ನನ್ನ ಎರಡನೇ ಹನಿಗವನ ಸಂಕಲನ ‘ಗುಟ್ಟು’ ೨೦೦೯ರಲ್ಲಿ ಪ್ರಕಟವಾದಾಗಲೂ ನನಗೆ ಮುಂದೆ ನಾನು `The Secret’ ಎನ್ನುವ ಅದ್ಭುತ ಚಿತ್ರವನ್ನು ನೋಡುತ್ತೇನೆಂದಾಗಲೀ ಅಥವಾ ಪುಸ್ತಕವನ್ನು ಓದುತ್ತೇನೆಂದಾಗಲೀ ತಿಳಿದೇ ಇರಲಿಲ್ಲ! ಸಾಮಾನ್ಯವಾಗಿ ತಂದೆ-ತಾಯಿಯರು ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುತ್ತಾರೆ. ಆದರೆ ನನ್ನ ವಿಷಯದಲ್ಲಿ ಮಕ್ಕಳು ನನ್ನ ಮುಂದೆ ಒಂದು ಹೊಸ ಜಗತ್ತನ್ನೇ ತೆರೆದಿಟ್ಟರು!
‘ಗುಟ್ಟು’ ಸಂಕಲನದ ಪ್ರಾತಿನಿಧಿಕ ‘ಹನಿ’ ಈರೀತಿ ಇದೆ:
‘ಹೊರ ಮನಕ್ಕೆ
ಹೊಣೆಯಿತ್ತರೆ
ಹೊರೆ ಆತಂಕ,
ಒಳಮನಕ್ಕಿತ್ತರೆ
ನಿರಾತಂಕ!’
‘ದ ಸೀಕ್ರೆಟ್’(ರಹಸ್ಯ) ಪುಸ್ತಕದ ಲೇಖಕಿ ರೋಂಡ ಬೈರ್ನೆೀ ( Rhonda Byrne -born 12 March 1951)) ಆಸ್ಟ್ರೇಲಿಯನ್ ಟೆಲಿವಿಷನ್ ಚಿತ್ರ ನಿರ್ಮಾಪಕಿ ಹಾಗೂ ಲೇಖಕಿ. ‘ದ ಸೀಕ್ರೆಟ್’ ಎನ್ನುವ ಚಿತ್ರವನ್ನು ನಿರ್ಮಿಸುವ ಹಿನ್ನೆಲೆಯನ್ನು ಅವರು ಹೀಗೆ ತೆರೆದಿಡುತ್ತಾರೆ:
‘ಆಗ ನನ್ನ ಜೀವನ ತ್ರಾಸದಾಯಕವಾಗಿತ್ತು. ಆಕಸ್ಮಿಕವಾಗಿ ನನ್ನ ತಂದೆ ಮೃತರಾದರು. ನನ್ನ ವೃತ್ತಿಜೀವನದ ಸಹೋದ್ಯೋಗಿಗಳು, ನನ್ನ ಪ್ರೀತಿಪಾತ್ರರು ನನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಈ ನನ್ನ ತೀವ್ರ ನಿರಾಶೆಯ ಸಮಯದಲ್ಲಿ ನನಗೊಂದು ವರದಾನ ಸಿಕ್ಕಿತು!
ನನ್ನ ಮಗಳು ಹೈಲೆ (Hayley) ನನಗೆ ಒಂದು ನೂರುವರ್ಷಗಳಷ್ಟು ಹಳೆಯದಾದ ಪುಸ್ತಕವನ್ನು ಕೊಟ್ಟಳು. ಅದರಲ್ಲೇ ನಾನು ಜೀವನದ ರಹಸ್ಯವನ್ನೇ(ಸೀಕ್ರೆಟ್) ಕಂಡುಕೊಂಡೆ! ಸೀಕ್ರೆಟ್‌ನ ಜಾಡನ್ನು ಚರಿತ್ರೆಯ ಪುಟಗಳಲ್ಲಿ ಪತ್ತೆಮಾಡಲಾರಂಭಿಸಿದಾಗ ನಂಬಲಸಾಧ್ಯವಾಗುವಂತೆ ಅನೇಕರು ಅದರ ಬಗ್ಗೆ ತಿಳಿದಿದ್ದರು! ಆ ಚಾರಿತ್ರಿಕ ಮಹಾನ್ ವ್ಯಕ್ತಿಗಳು: ಪ್ಲಾಟೊ, ಶೇಕ್ಸ್‌ಪಿಯರ್, ನ್ಯೂಟನ್, ಹ್ಯೂಗೊ, ಬೀಥೆವೆನ್, ಲಿಂಕನ್, ಎಮೆರ್ಸಂನ್, ಎಡಿಸನ್, ಐನ್‌ಸ್ಟೈನ್.
‘ಎಲ್ಲರೂ ಏಕೆ ಇದರ ಬಗ್ಗೆ ತಿಳಿದುಕೊಳ್ಳಬಾರದು?’ ಎಂಬ ಮಹದಾಕಾಂಕ್ಷೆಯೊಂದಿಗೆ ಜಗತ್ತಿನೊಂದಿಗೆ ಹಂಚಿಕೊಳ್ಳಲು ಸಿದ್ಧಳಾದೆ ಮತ್ತು ಸೀಕ್ರೆಟ್ ಬಗ್ಗೆ ತಿಳಿದುಕೊಂಡು ಈಗ ಸಾಧಿಸುತ್ತಿರುವವರ ಶೋಧದಲ್ಲಿ ತೊಡಗಿದೆ.
ಅಂಥಾ ವ್ಯಕ್ತಿಗಳು ಒಬ್ಬೊಬ್ಬರಾಗಿ ಗೋಚರಿಸಲಾರಂಭಿಸಿದರು. ನಾನು ಒಂದು ಅಯಸ್ಕಾಂತದಂತಾಗಿ ಅವರನ್ನು ಹುಡುಕಲಾರಂಭಿಸಿದೆ.........’
ಎಂಟು ತಿಂಗಳ ಸತತ ಪರಿಶ್ರಮದಲ್ಲಿ ಅವರ ತಂಡ ‘ದ ಸೀಕ್ರೆಟ್’ ಫಿಲಂಅನ್ನು ತಯಾರಿಸುತ್ತಾರೆ. ‘ಈ ಚಿತ್ರದ ಮುಖ್ಯ ಉದ್ದೇಶ ಪ್ರಪಂಚದ ಎಲ್ಲ ವ್ಯಕ್ತಿಗಳನ್ನೂ ಸಂತಸದಿಂದ ಇರುವಂತೆ ಮಾಡುವುದೇ ಆಗಿದೆ,’ ಎಂದು ತಿಳಿಸುತ್ತಾರೆ.
ಸೀಕ್ರೆಟ್‌ನ ಸಾರಾಂಶ ಹೀಗಿದೆ:
* ಜೀವನದ ಮಹಾನ್ ಸೀಕ್ರೆಟ್ ‘ಆಕರ್ಷಣೆಯ ನಿಯಮ’ವೇ ಆಗಿದೆ.
* ‘ಆಕರ್ಷಣೆಯ ನಿಯಮ’ ಈ ರೀತಿ ಇದೆ: `like attracts like’ ನಾವು ಒಂದು ಆಲೋಚನೆ ಮಾಡಿದರೆ, ಅದೇ ರೀತಿಯ ಆಲೋಚನೆಗಳನ್ನು ನಮ್ಮತ್ತ ಆಕರ್ಷಿಸಿರುತ್ತೇವೆ.
* ಆಲೋಚನೆಗಳು ಅಯಸ್ಕಾಂತೀಯ ಗುಣಗಳನ್ನು ಹೊಂದಿವೆ. ಆಲೋಚನೆಗಳಿಗೆ ‘ಆವರ್ತಾಂಕ’ (frequency)ವಿರುತ್ತದೆ. ನೀವು ಆಲೋಚನೆಗಳನ್ನು ಯೋಚಿಸಿದಾಗ ಅವು ವಿಶ್ವಕ್ಕೆ(universe) ಕಳುಹಿಸಲ್ಪಡುತ್ತವೆ. ಅಲ್ಲಿ ಅವು ಕಾಂತೀಯವಾಗಿ ತಮ್ಮದೇ ಆವರ್ತಾಂಕದ ಸಾದೃಶಗಳನ್ನು ಆಕರ್ಷಿಸುತ್ತವೆ. ಕಳುಹಿಸಿದ ಎಲ್ಲ ಆಲೋಚನೆಗಳೂ ತಮ್ಮದೇ ಆಕರಕ್ಕೆ(ನೀವು) ಹಿಂತಿರುಗುತ್ತವೆ.
* ನೀವು ಮಾನವ ರೂಪದ ಪ್ರಸರಣ ಗೋಪುರವಿದ್ದಂತೆ (human transmission tower). ನಿಮ್ಮ ಆಲೋಚನೆಗಳ ಮೂಲಕ ನಿರ್ದಿಷ್ಟ ಆವರ್ತಗಳನ್ನು ಪ್ರಸರಣ ಮಾಡುತ್ತಿರುತ್ತೀರಿ. ನೀವೇನಾದರೂ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದ್ದರೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಆವರ್ತವನ್ನು ಬದಲಾಯಿಸಿ.
* ನಿಮ್ಮ ಇಂದಿನ ಆಲೋಚನೆಗಳು ಭವಿಷ್ಯದ ಜೀವನವನ್ನು ಸೃಷ್ಟಿಸುತ್ತವೆ. ನೀವು ಯಾವುದರ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತೀರೋ ಅಥವಾ ಮನಸ್ಸನ್ನು ಕೇಂದ್ರೀಕರಿಸುತ್ತೀರೋ ಅದೇ ನಿಮ್ಮ ಜೀವನವಾಗಿ ಗೋಚರಿಸಲಾರಂಭಿಸುತ್ತದೆ.
* ನಿಮ್ಮ ಆಲೋಚನೆಗಳೇ ವಸ್ತುಗಳಾಗುತ್ತವೆ(Your thoughts become things.)
`The Secret’ ಪುಸ್ತಕದ ಪ್ರತಿ ಅಧ್ಯಾಯದ ನಂತರವೂ ನೀಡಿರುವ ಸಾರಾಂಶಗಳು ಬಹಳ ಉಪಯುಕ್ತವಾಗಿವೆ. ಹಣದ ಸಂಪಾದನೆಯ ಬಗ್ಗೆ, ಸಂಬಂಧಗಳನ್ನು ಉತ್ತಮಗೊಳಿಸುವುದು, ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಜೀವನವನ್ನು ಅರ್ಥಮಾಡಿಕೊಳ್ಳುವುದು, ನಮ್ಮನ್ನು ನಾವು ಅರಿತುಕೊಳ್ಳುವುದು.......... ಮುಂತಾದ ಸೀಕ್ರೆಟ್‌ಗಳನ್ನು ತಿಳಿದುಕೊಳ್ಳಬಹುದು. ನಮಗೆ ಒಳಿತೆನಿಸುವ, ಸಂತಸದಾಯಕವಾದ ಜೀವನದ ಸೀಕ್ರೆಟ್‌ಅನ್ನು ಅರಿತು, ಅಳವಡಿಸಿಕೊಂಡು, ಅದರ ರಹಸ್ಯವನ್ನು ಎಲ್ಲರೊಡನೆ ಹಂಚಿಕೊಂಡು, ಜಗದ ಸಂತಸಕ್ಕೆ ನಮ್ಮ ಅಲ್ಪ ಕಾಣಿಕೆಯನ್ನು ನೀಡುವ ಶಕ್ತಿಯನ್ನು ಪಡೆಯೋಣ.
Very nice madam.
ReplyDeleteSwarna
ಮೇಡಂ;ನಾನು ಈ ಪುಸ್ತಕವನ್ನು ಓದಿದ್ದೆನೆಮತ್ತು ಆ ಚಿತ್ರವನ್ನೂ ಹಲವಾರು ಬಾರಿ ನೋಡಿದ್ದೇನೆ.THOUGHTS BECOME THINGS ಅನ್ನುವುದು ಸತ್ಯ.ಅದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ReplyDeleteಇಂದಿನ ಒತ್ತಡಯುಕ್ತ ಓಟದ ಪ್ರಪಂಚದಲ್ಲಿ ನಮ್ಮನ್ನು ನಾವೇ ಸುಸ್ಥಿತಿಯಲಿಡಲು ಇಂತಹ ಸಾಧನಗಳ ಆವಶ್ಯಕತೆ ಇದೆ.
ReplyDeleteಈ ಪುಸ್ತಕ ಮತ್ತು ಚಿತ್ರ ನಮಗೂ ಸಿಗುವಂತಾದರೆ ನಾವೇ ಧನ್ಯ.
ನಿಮ್ಮ ಪುಸ್ತಕಗಳ ಪ್ರಕಾಶಕರ ವಿಳಾಸ ಕೊಡಿ ಮೇಡಂ, ಖಂಡಿತ ಕೊಂಡು ಓದುತ್ತೇನೆ.
'ದಿ ಸೀಕ್ರೆಟ್' ನ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು....ಚೆನ್ನಾಗಿದೆ ಲೇಖನ...ಧನ್ಯವಾದಗಳು...
ReplyDeleteನನ್ನ ಬ್ಲಾಗ್ ಗೂ ಬನ್ನಿ...
ಮೇಡಮ್,
ReplyDeleteಉತ್ತಮವಾದ ಹೊಸ ವಿಚಾರವೊಂದನ್ನು ನಮ್ಮ ಮುಂದೆ ಇಟ್ಟಿರುವಿರಿ. ನಮ್ಮ ಜೀವನವನ್ನು ಇದು ಬದಲಾಯಿಸುವದರಲ್ಲಿ ಸಂದೇಹವಿಲ್ಲ.
ಉತ್ತಮವಾದ ವಿಚಾರ....ಲೇಖನ...
ReplyDeleteಧನ್ಯವಾದಗಳು
ಒಳ್ಳೆಯ ಲೇಖನ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಮೇಡಂ, ಒಂದು ಉತ್ತಮ ಮಾಹಿತಿಯುಳ್ಳ, ವಿಚಾರವುಳ್ಳವುಗಳನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು.
ReplyDeleteಚಂದ್ರು
Read this book: ಪುಸ್ತಕದ ಹೆಸರು: Many Manisions – “The Edgar Cayce Story On Reincarnation”. ಬರೆದವರು: Gina Cerminaria [ಗಿನಾ ಸರ್ಮಿನಾರಾ (ಏಪ್ರಿಲ್ ೧೯೧೪ - ಏಪ್ರಿಲ್ ೧೯೮೪). ಮನೋವಿಜ್ಙಾನದಲ್ಲಿ Ph.D ಪದವೀಧರೆ. ವಿಷಯದ ಕುರಿತು ಸುದೀರ್ಘ ಕಾಲ ಸಂಶೋಧನೆ ಮಾಡಿದ ಬಳಿಕ ಪ್ರಕಟಿಸಿದ ಪುಸ್ತಕ ಇದು.] ಪ್ರಕಾಶನ: A Signet Bool from New American Library.
ReplyDelete