Sunday, January 6, 2013

ಮಳೆ `ಹನಿ'ಗಳು


ವ್ಯರ್ಥ

ಅಂಬರ ತುಂಬಿದ
ಹಿಂಜಿದ ಅರಳೆ
ಹನಿಸಲಾಗದು ಮಳೆ
ತಣಿಸಲಾಗದು ಇಳೆ!

ಗುರಿ

ತೇಲಿ ಸಾಗುತಿಹ
ಕಾರ್ಮುಗಿಲೇ
ನಿನ್ನ ಗುರಿ ಎತ್ತ?
ಮಳೆ ಸುರಿಸಿ
ಇಳೆ ಗೆಳತಿಗೆ
ಹಸಿರುಡಿಸುವತ್ತ!

ಸಾಪೇಕ್ಷ

ಕಾರ್ಮುಗಿಲು ಕವಿದಾಗ
ಸ್ಪಷ್ಟವಾಗುವುದು ಮಿಂಚು
ಸ್ವಚ್ಛ ಅಂಬರಕೆ
ಕನಸಲಾಗದ ಪೇಚು!



2 comments:

  1. ಸುಂದರ ಹನಿಗಳು
    ಹಸಿರುಡಿಸುವ ಕಾಲ ಬೇಗ ಬರಲಿ

    ReplyDelete