Saturday, October 19, 2013

`ಹನಿ'-honey

ಮೌಲ್ಯ?
ಹಿ೦ದೊಮ್ಮೆ
ವೇದಿಕೆಯ ಮೇಲೆ
ವಿಜೃ೦ಭಿಸುತ್ತಾ
ಪಡೆದಿದ್ದ ಟ್ರೋಫಿ,
ಇ೦ದೀಗ...
ಶೋಕೇಸ್ ನಲ್ಲೇ
ಮಾಸಿ
ಮೂಲೆಗು೦ಪಾಗಿದೆ!

ನೋವು
ಹುಟ್ಟಿನ ಮೂಲವೂ
ನೋವೇ
ನೋವಿಲ್ಲದ ನಿಶ್ಚಲ ಸ್ಥಿತಿ
ಸಾವೇ!(?)

ಸಾ೦ತ್ವನ!
ಈ ಭೂಮಿಯ ಮೇಲಿನ
ದಾಖಲೆಗಳಲ್ಲಿ
ನನ್ನದೆ೦ಬ
ಒ೦ದಿ೦ಚೂ ನೆಲವಿಲ್ಲ,
ಚಿ೦ತೆಯಿಲ್ಲ
ಭೂಮ್ಯಾಗಸಗಳನೆಲ್ಲಾ
ವ್ಯಾಪಿಸಬಲ್ಲ
ಅರಿವ ನೀ
ನೀಡಲಿರುವೆಯಲ್ಲ!

2 comments:

  1. ಮೂರು ಹನಿಗಳೂ ಬದುಕಿನ ಪರಿವರ್ತಕಗಳು

    ReplyDelete
  2. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಬದರಿ ಸರ್, ಬರುತ್ತಿರಿ.

    ReplyDelete