Friday, June 3, 2011

'ಹನಿ'ಗಳು

ಜ್ಞಾನ
ಸುರಿವ ಮಳೆ ನೀರ
ಹಿಡಿದಿಡಲಾಗದು
ಗಿರಿಶಿಖರ,
ತಮ್ಮತ್ತ ಸೆಳೆಯುತಿವೆ
ಸಾಗರ ಸರೋವರ.

ಹಸ್ತಾ೦ತರ
ಕವಿದ ಕಾರ್ಮೋಡ
ಸುರಿಸಿತು
ಧಾರಾಕಾರ ಮಳೆ,
ಆಗಸವೀಗ ನಿರಭ್ರ
ಧರೆಗೆ ಕಡಲ
ಅಬ್ಬರವೋ ಅಬ್ಬರ!

ಸೋಲು?
ಈ ಕಡಲಿಗೆ
ತಿಳಿದಿರುವುದೆ೦ದರೆ
ಬರೀ ಉಬ್ಬರವಿಳಿತ,
ಅದರೊಡನೆ ಸ್ಪರ್ಧಿಸಲಾಗದ
ಮುಗಿಲಿಗೋ
ಅಣು-ಅಣುವೂ ಜರ್ಜರಿತ
ಏನೇ ಇಲ್ಲದ ಕುಸಿತ!

ಸ೦ಸಾರ
ಹಾರಿದೆ ಸಾಗರದೊಳಗೆ
ಸುಖವನ್ನೇ ಬಾಚುತ್ತೇನೆ೦ದು
ಸಮೃದ್ಧ ಮುತ್ತು ಹವಳ
ಮುತ್ತುವ ಶಾರ್ಕ್ ವೇಲ್
ನಿಲ್ಲದ ಉಬ್ಬರವಿಳಿತ
ನೀರೂ ಉಪ್ಪುಪ್ಪು!

8 comments:

  1. all are ggod madam.., plz visit usdesai.blogspot.com whenever u r free

    ReplyDelete
  2. ಮುಂಗಾರಿನ ಹನಿಗಳಂತೆ ಮುದ ನೀಡುವ ಹನಿಗಳು.ಅಭಿನಂದನೆಗಳು ಮೇಡಂ.ನಮಸ್ಕಾರ.

    ReplyDelete
  3. ಪ್ರತಿಯೊಂದು ಹನಿಯೂ ಮುತ್ತಿನ ಹನಿಯಾಗಿದೆ.

    ReplyDelete
  4. ಚೆಂದದ ಸಾಲುಗಳು... ಹಸ್ತಾಂತರ ಹಿಡಿಸಿತು

    ReplyDelete
  5. ಹನಿಗಳು ತುಸು ಭಾರವಾಗೆ ಇವೆ! ಸೂಪರ್ ಮೇಡಂ

    My facebook profile:
    Badarinath Palavalli

    ReplyDelete
  6. Pl. visit my blogs:
    www.badaripoems.wordpress.com
    www.badari-poems.blogspot.com
    www.badari-notes.blogspot.com
    Ur comments are pathfinder to me.

    Pl. catch me at Facebook:
    Profile : Badarinath Palavalli

    ReplyDelete