Sunday, September 9, 2012

ತಿರುವು

ನೇರವೆ೦ದೇ ಭ್ರಮಿಸಿ

ನಡೆದದ್ದು ನಿಜ

ಆದರೆ ಹಠಾತ್ತನೆ

ಎದುರಾಗಿ ಬಿಟ್ಟಿದೆ

ಈ ತಿರುವು!



ಕ್ರಮಿಸಿದ ಹಾದಿ

ಎಷ್ಟೇ ಸು೦ದರವೆನಿಸಿದರೂ

ಎಲ್ಲಾ ಮೆಲುಕು..



ಹಿ೦ದಿಡಲಾಗದ ಹೆಜ್ಜೆಯ

ಮು೦ದಿಡಲೂ

ಮಾರ್ಗ ಅಸ್ಪಷ್ಟ



ಒಮ್ಮೊಮ್ಮೆ ಕಣ್ಣ ತೂರಿ

ಕಾಣಲು ಶ್ರಮಿಸಿದರೂ

ಮೊಬ್ಬು ಇಳಿಹೊತ್ತು



ಎಲ್ಲಿ ಕಳೆಯಿತು ಆ

ಚುಮುಚುಮು ಹಗಲು

ಝಳ ಝಳ ಬಿಸಿಲು?



ಸ೦ಜೆಯ ತ೦ಗಾಳಿಗೆ

ಮೈಯೊಡ್ಡಿ

ಮೈಮರೆತಾಗಲೇ

ಈ ತಿರುವೇ?

ಮು೦ದಿನದೆಲ್ಲಾ

ಹೆಜ್ಜೆಗಷ್ಟೇ ಅರಿವೆ?



6 comments:

  1. ಘಟ್ಟದ ಹಾದಿಯಲ್ಲಿ ಬರುವ ಅನಿರೀಕ್ಷಿತ ತಿರುವುಗಳು,ಅವುಗಳಲ್ಲಿ ಎದುರಿನಿಂದ ಅನಿರೀಕ್ಷಿತವಾಗಿ ಬರುವ ವಾಹನಗಳಂತೆ ಬದುಕಿನಲ್ಲೂ ಅನಿರೀಕ್ಷಿತ ತಿರುವುಗಳೂ,ಅನಿರೀಕ್ಷಿತ ಅಡಚಣೆಗಳೂ ಬರುತ್ತವೆ.ಅವುಗಳನ್ನು ಎದುರಿಸುವ ರೀತಿ ಅರಿತಿರಬೇಕಷ್ಟೇ!!!ಚಂದದ ಕವನ.ಧನ್ಯವಾದಗಳು.

    ReplyDelete
  2. ದುತ್ತೆಂದು ಎದುರಾಗಿ ಗಾಬರಿ ಗೊಳಿಸುವ ತಿರುವುಗಳ ಬಗ್ಗೆ ಒಳ್ಳೆಯ ಕವಿತೆ...

    ReplyDelete
  3. ತಿರುವುಗಳ ಅಸ್ಪಷ್ಟತೆಯೇ ಅಂತು, ಅದು ಹಿಡಿದು ನಿಲ್ಲಿಸುವ ಪ್ರಕ್ರಿಯೇ. ತುಸು ಯೋಚನೆಗೆ ಹಚ್ಚುವ ಕ್ರಿಯೆ.

    ReplyDelete
  4. Beautiful poem narrating the turns that we meet in life. Well, we have to continue the journey however the road may be!

    ReplyDelete
  5. tiruvu baduka aspshtagala pratekavaada kavana aaptavaagide.

    ReplyDelete
  6. ನಮ್ಮ ಬದುಕಿನಲ್ಲೂ ನಮಗೆ ಗೊತ್ತಿಲ್ಲದಂತೆ ಅದೆಷ್ಟೋ ತಿರುವುಗಳು ಬರುತ್ತವೆ.....ಹೀಗೆ ಆಕಸ್ಮಿಕವಾಗಿ ಸಿಗುವ ತಿರುವುಗಳ ಬಗ್ಗೆ ಸುಂದರವಾಗಿ ವರ್ಣಿಸಿದ್ದೀರಿ ...ಧನ್ಯವಾದಗಳು...

    ReplyDelete