Wednesday, October 2, 2013

`ಹನಿ'ಗಳು

ಏಕೆ?
ನಾನೆಷ್ಟೇ ಧೇನಿಸಿ
ನಿನ್ನೊಡನಿರಲೆಳೆಸಿದಷ್ಟೂ
ನೀ ನನ್ನ ಹೊರದಬ್ಬಿ
ಕದವದೂಡುವೆಯೇಕೆ?


ಅತೃಪ್ತ!
ತು೦ಬಿ ತುಳುಕುತ್ತಾ
ಎದ್ದೆದ್ದು ಹುಯ್ಲಿಡುವ
ಸಾಗರಕ್ಕೂ
ನದಿಗಳನೆಲ್ಲಾ...
ತನ್ನತ್ತಲೇ
ಸೆಳೆವ ಗೀಳು!


ನಿರ್ಧಾರ!
`ತೆಗೆದುಕೊಳ್ಳುವುದಿಲ್ಲ
ಇನ್ನೆ೦ದೂ ನಿರ್ಧಾರ'
ಎ೦ದುಕೊ೦ಡ
ಮರುಕ್ಷಣವೇ
ಹೊಳೆವುದು
`ಇದೂ ಒ೦ದು
ನಿರ್ಧಾರ!'
 


ನೆರಳು?
ಕತ್ತಲಲ್ಲಿ ಕುಳಿತಲ್ಲಿ
ಕಾಡುವ ನೆರಳೆಲ್ಲಿ?
 


ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿಬ೦ದ
ಮರದ ತು೦ಡನು
ಬಿಗಿದಪ್ಪುವ
ಜೀವ!
 

4 comments:

  1. ಎಲ್ಲ ಹನಿಗಳೂ ಚೆನ್ನಾಗಿವೆ....

    `ತೆಗೆದುಕೊಳ್ಳುವುದಿಲ್ಲ
    ಇನ್ನೆ೦ದೂ ನಿರ್ಧಾರ'
    ಎ೦ದುಕೊ೦ಡ
    ಮರುಕ್ಷಣವೇ
    ಹೊಳೆವುದು
    `ಇದೂ ಒ೦ದು
    ನಿರ್ಧಾರ!'

    ತುಂಬಾ ಇಷ್ಟವಾಯ್ತು....

    ReplyDelete
  2. ಸುಂದರ, ಅರ್ಥಪೂರ್ಣ ಹನಿಗಳು..ಅದರಲ್ಲೂ 2ನೆಯದ್ದು.

    ReplyDelete
  3. ಹುಯ್ಲಿಡುವ ಸಾಗರದ ಗೀಳು ಕವನ ಇಷ್ಟವಾಯ್ತು

    ReplyDelete