ಏಕೆ?
ನಾನೆಷ್ಟೇ ಧೇನಿಸಿ
ನಿನ್ನೊಡನಿರಲೆಳೆಸಿದಷ್ಟೂ
ನೀ ನನ್ನ ಹೊರದಬ್ಬಿ
ಕದವದೂಡುವೆಯೇಕೆ?
ಅತೃಪ್ತ!
ತು೦ಬಿ ತುಳುಕುತ್ತಾ
ಎದ್ದೆದ್ದು ಹುಯ್ಲಿಡುವ
ಸಾಗರಕ್ಕೂ
ನದಿಗಳನೆಲ್ಲಾ...
ತನ್ನತ್ತಲೇ
ಸೆಳೆವ ಗೀಳು!
ನಿರ್ಧಾರ!
`ತೆಗೆದುಕೊಳ್ಳುವುದಿಲ್ಲ
ಇನ್ನೆ೦ದೂ ನಿರ್ಧಾರ'
ಎ೦ದುಕೊ೦ಡ
ಮರುಕ್ಷಣವೇ
ಹೊಳೆವುದು
`ಇದೂ ಒ೦ದು
ನಿರ್ಧಾರ!'
ನೆರಳು?
ಕತ್ತಲಲ್ಲಿ ಕುಳಿತಲ್ಲಿ
ಕಾಡುವ ನೆರಳೆಲ್ಲಿ?
ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿಬ೦ದ
ಮರದ ತು೦ಡನು
ಬಿಗಿದಪ್ಪುವ
ಜೀವ!
ನಾನೆಷ್ಟೇ ಧೇನಿಸಿ
ನಿನ್ನೊಡನಿರಲೆಳೆಸಿದಷ್ಟೂ
ನೀ ನನ್ನ ಹೊರದಬ್ಬಿ
ಕದವದೂಡುವೆಯೇಕೆ?
ಅತೃಪ್ತ!
ತು೦ಬಿ ತುಳುಕುತ್ತಾ
ಎದ್ದೆದ್ದು ಹುಯ್ಲಿಡುವ
ಸಾಗರಕ್ಕೂ
ನದಿಗಳನೆಲ್ಲಾ...
ತನ್ನತ್ತಲೇ
ಸೆಳೆವ ಗೀಳು!
ನಿರ್ಧಾರ!
`ತೆಗೆದುಕೊಳ್ಳುವುದಿಲ್ಲ
ಇನ್ನೆ೦ದೂ ನಿರ್ಧಾರ'
ಎ೦ದುಕೊ೦ಡ
ಮರುಕ್ಷಣವೇ
ಹೊಳೆವುದು
`ಇದೂ ಒ೦ದು
ನಿರ್ಧಾರ!'
ನೆರಳು?
ಕತ್ತಲಲ್ಲಿ ಕುಳಿತಲ್ಲಿ
ಕಾಡುವ ನೆರಳೆಲ್ಲಿ?
ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿಬ೦ದ
ಮರದ ತು೦ಡನು
ಬಿಗಿದಪ್ಪುವ
ಜೀವ!
sundara saalugaLu mam.. as always
ReplyDeleteಎಲ್ಲ ಹನಿಗಳೂ ಚೆನ್ನಾಗಿವೆ....
ReplyDelete`ತೆಗೆದುಕೊಳ್ಳುವುದಿಲ್ಲ
ಇನ್ನೆ೦ದೂ ನಿರ್ಧಾರ'
ಎ೦ದುಕೊ೦ಡ
ಮರುಕ್ಷಣವೇ
ಹೊಳೆವುದು
`ಇದೂ ಒ೦ದು
ನಿರ್ಧಾರ!'
ತುಂಬಾ ಇಷ್ಟವಾಯ್ತು....
ಸುಂದರ, ಅರ್ಥಪೂರ್ಣ ಹನಿಗಳು..ಅದರಲ್ಲೂ 2ನೆಯದ್ದು.
ReplyDeleteಹುಯ್ಲಿಡುವ ಸಾಗರದ ಗೀಳು ಕವನ ಇಷ್ಟವಾಯ್ತು
ReplyDelete