Monday, September 24, 2012

`ಹನಿ'ಗಳು

ಭಾವನೆಗಳು

ಹಾಸಬಾರದು

ಹಸನಾದ ನವಿರು ವಸ್ತ್ರವ

ಹಾದಿ ಬೀದಿಗಳಲ್ಲಿ,

ಹಗುರಾಗಿ ಮಡಿಸಿ

ಹದವಾಗಿ ನೇವರಿಸುತ್ತಾ

ಭದ್ರಪಡಿಸಬೇಕು

ಮನದ ಸಂದೂಕದಲ್ಲಿ.


ಸತ್ವ


ಬಡಿಬಡಿದು

ಬಡಿಗೆಯಾಗಿಯೇ ಸವೆಯಿತು

ಬಂಗಾರ ಹೊಳಪಾಯಿತು,

ಅರೆದರೆದು

ಗಾಣವಾಗಿಯೇ ಉಳಿಯಿತು

ಕಬ್ಬು ರಸವಾಗಿ ಹರಿಯಿತು.

5 comments:

  1. ಭಾವನೆಗಳು : ನಿಜ ಭಾವನೆಗಳು ಸಾರ್ವಜನಿಕವಾದಾಗ, ಅಲ್ಲಿ ಮುಳ್ಳುಗಂಟಿಗಳು ಹರಿಯಲು ಕಾಯುವವು!

    ಸತ್ವ: ಇದು ಮೇಸ್ಟ್ರು - ಶಿಷ್ಯರ ಸಂಬಂಧದ ಕಲ್ಪನೆಯ ಚಿತ್ರಣ.

    ReplyDelete
  2. 'ಸತ್ವ' ಹನಿ ಸತ್ಯವಾಗಿದೆ.... ಜೀವನ ಕೂಡ ಹಾಗೆ ಅಲ್ಲವೇ,ಕೆಲವೊಮ್ಮೆ ಸವೆಯುವವರು ಒಬ್ಬರು,ಅನುಭವಿಸುವರು ಒಬ್ಬರು...

    ReplyDelete
  3. You have told some beautiful truths.

    ReplyDelete
  4. ಅದ್ಭುತ ಸತ್ಯಗಳ ಅನಾವರಣ....

    ReplyDelete