Tuesday, January 1, 2013

ಮೊದಲ ಮುಂಜಾವು

(ಇದು `ಮೊದಲ ಮುಂಜಾವು' ೨೦೦೧ರ ಪ್ರಾರಂಭದ ದಿನ ಬರೆದ ಕವನ. ನನ್ನ ಪ್ರಥಮ ಕವನ ಸಂಕಲನ `ಗರಿಕೆ’ಯಲ್ಲಿ ಸೇರ್ಪಡೆಯಾಗಿದೆ.)

ಮೊದಲ ಮುಂಜಾವು

ಹೊಸ ಶತಮಾನದ ಮುಂಜಾವೇ
ಹೊರಟೆ
ಪ್ರಕೃತಿಯ ಹೊಸತನವ
ನೋಡಲೆಂದು

ಅದೇ ತಂಪು ತುಂಬಿದ ಕುಳಿರ್ಗಾಳಿ
ಚಳಿಯ ಹೊಡೆದೋಡಿಸಲು ಫಣತೊಟ್ಟ
ಬಿಸುಪ ಕಿರಣಗಳ ಮೂಟೆ ಹೊತ್ತ
ಹೊಸ ಹಗಲ ಕತೃ
ದಿನಪನುದಯ

ಅಲ್ಲಲ್ಲಿ ಅರಳಲು ಸಜ್ಜಾದ
ಬಿರಿದ ಮೊಗ್ಗುಗಳು
ನೂತನ ದಿನದ
ನಾಂದಿಗೆ ಸಡಗರಿಸಿ
ಚಿಲಿಪಿಲಿ ಉಲಿಯುತ್ತಿರುವ
ಪಕ್ಷಿಗಳ ಸಮೂಹ

ಚೈತನ್ಯದ ಚಿಲುಮೆಯಾದ ಪ್ರಕೃತಿ
ಆದರೆ ನನ್ನಂಥಾ ನರಜೀವಿಗಳೆಲ್ಲಿ?

ಏರಿಯ ಮೇಲಿನ ಕುರಿಯ ಹಿಂಡಲಿ
ಬಿತ್ತೊಂದು ಕುರಿ ಕಾಲುಜಾರಿ
ಹಿಂದೆಯೇ ಬಿದ್ದವು ಕುರಿಗಳೆಲ್ಲಾ
ಹಾರಿಹಾರಿ!

ಅಗೋ ಅಲ್ಲೇ ಕಂಡೆ
ತೆರೆದ ಬಾಗಿಲಿಂದ
ಹೊರಗಿಣುಕುತ್ತಿರುವ
ಕೆಂಪುಕಣ್ಣುಗಳು
ಆಕಳಿಸುವ ಮುಖಗಳು

ಸಹಸ್ರಮಾನದ ಸ್ವಾಗತಕೆ
ರಾತ್ರಿಯಿಡೀ ಕುಣಿದು-
ಕುಪ್ಪಳಿಸಿದ(ವರ ನೋಡಿದ)
ಪಟಾಕಿ ಸಿಡಿಸಿ ಹೊಸದಿನವ
ಬೆದರಿಸಿದ
ದಣಿದ ದೇಹಗಳು
ನವವರ್ಷದ ಹರ್ಷದಿ
ನಲಿದ ನಿಶಾಚರಿಗಳು!

ಈಗ ಸೋಮಾರಿತನದ
ಹೊದಿಕೆ ಹೊದ್ದು
ಮತ್ತೆ ನಿದ್ದೆಯ ಜೋಂಪಿಗೆ
ಜಾರಲೆಳೆಸುವ
ಅವರ ಮೊಗಭಾವಗಳು!

5 comments:

 1. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು..

  ReplyDelete
 2. ಹೊಸ ವರ್ಷದ ಶುಭಾಶಯಗಳು!

  ReplyDelete
 3. @ದಿನಕರ ಮೊಗೇರರವರೆ,
  @ ಸುನಾಥ್ ರವರೆ,
  ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು &ನಿಮಗೂ ಹೊಸ ವರ್ಷದ ಶುಭಾಶಯಗಳು :)

  ReplyDelete
 4. ಚೆನಾಗಿದೆ ಮೇಡಮ್..
  ನಿಮಗೂ ೨೦೧೩ ಶುಭ ತರಲಿ....
  ಹಾಂ "ನವವರ್ಷದ ಹರ್ಷದಿ
  ನಲಿದ ನಿಶಾಚರಿಗಳು!"
  ಎಂಬಲ್ಲಿ ಸರಿಯಾಗಿ ಕುಟುಕಿದ್ದೀರಿ...!!!!
  ಚೆನಾಗಿದೆ..
  ಇಷ್ಟವಾಯ್ತು...
  ನಮಸ್ತೆ :)

  ReplyDelete
 5. Sundara Kavana...Hosa Varshada Subhashayagalu...

  ReplyDelete