Wednesday, May 8, 2013

ಹೆಬ್ಬಂಡೆ

ಆಗಬಹುದಿತ್ತೊಂದು

ಬೃಹತ್ ಪ್ರತಿಮೆ

ಸಾರುತ್ತಾ

ಎಲ್ಲೆಡೆ ಹಿರಿಮೆ

 

ಭವ್ಯ ಕಟ್ಟಡದ

ಆಧಾರ ಸ್ಥಂಭ

ಅಥವಾ

ದೇಗುಲದ

ಗರುಡಗಂಬ

 

ನಾಗಾಲೋಟದ

ನಾಗರೀಕತೆಯ ಮೆಟ್ಟಿಲು

ಹಳ್ಳದಾಟುವ ಅಡ್ಡಗಲ್ಲು

 

ಗುಡ್ಡದ ಮೇಲಿನ

ಭೀಮಶಿಲೆ

ಮೈತುಂಬಿದ

ಭವ್ಯಕಲೆ

 

ಜಿಬ್ರಾಲ್ಟರದ

ಮಹಾಬಂಡೆ

ಅಟ್ಲಾಂಟಿಕಾದ

ಅದ್ಭುತ ನೋಟ!

 

ಆಗದೇ ಹುದುಗಿದೆ

ಈ ನದಿಯೊಳಗೆ

ಮನದೊಳಗೇ...

ಮೆಲ್ಲುತ್ತಾ ಮಂಡಿಗೆ

 

ಸುತ್ತಲಿನ ಅಹಂಭಾವ

ಆರ್ಭಟಗಳಿಗೆಲ್ಲಾ

ಮೂಕ ಶ್ರೋತೃ

ಮೌನ ಪ್ರೇಕ್ಷಕ!
 
(ಬಹಳ ವರ್ಷಗಳ ಹಿ೦ದೆ ಬರೆದಿದ್ದ ಈ ಕವನವನ್ನು ಈಗ ಓದಲು ನಿಮ್ಮ ಮು೦ದಿಡುತ್ತಿದ್ದೇನೆ.)

2 comments:

  1. ನಮ್ಮಲ್ಲಿ ಹಲವಾರು ಮಂದಿ ಈ ಹೆಬ್ಬಂಡೆ ಯಂತೆಯೇ ಅಲ್ಲವೇ ? ಏನಾದರೂ ಆಗಬಹುದಿತ್ತು!!! ಆದರೆ ಅಲ್ಲೆಲ್ಲೋ ಮರೆಯಾಗಿ ,ನದಿಯೊಳಗಿನ ಹೆಬ್ಬಂಡೆ ಯಾಗಿ ,ಮನದಲ್ಲೇ ಮಂಡಿಗೆ ಮೆಲ್ಲುತ್ತಾ ಕಳೆದು ಬಿಡುತ್ತೇವೆ!!! ಸುಂದರ ಕವನ !!!ಅಭಿನಂದನೆ ಗಳು.

    ReplyDelete
  2. ನಮ್ಮ ಬಗ್ಗೆಯೇ ಬರೆದಂತಿದೆ ಮಾನ್ಯ ಕವಿಯತ್ರಿ! ಬರೀ ಕಳ್ಳಮ್ಟೆ ಉಳಿದು ಹೋದ ನನಗೆ ದಕ್ಕಲಿಲ್ಲ ಯಾವುದು ಪಾತ್ರ...

    ReplyDelete