Sunday, March 28, 2010

ಆನಂದ

ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆತು೦ಬಿದ ಬಯಲು
ಇಳಿದಿದ್ದೇನೆ
ಆರಿಸಿ ಕೊಯ್ಯಲು
ಕಣಜ ತುಂಬಿದ ನಂತರ
ಹದವರಿತು ಬಿತ್ತಲು!

(೦೩-೦೪-೦೫ರ 'ಕರ್ಮವೀರ'ದಲ್ಲಿ ಪ್ರಕಟವಾಗಿದೆ.)

ನಿರ್ಲಿಪ್ತ

ಸೆಣಸುವೆ ಏಕೆ
ಅವಿರತ
ನನ್ನ ಮೇಲಿನ ಜಯಕ್ಕಾಗಿ
ಜಯ, ಅಪಜಯ
ಅಪ್ರಸ್ತುತ
ನಾನೀಗ...
ತಟಸ್ಥ!

( ಏಪ್ರಿಲ್ ೨೦೦೩ 'ಮಯೂರ'ದಲ್ಲಿ ಪ್ರಕಟವಾಗಿದೆ.)

ವೈರುಧ್ಯ

ಜನಜಂಗುಳಿಯ ನಡುವೆ
ಬಿದ್ದಿರುವ ರಸ್ತೆ
ಒಂಟಿ, ಮೌನಿ.
ಜನರ ತನ್ನತ್ತ ಸೆಳೆವ
ಸಾಗರದ್ದೋ
ಎದ್ದೆದ್ದು ಅಲೆಗಳ ಅಟ್ಟುವ
ಅಬ್ಬರವೋ ಅಬ್ಬರ!

(ದೀಪಾವಳಿ ಸಂಚಿಕೆ-೨೦೦೪ರ 'ಮಂಗಳ'ದಲ್ಲಿ ಪ್ರಕಟವಾಗಿದೆ.)