Friday, April 2, 2010

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....


ತಾಸುಗಳಲ್ಲೀ ನಿಮಿಷಗಳು
ಸೆಕೆಂಡ್ಸ
ಉರುಳುತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಚಕ್ರಗತಿಯಲಿ

ಚಲಿಸುತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?

'ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...'ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲು!

ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!

ಇರುಳನೆ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ

ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!

(image- web)

2 comments:

  1. ಯಾ೦ತ್ರಿಕ ಬದುಕಿನ ಬಗ್ಗೆ ಸು೦ದರ ಹೋಲಿಕೆಯ ಕವನ.

    ReplyDelete
  2. @ಸೀತಾರಾಮ ಕೆ ಯವರೇ,

    ನನ್ನ ಬ್ಲಾಗ್ ಗೆ ಪ್ರಥಮ ಭೇಟಿನೀಡಿ 'ಬಿಗಿದುಕೊ೦ದಿದ್ದೇವೆ ... ' ಗೆ ಉತ್ತಮ, ಅರ್ಥಪೂರ್ಣ , ಪ್ರೂತ್ಸಾಹಕರ ಪ್ರತಿಕ್ರಿಯೆ ನೀಡಿದುದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete