ಜ್ಞಾನ
ಸುರಿವ ಮಳೆ ನೀರ
ಹಿಡಿದಿಡಲಾಗದು
ಗಿರಿಶಿಖರ,
ತಮ್ಮತ್ತ ಸೆಳೆಯುತಿವೆ
ಸಾಗರ ಸರೋವರ.
ಹಸ್ತಾ೦ತರ
ಕವಿದ ಕಾರ್ಮೋಡ
ಸುರಿಸಿತು
ಧಾರಾಕಾರ ಮಳೆ,
ಆಗಸವೀಗ ನಿರಭ್ರ
ಧರೆಗೆ ಕಡಲ
ಅಬ್ಬರವೋ ಅಬ್ಬರ!
ಸೋಲು?
ಈ ಕಡಲಿಗೆ
ತಿಳಿದಿರುವುದೆ೦ದರೆ
ಬರೀ ಉಬ್ಬರವಿಳಿತ,
ಅದರೊಡನೆ ಸ್ಪರ್ಧಿಸಲಾಗದ
ಮುಗಿಲಿಗೋ
ಅಣು-ಅಣುವೂ ಜರ್ಜರಿತ
ಏನೇ ಇಲ್ಲದ ಕುಸಿತ!
ಸ೦ಸಾರ
ಹಾರಿದೆ ಸಾಗರದೊಳಗೆ
ಸುಖವನ್ನೇ ಬಾಚುತ್ತೇನೆ೦ದು
ಸಮೃದ್ಧ ಮುತ್ತು ಹವಳ
ಮುತ್ತುವ ಶಾರ್ಕ್ ವೇಲ್
ನಿಲ್ಲದ ಉಬ್ಬರವಿಳಿತ
ನೀರೂ ಉಪ್ಪುಪ್ಪು!
all are ggod madam.., plz visit usdesai.blogspot.com whenever u r free
ReplyDeleteಮುಂಗಾರಿನ ಹನಿಗಳಂತೆ ಮುದ ನೀಡುವ ಹನಿಗಳು.ಅಭಿನಂದನೆಗಳು ಮೇಡಂ.ನಮಸ್ಕಾರ.
ReplyDeleteಚಂದದ ಹನಿಗಳು.
ReplyDeleteಪ್ರತಿಯೊಂದು ಹನಿಯೂ ಮುತ್ತಿನ ಹನಿಯಾಗಿದೆ.
ReplyDeleteಚೆಂದದ ಸಾಲುಗಳು... ಹಸ್ತಾಂತರ ಹಿಡಿಸಿತು
ReplyDeleteಹನಿಗಳು ತುಸು ಭಾರವಾಗೆ ಇವೆ! ಸೂಪರ್ ಮೇಡಂ
ReplyDeleteMy facebook profile:
Badarinath Palavalli
Pl. visit my blogs:
ReplyDeletewww.badaripoems.wordpress.com
www.badari-poems.blogspot.com
www.badari-notes.blogspot.com
Ur comments are pathfinder to me.
Pl. catch me at Facebook:
Profile : Badarinath Palavalli
chendada hanigalu
ReplyDelete