Saturday, July 21, 2012

ಶೋಧ

ಕತ್ತೆ ಹುಡುಕುತಿದೆ
ಕಸದ ತೊಟ್ಟಿಯಲಿ

ಬೇಡವೆ೦ದು ಎಸೆದ
ತ್ಯಾಜ್ಯಗಳ ನಡುವೆ ತನ್ನ
ಮುಸುಡಿಯ
ಮು೦ದೂಡಿದಷ್ಟೂ
ಅಡ್ಡಡ್ಡಲಾಗುವ
ಅಡ್ಡಿಗಳು

ಉಸಿರುಕಟ್ಟಿಸುವ ಪ್ಲಾ
ಸ್ಟಿಕ್ಕುಗಳ ಸಿಕ್ಕು!
ಜಗ್ಗದ-ಕುಗ್ಗದ
ಕರಗದ
ಶಿಥಿಲೀಯವಲ್ಲದ
ರಸವನ್ನೇ
ವಸರಿಸಲಾಗದ
ವರ್ಣ ವೈಖರಿಗಳು!

ತು೦ಬಲಾಗದಿದು ತನ್ನ
ತುತ್ತಿನ ಚೀಲವ
ಹೊಟ್ಟೆಗೇ ಕತ್ತರಿ
ಹಾಕಿರುವ
ನಾಗರೀಕತೆಯ
ನಾಗಾಲೋಟ
ಎತ್ತ ತಲುಪಬಹುದೀ
ಹುಲು
ಮನುಜನ ಆಟ?

ನನ್ನಮ್ಮನುದರದ
ಪದರ
ಪದರಕ್ಕಿಳಿಯುತ್ತಿರುವ
ಈ (ಅ)ಪಾರದರ್ಶಕಗಳೇ
ಭವಿಷ್ಯದ
ಪಳಯುಳಿಕೆಗಳು!

ಕಾಗದದ ರುಚಿ
ಇನ್ನು
ಕನಸಿನ ಮಾತೇ,
ಛೀ
ಹುಡುಕಿ ಹುಡುಕಿ
ಹೊಟ್ಟೆ
ತು೦ಬಿಸಿಕೊಳ್ಳಲಾಗದೇ
ಸೋತೆ!




11 comments:

  1. ಈ ಅಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆ ಮನುಷ್ಯನ ನಾಗರಿಕತೆಯ ಪರಮಾವಧಿ ಆದರೂ ಕೂಡ ಕೆಲವು ಮೂಕ ಪ್ರಾಣಿಗಳ ಮತ್ತು ಪರಿಸರದ ಒಡನಾಡಿಗಳು(ಪ್ರಾಣಿ,ಪಕ್ಷಿ,ಕೀಟಗಳು) ಇವುಗಳ ಕಣ್ಣಿನಲ್ಲಿ ಅದು ಅನಾಗರಿಕತೆಯೇ ಎಂದು ಹೇಳಬಹುದು...
    ಎತ್ತ ತಲುಪಬಹುದಿ ಹುಲು ಮನುಜನ ಆಟ? ಎಂಬ ಪ್ರಶ್ನೆಗೆ ಉತ್ತರ ಅಂದರೆ ಅದು ಕೇವಲ ನಿಸರ್ಗದ ಸೌಂದರ್ಯದ ಅಂತ್ಯ ಎಂದು ಹೇಳಬಹುದಲ್ಲವೇ...

    ReplyDelete
    Replies
    1. ನಿಮ್ಮ ಮಾತು ನಿಜ ಗಿರೀಶ್, ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
  2. ಮೇಡಂ;ಕತ್ತೆಗಲಿಗಲ್ಲ ಹಸುಗಳಿಗೂ ಇಲ್ಲಿ ಇದೇ ಪರಿಸ್ಥಿತಿ!!ಕಸದ ತೊಟ್ಟಿಯಲ್ಲಿ ಹಾಕಿದ ಪ್ಲ್ಯಾಸ್ಟಿಕ್ ನಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ....ಪಾಪ!ಸರ್ವಂ ಪ್ಲ್ಯಾಸ್ಟಿಕ್ ಮಯಂ ಜಗತ್ !!!

    ReplyDelete
  3. thumbaa chennaagide kavana.plaastic balakeyinda untaaguva maalinyada bagge sogasaagi vivarisiddeera..edu ondu vaichaarika kavana ende helabahudu.

    ReplyDelete
  4. ಹೌದು ಸರ್, ಈಗ ಭೂಮಿ ಅಗೆದರೆ ಪದರ ಪದರದಲ್ಲೂ ಪ್ಲಾಸ್ಟಿಕ್! ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

    ReplyDelete
  5. ಬಹಳ ಚನ್ನಾಗಿದೆ ಕತ್ತೆಯ ಪರದಾಟದ ಕವನ....

    ReplyDelete
  6. ಪ್ಲಾಸ್ಟಿಕ್ಕಿನ ವಿಸ್ವವ್ಯಾಪಿ ಸಮಸ್ಯೆಯನ್ನು ಕತ್ತೆಯ ಬಾಯಲ್ಲಿ ಹೇಳಿಸಿದ್ದೀರ.

    ಮಾನವನ ಈ ಹುಚ್ಚು ಜಗವನ್ನೇ ಹಾಳು ಮಾಡುತ್ತದ್ದರೂ ಅವನಿಗಿನ್ನೂ ಅದರ ಕಾವು ತಟ್ಟಿಲ್ಲ!

    ಪದ ಪ್ರಯೋಗ ಮತ್ತು ಭಾವ ಪೂರ್ಣ ಕವನ.

    ReplyDelete
  7. ನಾವು ಭಸ್ಮಾಸುರಲ್ಲವೇ? ಆದ್ದರಿಂದ ಹೀಗಾಗುತ್ತಿದೆ.

    ReplyDelete
  8. ಮೇಡಮ್,
    ಕತ್ತೆಯ ವಿಷಾದಗೀತವು ನಾಗರಿಕತೆಗೆ ಕೊಟ್ಟ ಎಚ್ಚರಿಕೆಯೇ ಆಗಿದೆ!

    ReplyDelete
  9. ಮೇಡಂ,

    ಕತ್ತೆಯ ಉದಾಹರಣೆಯನ್ನು ಕೊಟ್ಟು ಪ್ಲಾಸ್ಟಿಕ್ ಬಳಕೆಯ ಅನಾಹುತ ದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ.....ಮಾನವನಿಗೆ ಎಷ್ಟು ಹೇಳಿದರೂ ತನ್ನ ಚಾಡಿ ಬಿಡುವುದಿಲ್ಲ....ಪರಿಸರವನ್ನು ಮಲೀನಗೊಳಿಸಿ ತನ್ನನ್ನೇ ಅಪಾಯದಲ್ಲಿ ಸಿಲುಕಿಸಿಕೊಳ್ಳುತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.....ಚೆನ್ನಾಗಿದೆ ನಿಮ್ಮ ಕವನ...

    ReplyDelete
  10. prabhamaniyavare tumba arthagarbhitavaada kavana.
    namma arive plastik aagide.anantira?

    ReplyDelete