ಆಗಬಹುದಿತ್ತೊಂದು
ಬೃಹತ್ ಪ್ರತಿಮೆ
ಸಾರುತ್ತಾ
ಎಲ್ಲೆಡೆ ಹಿರಿಮೆ
ಭವ್ಯ ಕಟ್ಟಡದ
ಆಧಾರ ಸ್ಥಂಭ
ಅಥವಾ
ದೇಗುಲದ
ಗರುಡಗಂಬ
ನಾಗಾಲೋಟದ
ನಾಗರೀಕತೆಯ ಮೆಟ್ಟಿಲು
ಹಳ್ಳದಾಟುವ ಅಡ್ಡಗಲ್ಲು
ಗುಡ್ಡದ ಮೇಲಿನ
ಭೀಮಶಿಲೆ
ಮೈತುಂಬಿದ
ಭವ್ಯಕಲೆ
ಜಿಬ್ರಾಲ್ಟರದ
ಮಹಾಬಂಡೆ
ಅಟ್ಲಾಂಟಿಕಾದ
ಅದ್ಭುತ ನೋಟ!
ಆಗದೇ ಹುದುಗಿದೆ
ಈ ನದಿಯೊಳಗೆ
ಮನದೊಳಗೇ...
ಮೆಲ್ಲುತ್ತಾ ಮಂಡಿಗೆ
ಸುತ್ತಲಿನ ಅಹಂಭಾವ
ಆರ್ಭಟಗಳಿಗೆಲ್ಲಾ
ಮೂಕ ಶ್ರೋತೃ
ಮೌನ ಪ್ರೇಕ್ಷಕ!
(ಬಹಳ ವರ್ಷಗಳ ಹಿ೦ದೆ ಬರೆದಿದ್ದ ಈ ಕವನವನ್ನು ಈಗ ಓದಲು
ನಿಮ್ಮ ಮು೦ದಿಡುತ್ತಿದ್ದೇನೆ.)
ನಮ್ಮಲ್ಲಿ ಹಲವಾರು ಮಂದಿ ಈ ಹೆಬ್ಬಂಡೆ ಯಂತೆಯೇ ಅಲ್ಲವೇ ? ಏನಾದರೂ ಆಗಬಹುದಿತ್ತು!!! ಆದರೆ ಅಲ್ಲೆಲ್ಲೋ ಮರೆಯಾಗಿ ,ನದಿಯೊಳಗಿನ ಹೆಬ್ಬಂಡೆ ಯಾಗಿ ,ಮನದಲ್ಲೇ ಮಂಡಿಗೆ ಮೆಲ್ಲುತ್ತಾ ಕಳೆದು ಬಿಡುತ್ತೇವೆ!!! ಸುಂದರ ಕವನ !!!ಅಭಿನಂದನೆ ಗಳು.
ReplyDeleteನಮ್ಮ ಬಗ್ಗೆಯೇ ಬರೆದಂತಿದೆ ಮಾನ್ಯ ಕವಿಯತ್ರಿ! ಬರೀ ಕಳ್ಳಮ್ಟೆ ಉಳಿದು ಹೋದ ನನಗೆ ದಕ್ಕಲಿಲ್ಲ ಯಾವುದು ಪಾತ್ರ...
ReplyDelete