Sunday, December 2, 2012

`ಹನಿ'ಗಳು

ನಷ್ಟ


ಕಳೆದು ಹೋದ

ಆಲಿಕಲ್ಲ

ಹುಡುಕುವ        

ಸಡಗರದಲ್ಲಿ

ಕೈಯಲಿದ್ದುದು

ಕರಗಿ

ನೀರು



ಸಾಪೇಕ್ಷ

ಕಾರ್ಮುಗಿಲು ಕವಿದಾಗ

ಸ್ಪಷ್ಟವಾಗುವುದು ಮಿಂಚು

ಸ್ವಚ್ಛ ಅಂಬರಕೆ

ಕನಸಲಾಗದ ಪೇಚು!


ವ್ಯರ್ಥ

ಅಂಬರ ತುಂಬಿದ

ಹಿಂಜಿದ ಅರಳೆ

ಹನಿಸಲಾಗದು ಮಳೆ

ತಣಿಸಲಾಗದು ಇಳೆ!

2 comments:

  1. ಮೂರು ಹನಿಗಳಲ್ಲಿ ಅಡಗಿರುವ ಜೀವನಾರ್ಥ ಸೆಳೆಯಿತು.

    ReplyDelete