Thursday, October 6, 2016

ಅ೦ದಿನ ಬರಹ ಇ೦ದಿನ ಓದಿಗೆ - ಲಲಿತ ಪ್ರಬ೦ಧ `ಕಾಫ್ಯಾತುರಾಣಾ೦..........'

ಅ೦ದಿನ ಬರಹ ಇ೦ದಿನ ಓದಿಗೆ::)

2008ರ 'ಮಯೂರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ  `

Monday, September 19, 2016

`ಹನಿ'ಗವನಗಳು


ಮಿಂಚು!

ಥಟ್ಟನೆ ಹೊಳೆವ
ಮಿಂಚು
ಕೀಲಿಸಿದ
ಕಣ್ಣಿಗಷ್ಟೇ ಗೋಚರ,
ಹೃದಯಾಂತರಾಳದಲಿ
ವಿದ್ಯುತ್ ಸಂಚಾರ!


ಶುಚಿ?

ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿಶುದ್ಧ!

ತುಳಿತ

ತುಳಿಸಿಕೊಳ್ಳಲೂ ಬಾರದು
ತುಳಿಯಲೂ ಬಾರದು
ಎಂದು ಒತ್ತಟ್ಟಿಗಿರಲು
ಪ್ರಯತ್ನಿಸಿದಷ್ಟೂ.....
ತುಳಿತಗಳ
ಒತ್ತಡವೇರುತಿದೆ
ಒಲುಮೆಗಿಲ್ಲಿ ತಾವಿಲ್ಲವೆ?










Thursday, August 18, 2016

'ನಮಗೆ ನಾವೇ ಪರಕೀಯರು'

ದಿನಾಂಕ 13_8_2016ರ ಬೋಧಿವೃಕ್ಷದಲ್ಲಿ ನಮ್ಮ ಅಂತರಂಗದ ಅವಶ್ಯಕತೆಗಳನ್ನು ಗಮನಿಸದಿದ್ದರೆ ಹೇಗೆ ನಮಗೆ ನಾವೇ ಪರಕೀಯರಾಗುತ್ತೇವೆ ಎಂಬುದನ್ನು ಕುರಿತಂತೆ ನನ್ನ ಮಗಳು ಸುಷ್ಮಸಿಂಧುವಿನ ಲೇಖನ 'ನಮಗೆ ನಾವೇ ಪರಕೀಯರು' ಪ್ರಕಟಗೊಂಡಿದೆ. ನೋಡಿ ನಿಮಗೇನನಿಸಿತು ಹಂಚಿಕೊಳ್ಳಿ 

Monday, July 25, 2016

ಹನಿ - `ಆಸರೆ'

ಆಸರೆ

ನನ್ನಾಂತರ್ಯಕೆ
ಸಾಂತ್ವನ ನೀಡಿ
ಮುನ್ನಡೆಸುತ್ತಿದ್ದ
ಸಾಥಿ ನೀನು
ದಬ್ಬಿ ಹೊರ ದೂಡದಿರು
ಮತ್ತೊಮ್ಮೆ
ತಬ್ಬಲಿಯಾಗುವೆನೆಂಬ
ಭಯವಿದೆ!








Sunday, July 24, 2016

ಪ್ರಕೃತಿಯ ಹಸಿರುಡುಗೆ :)

ಈವರೆಗೆ ಒಂದಾದರೂ ಫಲವನ್ನು ಬಿಡಲಾಗದ ಪುಷ್ಪಭರಿತ ಪಪ್ಪಾಯಿಗೆ ಪ್ರಕೃತಿಯ ಹಸಿರುಡುಗೆ :)


                                                       

Sunday, July 17, 2016

ಹನಿ - `ನಾನು-ನೀನು'

ನಾನು-ನೀನು

ನಾನು ನೀನಾದಾಗ
ಸಕಲ ಕಾರ್ಯಗಳೂ
ಫಲಿತ
ಸಮತೋಲಿತ,
ನಾನು ನಾನೇ ಆದಾಗ
ಅಬ್ಬರದ ಉಬ್ಬರ
ಎಣೆಯಿಲ್ಲದಿಳಿತ

ಆಗಾಗ ಸ್ಥಗಿತ!

Sunday, July 10, 2016

ಅ೦ದಿನ ಬರಹ ಇ೦ದಿನ ಓದಿಗೆ - ಲಲಿತ ಪ್ರಬ೦ಧ `ಗೊಮೆಯ ಸುತ್ತಮುತ್ತ'

ಅ೦ದಿನ ಬರಹ ಇ೦ದಿನ ಓದಿಗೆ::)
21-05-2006ರ 'ಕರ್ಮವೀರ' ದಲ್ಲಿ ಪ್ರಕಟವಾಗಿದ್ದ ನನ್ನ ಲಲಿತ ಪ್ರಬ೦ಧ `ಗೊಮೆಯ ಸುತ್ತಮುತ್ತ'