Sunday, June 28, 2015

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....








ತಾಸುಗಳಲ್ಲೇ ನಿಮಿಷಗಳು
ಸೆಕೆಂಡ್ಸ್
ಮೈಕ್ರೊ, ನ್ಯಾನೊ 
ಏನೇನೋ
ವ್ಯವಧಾನವಿಲ್ಲ
ಸೂಕ್ಷ್ಮಾತಿ ಸೂಕ್ಷ್ಮ
ಕಾಲ ಗಣನೆಗೆ
ಉರುಳುತ್ತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಜೂಟಾಟದಲ್ಲಿ...
ಚಲಿಸುತ್ತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?
`ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...’ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲೂ!
ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ
ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!
ಇರುಳನೇ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ
ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!
(image- web)

2 comments:

  1. ಕಾಲಚಕ್ರಕ್ಕೆ ನಾವು ಸಾಟಿಯೇ ಎನ್ನುವ ಮಾತು ಎಷ್ಟು ನಿಜ
    ಅಮೋಘ ಲಹರಿ ಹರಿದಿದೆ ನಿಮ್ಮ ಕಲ್ಪನೆ ಪದಗಳಾಗಿ ಸೂಪರ್ ಸೂಪರ್ ಮೇಡಂ

    ReplyDelete
    Replies
    1. ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಶ್ರೀಕಾ೦ತರವರೇ, ವ೦ದನೆಗಳು.

      Delete