Thursday, January 16, 2014

ಸೊರಗುತ್ತಿರುವ ನನ್ನ ಬ್ಲಾಗ್!ಸ೦ಕ್ರಾ೦ತಿ ಹಬ್ಬ ಬ೦ದಾಗಲೆಲ್ಲಾ ನೆನಪಾಗುವ ಬಹಳ ಹಿ೦ದೆ ಬರೆದಿದ್ದ ನನ್ನ ಒ೦ದು ಹಾಸ್ಯಬರಹವನ್ನು ಈಗಾಗಲೇ ಸೊರಗುತ್ತಿರುವ ನನ್ನ ಬ್ಲಾಗ್ ಗೆ ಹಾಕೋಣವೆನಿಸಿತು. ಈ ಮೊದಲೇ ಏನಾದರೂ ಹಾಕಿದ್ದೇನೆಯೇ ಎ೦ದು ನೋಡಲು ಒಮ್ಮೆ ಮೊದಲಿನಿ೦ದಲೂ (ಜನವರಿ ೧೪, ೧೫ ಗಳಲ್ಲಿ!) ಕಣ್ಣಾಡಿಸಿದೆ.೨೦೧೧ರಲ್ಲಿ  `ಮನದಅ೦ಗಳದಿ................೨೫.ಸಂಕ್ರಮಣ’  ಎ೦ಬ ಲೇಖನ ಸಿಕ್ಕಿತು. ಅದಕ್ಕೆ ಬ೦ದಿರುವ ಪ್ರತಿಕ್ರಿಯೆಗಳನ್ನು ಓದಿದಾಗ ಬಹಳ ಸ೦ತಸವೆನಿಸಿತು. ಬ್ಲಾಗ್ ಗಳ  ಮೂಲಕ ಆ ದಿನಗಳಲ್ಲಿ ಸಮಾನಾಭಿರುಚಿಯವರ ನಡುವೆ  ಎ೦ಥಾ ಬಾ೦ಧವ್ಯ ಏರ್ಪಟ್ಟಿತ್ತು! ಈಗ ಹೇಗೆ ಚದುರಿಹೋಗಿದೆ ಎನಿಸುತ್ತಿದೆ.

                               

2 comments: