ಪರಿಣಾಮ
ಕೇಳಿ ದೀಪಾವಳಿಯ
ಆಟಂಬಾಂಬಿನ
ಆರ್ಭಟ
ವರುಣ ದೇವನೂ
ತಟಸ್ಥನಾಗಿಬಿಟ್ಟ!
ಉಳಿತಾಯ
`ದೀಪದಿಂದ ದೀಪ ಹಚ್ಚು’
ಇದು ಸತ್ಸಂಪ್ರದಾಯ
`ದೀಪ ಬೆಳಗಿ ದೀಪ ಆರಿಸು
ನೀನಿದ್ದಲ್ಲಿ ಮಾತ್ರ
ಪ್ರತಿದೀಪ್ತ
ದೀಪ ಪ್ರಕಾಶಿಸು’
ಎಂದರೆ ವಿದ್ಯುಚ್ಛಕ್ತಿಯ
ಉಳಿತಾಯ!
`ಬಲಿ’ ಪಾಡ್ಯಮಿ
ಅಂದು
`ಬಲಿ’ ಬಂದ ಮೂರು ಗಳಿಗೆ
ಕಾಣುತ್ತಿದ್ದ ಭುವಿಯಲೆಲ್ಲಾ
ಸುಭಿಕ್ಷ್ಯ ಸಂಭ್ರಮ,
ಇಂದು
ಬರಲಾರನವ ಕಾಣಲು
`ಬರ’ ತುಂಬಿದ
ಭೂಮಿಯ
ದೌರ್ಭಾಗ್ಯ ವಿಭ್ರಮ.
ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು…
ತುಂಬಾ ಚೆನ್ನಾಗಿದೆ ತಾಯಿ... ದೀಪಗಳ ಹನಿಗಳು... ನಗೆಯ ಬೆಳಕು ಮನ - ಮನೆಯ ಬೆಳಗಳಲಿ...
ReplyDeleteಚೆಂದದ ಹನಿಗಳು.ಹಬ್ಬದ ಶುಭಾಶಯಗಳು.ಬ್ಲಾಗಿಗೆ ಬನ್ನಿ.ನಮಸ್ಕಾರ.
ReplyDeleteಮೂರು ಹನಿಗಳ ಅಂತಃಸತ್ವ ವಿಶಿಷ್ಟವಾಗಿದೆ. ಇಂದಿನ ಆಧುನಿಕತೆಯ ಅಭಿಶಾಪ ಪಟಾಕಿ! ಬರದ ವಿಶ್ಲೇಷಣೆಯು ಮ್ಲಾನವಾಗಿಸಿತು.
ReplyDeleteಪ್ರಭಾಮಣಿಯವರೆ,
ReplyDeleteನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ` ದೀಪಾವಳಿಯ ಶುಭಾಶಯಗಳು':)
ReplyDeleteಚಂದದ ಹನಿಗಳು ಮೇಡಂ..
ReplyDeleteತಡವಾಯಿತು.. ದೀಪಾವಳಿಯ ಶುಭಾಶಯಗಳು...