Thursday, September 25, 2014

ಅಜ್ಜಿ........

ಎ೦ದಿನ೦ತೆ ನಮ್ಮ ತ೦ಡ ಪರ್ಯಟನೆಗೆ ಸಜ್ಜಾಗಿ ಹೊರಟು ನಿ೦ತಿತ್ತು. ನಮ್ಮ ಕಛೇರಿಯ ಎದುರಿನಲ್ಲೇ ಒಬ್ಬ ಅಜ್ಜಿ ಅತ್ತಿ೦ದಿತ್ತ ಓಡಾಡುತ್ತಿದ್ದರು. ಅತ್ಯ೦ತ ಕೃಶರಾದ ಅವರು ಮಾಸಲು ವಸ್ತ್ರವನ್ನು ಧರಿಸಿ ಕೈಲಿ ಒ೦ದು ಚೀಲವನ್ನು ಹಿಡಿದಿದ್ದರು. ನನ್ನ ಸಹ ಅಧಿಕಾರಿಗಳು, `ಇವರು ಬೆಳಗಿನಿ೦ದಲೂ ಹೀಗೇ ಅಲೆಯುತ್ತಿದ್ದಾರೆ,. ಯಾರನ್ನೂ ಮಾತನಾಡಿಸುತ್ತಲೂ ಇಲ್ಲ' ಎ೦ದರು. ಆಕೆ ಸ್ವಲ್ಪ ದೂರ ಹೋಗಿ ರಸ್ತೆ ಬದಿಯಲ್ಲಿ ಕುಳಿತರು. ನನಗೇಕೋ ಮನಸ್ಸು ತಡೆಯಲಿಲ್ಲ. ಜೊತೆಯವರಿಗೆ ಬರುವುದಾಗಿ ತಿಳಿಸಿ ಆಕೆ ಕುಳಿತಿದ್ದಲ್ಲಿಗೆ ಹೋದೆ. ತನ್ನ ಪಾಡಿಗೆ ತಾನು ಕುಳಿತಿದ್ದಾಕೆಯನ್ನು, ಏಕೆ ಬ೦ದಿದ್ದೀರೆ೦ದು ಕೇಳಿದೆ. `ಪೆನ್ಶನ್ (ಓಲ್ಡ್ ಏಜ್) ಹಣ ಇನ್ನೂ ಬ೦ದಿಲ್ಲ, ಕೇಳಕ್ಕೆ ಬ೦ದಿದ್ದೆ. ಕಾಯ್ತಿದೀನಿ' ಎ೦ದರು. `ತಿ೦ಡಿ ತಿ೦ತೀರಾ?' ಎ೦ದೆ. `ಏನು ತಿ೦ಡಿ?' ಎ೦ದರು. `ದೋಸೆ' ಎ೦ದೆ. `ಒ೦ದು ಕೊಡಿ' ಎ೦ದರು. ನಾನು ತ೦ದಿರೋರು ಒ೦ದೂವರೆ. ಕೊಡ್ತೀನಿ.' ಎ೦ದಾಗ `ನಿಮಗೆ ಅಷ್ಟೇ ಸಾಕಾಗ್ತದಾ?' ........ ನೀವೇನ್ಮಾಡ್ತೀರಿ? .......... ಎ೦ದೆಲ್ಲಾ ವಿಚಾರಿಸಿ ತೆಗೆದುಕೊ೦ಡರು. ಕೈಗೆ ಸ್ವಲ್ಪ ಚಿಲ್ಲರೆ ಕೊಟ್ಟು, `ನ೦ತರ ಆಟೋದಲ್ಲಿ ಮನೆಗೆ ಹೋಗಿ.' ಎ೦ದೆ. ........ ಸುಮಾರು ೮೦-೮೫ ವರ್ಷದವರು ದೈಹಿಕವಾಗಿ ಅತ್ಯ೦ತ ಕೃಶರಾಗಿದ್ದರೂ ಅವರ ಮಾನಸಿಕ ಸ್ಥಿತಿ ಉತ್ತಮವಾಗಿರುವ ಬಗ್ಗೆ ಸಮಾಧಾನವಾಯಿತು(ಅಮ್ಮನನ್ನು ನೆನೆದು).ನ೦ತರ ನಾವು ಒಟ್ಟಾಗಿ ಹೊರಟಾಗ ಆಕೆ ತಿ೦ಡಿಯನ್ನು ತಿನ್ನುತ್ತಿದ್ದುದು ಕ೦ಡು ತು೦ಬಾ ಸ೦ತಸವಾಯಿತು. ನಾವೇ ಏರ್ಪಡಿಸಿರುವ ಔತಣ ಕೂಟದಲ್ಲಿ ನೂರಾರು ಜನ ಊಟಮಾಡುವುದನ್ನು ನೋಡುವಾಗ ಆಗುವುದಕ್ಕಿ೦ತಲೂ ಹೆಚ್ಚು ಎ೦ದು ಬುದ್ಧಿ ಕೊಡಲು ಹೊರಟ ಹೋಲಿಕೆಯನ್ನು ಆಚೆತಳ್ಳಿ ಹೃದಯಪೂರ್ವಕವಾಗಿ ಆಕೆಗೆ ನಮಿಸಿದೆ.

Wednesday, September 24, 2014

ಆ೦ತರ್ಯ!

ಆ೦ತರ್ಯ!




ಮಾತುಗಳು.......

ಧಾನ್ಯದ ಒಡಲಿನಿ೦ದ

ಸಿಡಿವ ಅರಳುಗಳು,

ಮೌನ.........

ಗದ್ದಲದ ಸ೦ತೆಯ

ಬುಡದಲಿ ಜಡವಾದ೦ತೆ

ಗೋಚರಿಸುವ

ಸಮಾಧಿಸ್ಥ ಆತ್ಮ!

Friday, September 12, 2014

ರಾಜ್ಯಮಟ್ಟದ ಇನ್ಸ್ ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ:

ರಾಜ್ಯಮಟ್ಟದ ಇನ್ಸ್ ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನ ನಮ್ಮ ಹಾಸನದಲ್ಲಿ ನಡೆಯುತ್ತಿದ್ದು
. ಅದರ ಉದ್ಘಾಟನಾ ಸಮಾರ೦ಭ ಈ ದಿನ(12-09-2014) ಬೆಳಿಗ್ಗೆ ನಡೆಯಿತು. ಉದ್ಘಾಟನೆಯನ್ನು ಮಾನ್ಯ ಜಯಕುಮಾರ್, Director, DSERT, ಇವರು ನೆರವೇರಿಸಿದರು. ಸ್ಪರ್ಧೆಯಲ್ಲಿ ೭೪೦ ಸ್ಪರ್ಧಿಗಳಿದ್ದು ಸಮಾರ೦ಭದ ಮತ್ತು ಮಾಡೆಲ್ ಗಳ ಕೆಲವು ಫೋಟೋಗಳನ್ನು ನಿಮ್ಮೊ೦ದಿಗೆ ಹ೦
ಚಿಕೊಳ್ಳುತ್ತಿದ್ದೇನೆ.

 

















.

Friday, September 5, 2014

`ಶಿಕ್ಷಕರ ದಿನದ ಶುಭಾಶಯಗಳು'.-ನಾ ಕ೦ಡ ಒಬ್ಬ ಸೃಜನಶೀಲ ಹಾಗೂ ಕ್ರಿಯಾಶೀಲ ಶಿಕ್ಷಕಿ

`ಶಿಕ್ಷಕರ ದಿನ'ದ ಈ ಸ೦ದರ್ಭದಲ್ಲಿ ನಾನು ಇತ್ತೀಚೆಗೆ ಭೇಟಿ ನೀಡಿದ ಶಾಲೆಯಲ್ಲಿ ಕ೦ಡ ಒಬ್ಬ ಸೃಜನಶೀಲ ಹಾಗೂ ಕ್ರಿಯಾಶೀಲರಾದ ಶಿಕ್ಷಕಿ ವಸ೦ತಲಕ್ಷ್ಮಿಯವರ ಕೆಲವು ವಿಶಿಷ್ಟವಾದ ಕಾರ್ಯಗಳನ್ನು( ಪರಿಚಯಿಸುವ ಮೊಬೈಲ್ ನಿ೦ದ ತೆಗೆದ ಫೋಟೋಗಳನ್ನು) ನಿಮ್ಮೆದುರು ಇಡುತ್ತಿದ್ದೇನೆ.(೧, ೨, ೩ ಮಕ್ಕಳಿ೦ದ ಹೂ ಮು೦ತಾದ ಚಿತ್ರಗಳನ್ನು ಬರೆಸಿ ಅದರ ಮೂಲಕ ಕೋನಗಳ ಬಗ್ಗೆ ತಿಳಿಸುವುದು, ೪,೫,೬,೭.... .ಪ್ರಯೋಗಶಾಲೆಯ ಉಪಕರಣಗಳ ಪರಿಚಯ, ಹೀಗೇ ಪರಿಸರದ ಚಿತ್ರಗಳು, ರಾಕೆಟ್......., ಮಾಡೆಲ್ ಗಳು ಎಲ್ಲವೂ ಇವೆ.) ಬದಲಾದ ಹೊಸ ಪಟ್ಯದಲ್ಲಿ ಚಟುವಟಿಕೆಗಳ ಮೂಲಕ ಕಲಿಸುವುದು ಪ್ರಮುಖವಾಗಿದೆ. ಇವರು ಸುಮಾರು ೨೦ವರ್ಷಗಳಿ೦ದಲೂ ಮಕ್ಕಳಿ೦ದಲೇ ಚಟುವಟಿಕೆಗಳನ್ನು ನಡೆಸುತ್ತಾ, ಹಾಡುಗಳು, ಆಟಗಳ ಮೂಲಕ ಕಲಿಸುತ್ತಿರುವುದಾಗಿ ತಿಳಿಸಿದರು. ೧೯೯೯೭-೯೮ರಸಾಲಿನ ಕೆಲವು ಮಕ್ಕಳು ಸಿದ್ಧಪಡಿಸಿದವನ್ನೂ ತೋರಿಸಿದರು. ಇ೦ಥಾ, ಮಕ್ಕಳಿಗೆ ಕಲಿಸುವುದರಲ್ಲಿಯೇ ಸ೦ತಸಪಡುವ ಸೃಜನಶೀಲ ಹಾಗೂ ಕ್ರಿಯಾಶೀಲ ಶಿಕ್ಷಕರಿಗೆ ನನ್ನ ಅನೇಕ ನಮನಗಳು. ಎಲ್ಲರಿಗೂ `ಶಿಕ್ಷಕರ ದಿನದ ಶುಭಾಶಯಗಳು'.






(7 photos)

Tuesday, September 2, 2014

ನಿನ್ನೊಂದು ಮುಗುಳ್ನಗು.....

`ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ, ಚನ್ನರಾಯಪಟ್ಟಣ ಹಾಗೂ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ, ಬೆ೦ಗಳೂರು ಇವರ ಸ೦ಯುಕ್ತಾಶ್ರಯದಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದ `ಚನ್ನರಾಯಪಟ್ಟಣ ತಾಲ್ಲೂಕಿನ ಸಾ೦ಸ್ಕೃತಿಕ ಅವಲೋಕನ' ಹಾಗೂ `ಕವಿಗೋಷ್ಠಿ'ಯಲ್ಲಿ ವಾಚಿಸಿದ ಕವನವನ್ನು ತಮ್ಮ ಮು೦ದಿಡುತ್ತಿದ್ದೇನೆ. ಬಹಳ ಹಿ೦ದೆ ಬರೆದ ಈ ಕವನವು `ಸಮಾಜ ಮುಖಿ'ಯ ೨೦೦೭ರ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾಗಿದೆ.


ನಿನ್ನೊಂದು ಮುಗುಳ್ನಗು..... 

ಒಂದೊಂದೇ
ಪಾತ್ರ ನಟಿಸಿ
ಬಂದಾಗಲೂ
ನಿನ್ನ ಮುಗುಳ್ನಗು
ಪ್ರೋತ್ಸಾಹಿಸಿದಂತೆ
ಮತ್ತೊಂದೇ
ಪಾತ್ರಕೆ
ಸಜ್ಜು!

ಪಾತ್ರಗಳು
ಇನ್ನೊಂದು
ಮತ್ತೊಂದು...
ಹೆಚ್ಚಾದಂತೆ
ಮಧ್ಯಂತರವೇ
ಶೂನ್ಯವಾಗಿ
ನಿನ್ನೊಡನಾಟವೇ
ಅಲಭ್ಯ

ಪಾತ್ರದಿಂದ ಪಾತ್ರಕ್ಕೆ
ಜಿಗಿಯುತ್ತಾ
ತಾಧ್ಯಾತ್ಮ ಹೊಂದಿ
ನಿನ್ನಿಂದ ದೂರ
ಸರಿದಂತೆ
ವೃದ್ಧಿಸುವ
ತಳಮಳ!

ನಿನ್ನ
ಸನಿಹವಿರಲು
ಸಂಭಾಷಿಸಲು
ನಿನ್ನೊಡನಾಟಕೆಂದು
ಹಂಬಲಿಸುವಾಗೆಲ್ಲಾ
ಏನೋ ಗೊಂದಲ

ನೇಪಥ್ಯಕ್ಕೆ
ಸರಿಯಲು
ನಿವೃತ್ತಿಗೆ
ಹಂಬಲಿಸುವುದೆ?

ನಿನ್ನಿರವನರಿತದ್ದೇ
ಸಂಪರ್ಕಿಸಲು
ಸಡಗರಿಸಿದಾಗ...
ಏನಾಶ್ಚರ್ಯ!

ಮುಗುಳ್ನಗೆ
ಮಾಯವಾಗಿ
ಒತ್ತಡದ
ಗೂಡಾಗಿರುವಿ
ಎಲ್ಲಿ
ಆ ನಿನ್ನ
ಹಸನ್ಮುಖ?