Friday, July 28, 2017

ಹಾರುವ ಹಕ್ಕಿಯ ಮೇಲೇರಿ!

ಹಾರುವ ಹಕ್ಕಿಯ ಮೇಲೇರಿ!

ಮೇಲೇರುವವರೆಗೂ
ಮುಗಿಯದೆನಿಸುವ ಓಟ
ತುಯ್ದಾಟ

ಏರಿ ಮುಗಿಲ ಪಥ
ಸೇರಿದಾಕ್ಷಣವೇ
ನಿಶ್ಚಲವೆನಿಸುವ ಅಬ್ಬರದ ಮೌನ
ನಿರಂತರವೆನಿಸುವ ಪಯಣ!

       ~ಪ್ರಭಾಮಣಿ ನಾಗರಾಜ

Thursday, July 6, 2017

ಲಲಿತ ಪ್ರಬಂಧ - 'ಕ್ಯಾಮೆರಾ ಪ್ರೇಮ'

ದಿನಾಂಕ: 02-07-2017ರ 'ವಿಶ್ವವಾಣಿ'ಯ 'ವಿರಾಮ'ದಲ್ಲಿ ನನ್ನ ಲಲಿತ ಪ್ರಬಂಧ 'ಕ್ಯಾಮೆರಾ ಪ್ರೇಮ' ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ . ಧನ್ಯವಾದಗಳು 😊  ಲಿಂಕ್ ಇಲ್ಲಿದೆ.http://epaper.vishwavani.news/bng/e/bng/02-07-2017/17

Thursday, June 8, 2017

ಲಲಿತ ಪ್ರಬಂಧ 'ಕೆಮ್ಮು ಕೆಮ್ಮೆಂದೇಕೆ...'

ದಿನಾಂಕ: 04-06-2017ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ನನ್ನ ಲಲಿತ ಪ್ರಬಂಧ 'ಕೆಮ್ಮು ಕೆಮ್ಮೆಂದೇಕೆ...'ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ . ಧನ್ಯವಾದಗಳು 😊ಲಿಂಕ್ ಇಲ್ಲಿದೆ.http://epaper.samyukthakarnataka.com/…/Samyukth…/04-06-2017…
ಪತ್ರಿಕೆಯ ಸಂಪದಕವರ್ಗಕ್ಕೆ ಧನ್ಯವಾದಗಳು 😊


Monday, May 29, 2017

ಪ್ರಬ0ಧ - `ಅಟ್ಟಡುಗೆ'

ಜೂನ್,2017ರ ತುಷಾರದಲ್ಲಿ ಪ್ರಕಟವಾದ ನನ್ನ ಪ್ರಬ0ಧ - `ಅಟ್ಟಡುಗೆ' ಇಲ್ಲಿದೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ :) ತುಷಾರ 
ಸಂಪಾದಕ ಮಂಡಳಿಗೆ ಧನ್ಯವಾದಗಳು :)
😊

Wednesday, April 19, 2017

ಬೇಸಿಗೆ ಶಿಬಿರದ ಉದ್ಘಾಟನೆ & ಅಂಬೇಡ್ಕರ್ ಜಯಂತಿ

ಹಾಸನ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟ, ಸ್ಪಂದನ ಸಿರಿ ವೇದಿಕೆ, ಹಾಸನ ಹಾಗೂ ಕದಳಿ ಮಹಿಳಾ ವೇದಿಕೆ, ಹಾಸನ ವತಿಯಿಂದ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಬೇಸಿಗೆ ಶಿಬಿರದ ಉದ್ಘಾಟನೆ. ಅಂಬೇಡ್ಕರ್ ಜಯಂತಿಯನ್ನು ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ ಮೇಡಂರವರ ಅಧ್ಯಕ್ಷತೆಯಲ್ಲಿ ಆಚರಿಸಲಾದ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣಗಳು: ಆಹ್ವಾನಿಸಿದ ವೇದಿಕೆಯ ಅಧ್ಯಕ್ಷರಾದ ಕಲಾವತಿKala Madhuಯವರಿಗೆ ಧನ್ಯವಾದಗಳು 😊
pc: ಗೀತಾ
Sunday, April 2, 2017

ಹನಿ - `ಶುಚಿ?'


ಮೇಲ್ಮೈಗಷ್ಟೇ ಸೀಮಿತವಾದ
ದೇಹ-ಮನ
ಆಗಾಗ ಕಲುಷಿತ,
ಆಳ ಆಳದಿ ಹುದುಗಿರುವ
ಅಂತರಾತ್ಮವೋ
ಶುದ್ಧಾತಿ ಶುದ್ಧ!