ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ
ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ
ಹಬೆಯ ಹೊರ
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ
ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!
ಅಂತರಿಕ ಒತ್ತಡದ ಬಗ್ಗೆ ಚೆಂದದ ಕವನ.
ReplyDeleteಒಳಾವರಣ ತುಸು ಬಾಹ್ಯಕ್ಕೂ ತೆರೆದಿಟ್ಟರೆ ತಾನೆ ಒಳ ಕುಡಿಯ ಆವಿ ಹೊರ ನುಸುಳಿ ಒಳ ಒತ್ತಡ ಕಮ್ಮಿಯಾಗೋದು?
ReplyDeleteಒಳಗಿನ ಒತ್ತಡ ಸಿಡಿಯುವ ಸಮಯ ಬರುತಲಿದೆ...
ReplyDeleteಚೆನ್ನಾಗಿದೆ...
ಆಸ್ಫೋಟದ ಪ್ರಕ್ರಿಯೆಯ ಉತ್ತಮ ವರ್ಣನೆ!
ReplyDelete