Monday, March 30, 2015

ಹನಿ -`ಮೌನ'


'ನಾನು', 'ನೀನು'
ಸಂಭೋದನೆಗಳಿಂದ
ಭಾವನೆಗಳೇ
ಛಿದ್ರ,
ನನ್ನಲ್ಲಿ ನೀನು
ನಿನ್ನಲ್ಲಿ ನಾನಾಗುವ
ಸಂಬಂಧದಿಂದ
ಬದುಕಿನ ಅಡಿಪಾಯ
ಭದ್ರ!

Saturday, March 7, 2015

`ಹನಿ' - ಶೂನ್ಯ


ಕಣ್ತೆರೆದು ನೋಡಿದೆ
ಎಲ್ಲವೂ ನನ್ನದಾಗಿತ್ತು
ಕಣ್ಮುಚ್ಚಿ ಕಂಡೆ
ನಾನೇ ಎಲ್ಲವೂ ಆಗಿ
ಇಲ್ಲವಾಗಿದ್ದೆ!

Friday, March 6, 2015

`ಹನಿ' - ಎಸೆದ ಕಲ್ಲು


ನೀರ ಮೇಲ್ಮೈಯಲ್ಲಿ
ಅಲೆಗಳೆಬ್ಬಿಸಿದ್ದು
ಆಳಕ್ಕಿಳಿದಂತೆ
ನಿಶ್ಚಲ!

Monday, March 2, 2015

`ಹನಿ' - ಸರ`ಹದ್ದು'


ಕಣ್ಗೆ ಕಾಪಿಟ್ಟ
ಕುದುರೆಯ ಬದುಕು
ತಾನು ತನ್ನದೆ೦ಬಷ್ಟಕ್ಕೇ
ಸೀಮಿತ,
ಕಣ್ಣಳತೆ ಮೀರಿ
ಮಹೋನ್ನತಿಗೇರಬಲ್ಲ
ಹದ್ದಿನದೋ
ಅಪರಿಮಿತ!