Saturday, January 21, 2012

ಆಸ್ಫೋಟ

ತೆರೆದಿತ್ತು ಮೇಲ್ಮೈ

ಅವಕಾಶಕ್ಕ೦ದು

ನಿರ೦ತರ ಆವೀಕರಣ

ನಿರಾಳ

ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ

ಮಿತಿ ಮೀರಿದ

ಬಾಹ್ಯದೊತ್ತಾಯ

ಹಬೆಯ ಹೊರ

ನೂಕಲೂ ಆಗದೇ

ಇ೦ಗಲೂ ಬಿಡದೇ

ಆ೦ತರ್ಯದಲೇ

ಕುದ್ದು ಕುದ್ದು...

ಅಧಿಕವಾದ

ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ

ಆಸ್ಫೋಟಕೆ!

6 comments:

  1. ಆಸ್ಫೋಟದ ಪಥವನ್ನು ಸೊಗಸಾಗಿ ಚಿತ್ರಿಸಿದ್ದೀರಿ!

    ReplyDelete
  2. 'ಅಂತರಂಗದ ಒತ್ತಡ...... ಆಸ್ಫೋಟಕ್ಕೆ ಕ್ಷಣ ಗಣನೆ',ಇದು ನಮ್ಮೆಲ್ಲರ ದೈನಂದಿನ ಸ್ಥಿತಿಯಲ್ಲವೇ?'. ಸುಂದರ ಕವನ.ಅಭಿನಂದನೆಗಳು.

    ReplyDelete
  3. ಮನೋ ಆಸ್ಫೋಟದ ಸವಿವರ ಚಿತ್ರಣ...

    ReplyDelete
  4. ಆ೦ತರ್ಯದಲೇ ಕುದ್ದು ಕುದ್ದು...ಅಧಿಕವಾದ ಅ೦ತರ೦ಗದೊತ್ತಡ... ನೋವು,ದ್ವೇಷಗಳನ್ನು ಮನುಷ್ಯ ತನ್ನೊಳಗೆ ಇಟ್ಟಿಕೊಂಡರೆ ಅದು ಕೂಡ ಜಾಸ್ತಿ ಆಗಿ ಮುಂದೊಂದು ದಿನ ಆಸ್ಪೋಟವಾಗುತ್ತದೆ ಎಂದು ಭಾವಿಸಬಹುದೇ ?

    ಚೆನ್ನಾಗಿದೆ ನಿಮ್ಮ ಸಾಲುಗಳು...

    ReplyDelete
  5. ಒಂದೊಂದೂ ಪದ ನಮ್ಮನ್ನು ಕವನದ ಆಂತರ್ಯಕ್ಕೆ ನೂಕದೇ ಇರದು.....

    ReplyDelete