Tuesday, October 23, 2012

ಎರಡು `ಹನಿ'ಗಳು

ಬಹಳ ದಿನಗಳಿ೦ದ  ಮನಸ್ಸಿಗೆ ಏನೂ ಹೊಳೆಯದೆ ಮನವೇ ಬರಡಾಯಿತೇನೋ ಎನ್ನುವಷ್ಟು ಬೇಸರವೆನಿಸುತ್ತಿತ್ತು. ಈ ದಿನ ಬೆಳಿಗ್ಗೆ ಮೂಡಿದ ಎರಡು `ಹನಿ'ಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ.

ಸ್ಥಿತಿ


ಮೇಲ್ಮೈಯಲ್ಲಿ ಹೊಳೆವ

ನಕ್ಷತ್ರಗಳ

ಅಂತರಂಗ

ಅಗ್ನಿಕುಂಡ!



ಹೊಳವು

ವಸ್ತುಗಳ ಹೊಳಪು

ಮೇಲ್ಮೈಗಷ್ಟೇ ಸೀಮಿತ,

ಮನದ ‘ಹೊಳವ’ ಮೂಲವೋ

ಅಂತರ್ಗತ







3 comments:

  1. ಆಳ ಅರ್ಥವ್ಯಾಪ್ತಿಯ ಹನಿಗಳು.

    ReplyDelete
  2. ಅರ್ಥಪೂರ್ಣ ಹನಿಗಳು!

    ReplyDelete