಗೊ೦ದಲ :

ನನ್ನ ಮೊದಲ ಹಾಸ್ಯ ಬರಹ ಸ೦ಕಲನಕ್ಕೆ 'ಜಿರಳೆ ಉ೦ಡೆ' ಎ೦ದು ಹೆಸರಿಸಿದ್ದೇನೆ. ಅದನ್ನು ಒ೦ದು ಗ್ರ೦ಥಾಲಯದಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಇಡಲಾಗಿತ್ತು ಎ೦ದು ಆಗ ಜೀವಶಾಸ್ತ್ರ ಶಿಕ್ಷಕಿಯಾಗಿದ್ದ ನಮ್ಮಕ್ಕ ಹೇಳಿದ್ದರು. ನನ್ನ ಮು೦ದಿನ ಲಲಿತ ಪ್ರಬಂಧ ಸ೦ಕಲನಕ್ಕೆ ಇದೇ ಹೆಸರು (`ಆಹಾ! ಗೋಲಾಕಾರ೦')ಕೊಡಬೇಕೆ೦ದಿದ್ದೇನೆ. 'ಭೂಗೋಳ'ವಿಭಾಗದಲ್ಲಿ ಇಟ್ಟರೆ ಎ೦ಬ ಆತ೦ಕ!