ಭಾವನೆಗಳು
ಹಾಸಬಾರದು
ಹಸನಾದ ನವಿರು ವಸ್ತ್ರವ
ಹಾದಿ ಬೀದಿಗಳಲ್ಲಿ,
ಹಗುರಾಗಿ ಮಡಿಸಿ
ಹದವಾಗಿ ನೇವರಿಸುತ್ತಾ
ಭದ್ರಪಡಿಸಬೇಕು
ಮನದ ಸಂದೂಕದಲ್ಲಿ.
ಸತ್ವ
ಬಡಿಬಡಿದು
ಬಡಿಗೆಯಾಗಿಯೇ ಸವೆಯಿತು
ಬಂಗಾರ ಹೊಳಪಾಯಿತು,
ಅರೆದರೆದು
ಗಾಣವಾಗಿಯೇ ಉಳಿಯಿತು
ಕಬ್ಬು ರಸವಾಗಿ ಹರಿಯಿತು.
ಹಾಸಬಾರದು
ಹಸನಾದ ನವಿರು ವಸ್ತ್ರವ
ಹಾದಿ ಬೀದಿಗಳಲ್ಲಿ,
ಹಗುರಾಗಿ ಮಡಿಸಿ
ಹದವಾಗಿ ನೇವರಿಸುತ್ತಾ
ಭದ್ರಪಡಿಸಬೇಕು
ಮನದ ಸಂದೂಕದಲ್ಲಿ.
ಸತ್ವ
ಬಡಿಬಡಿದು
ಬಡಿಗೆಯಾಗಿಯೇ ಸವೆಯಿತು
ಬಂಗಾರ ಹೊಳಪಾಯಿತು,
ಅರೆದರೆದು
ಗಾಣವಾಗಿಯೇ ಉಳಿಯಿತು
ಕಬ್ಬು ರಸವಾಗಿ ಹರಿಯಿತು.
ಭಾವನೆಗಳು : ನಿಜ ಭಾವನೆಗಳು ಸಾರ್ವಜನಿಕವಾದಾಗ, ಅಲ್ಲಿ ಮುಳ್ಳುಗಂಟಿಗಳು ಹರಿಯಲು ಕಾಯುವವು!
ReplyDeleteಸತ್ವ: ಇದು ಮೇಸ್ಟ್ರು - ಶಿಷ್ಯರ ಸಂಬಂಧದ ಕಲ್ಪನೆಯ ಚಿತ್ರಣ.
'ಸತ್ವ' ಹನಿ ಸತ್ಯವಾಗಿದೆ.... ಜೀವನ ಕೂಡ ಹಾಗೆ ಅಲ್ಲವೇ,ಕೆಲವೊಮ್ಮೆ ಸವೆಯುವವರು ಒಬ್ಬರು,ಅನುಭವಿಸುವರು ಒಬ್ಬರು...
ReplyDeleteYou have told some beautiful truths.
ReplyDeleteSuper Madam....
ReplyDeleteಅದ್ಭುತ ಸತ್ಯಗಳ ಅನಾವರಣ....
ReplyDelete