Wednesday, December 12, 2012

ಮಲಗಿದ್ದಾನೆ...


ಮಲಗಿದ್ದಾನೆ ಈತ 
ಉದ್ದಂಡ
ಮಣ್ಣನ್ನೇ ನಂಬಿದವನು
ಮಣ್ಣಾಗಲು ಸಜ್ಜಾಗಿ

ತಲತಲಾಂತರದಿಂದ
ತುಂಡು ಭೂಮಿಯಿಂದಲೇ
ಹೊಟ್ಟೆ ಹೊರೆದಿದ್ದರು
ಇವನ ಅಜ್ಜ
ಮುತ್ತಜ್ಜಂದಿರು
ತಲೆಗಾದರೆ
ಕಾಲಿಗಿಲ್ಲವೆಂದಿದ್ದರೂ

ಆದರೀಗ ಆಮಿಷಗಳ
ಬಿಸಿಲುಗುದುರೆ
ಏರಿಹೊರಟವ
ಬೆಳೆಸಾಲ ಕಳೆಸಾಲ...
ಸಾಲಗಳ ಬಲೆಯೊಳಗೇ ...
ಆಕಾಶಕ್ಕೇ ಹಾಕಿದ್ದ ನೂಲೇಣಿ!


ಲಕ್ಷ ಲಕ್ಷ ಎಣಿಸುವ ಕನಸಲ್ಲಿ
ವಾಸ್ತವವನ್ನೇ ಅಲಕ್ಷಿಸಿ
ಆಶ್ರಿತರನ್ನೇ ಅನಾಥರಾಗಿಸಿ
ಚಕ್ರವ್ಯೂಹ ಭೇದಿಸಲಾಗದೇ
ಬಿದ್ದಿದ್ದಾನೆ ಉದ್ದಂಡ
ಜಾಗತೀಕರಣದ ಫಲವೀ
ತಲೆದಂಡ.


4 comments:

  1. ವಿಷಾದಪೂರ್ಣವಾದ ವಾಸ್ತವತೆ!

    ReplyDelete
  2. ವಾವ್.... ಮನ ತಟ್ಟಿದ ಕವನ... ಎಷ್ಟೋಂದು ಅರ್ಥ ತುಂಬಿದೆ ಈ ಕವನದಲ್ಲಿ.... ನಿಜಕ್ಕೂ ಮನ ಮೂಕವಾಯಿತು...

    ReplyDelete
  3. ಸಂಸದ್ ಭವನದಲ್ಲಿ ಕುಳಿತು ಸಬ್ಸೀಡಿ ವಾಪಸ್ಸಾತಿ ಬಗ್ಗೆ ಮಾತನಾಡುವ ಕೆಟ್ಟ ರಾಜಕಾರಣಿಗಳು ಇರುವ ತನಕ ನಮ್ಮ ರೈತಾಪಿ ಸಂಕಷ್ಟ ತೀರದು.

    ವ್ಯವಸಾಯ ಎಂದರೆ
    ನೀನ್ ಸಾಯ ನಾನ್ ಸಾಯ
    ಎನ್ನುವ ಚಲನಚಿತ್ರವೊಂದರ ಮಾತು ನೆನಪಾಯ್ತು.

    ReplyDelete
  4. ಈ ದುರ೦ತ ಕವನವನ್ನು ಓದಿ ಸ್ಪ೦ದಿಸಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ಬರುತ್ತಿರಿ.

    ReplyDelete