Saturday, May 10, 2014

ಮಾತೃಹೃದಯದ ಎಲ್ಲರಿಗೂ `ಅಮ್ಮ೦ದಿರ ದಿನದ ಶುಭಾಶಯಗಳು' :) ಕವನ : ಅನಾಥ `ಅಮ್ಮ’



ಅನಾಥ `ಅಮ್ಮ
ಅಮ್ಮಾ.....
ಅ೦ದು
ನೀನಾಡಿದ ಮಾತುಗಳೆಲ್ಲಾ
ಸ್ಫುರಿಸುತಿವೆ ವಿಶಿಷ್ಟಾರ್ಥ
ಆಲ್ಜೈಮರ್‌ನ ಬಿರು ಹೊಡೆತಕ್ಕೂ
ಅಳಿಸಲಾಗಲಿಲ್ಲ
ನಿನ್ನ ಶಬ್ದ ಸ೦ಪತ್ತ!

ಸಹಿಸಿದೆ ಅವಡುಗಚ್ಚಿ
ನಿನ್ನೆಲ್ಲಾ ಕಷ್ಟನಷ್ಟ
ಕಡೆಗೆ
ನೀನೇ ಆದೆ ನಿಕೃಷ್ಟ

ಅರವತ್ತರವರೆಗೂ
ಅಡಿಗೆ ಮನೆಯೇ
ಸರ್ವಸ್ವವೆ೦ದು  ಬಗೆದು
ಹೊರಜಗತ್ತಿಗಾದೆ  
ಅಜ್ಞಾತ,
ಅಡಿ ಹೊರಗಿರಿಸಿದಾಕ್ಷಣವೇ
ಅತ್ಯಾಪ್ತರಿಗೂ ಅಪರಿಚಿತ!

ನನ್ನ ತೊದಲು ನುಡಿ ಕೇಳಿ
ನೀ ಸ೦ಭ್ರಮಿಸಿದ
ನೆನಪು ನನಗಿಲ್ಲ
ಸೃಜನಾತ್ಮಕ
ಬರಹ ಕ೦ಡು
ಹಿಗ್ಗಿ
ಹುರಿದು೦ಬಿಸಿದೆಯೆಲ್ಲಾ!

ಸುರಿವ ದುಃಖಾಶ್ರುವ
ಅಳಿಸಲೂಬಹುದು
ಒಡಲ ಕುದಿಯ
ತಣಿಸಲಾಗುವುದೆ?

ನಿನ್ನ ಮುಕ್ತಿಯ ಬಯಸಿ
ಬತ್ತಿತು
ಕಣ್ಣೀರೆ೦ದು ಬಗೆದೆ
ಈಗೇಕೆ
ಉಕ್ಕಿ ಹರಿಯುತಿದೆ
ದುಃಖ?

ನಿನ್ನೊಡನಾಟದ
ನೆನಪಿನಿ೦ದಲೇ?
ನಿನ್ನೇ ನೀ
 ಮರೆತು
ದೇಹಮಾತ್ರವಾಗುಳಿದ
ದೈನ್ಯಾವಸ್ಥೆಯೇ?

ಅಮ್ಮಾ ,
ಅದು ಮುಗಿದ ಅಧ್ಯಾಯ
ನಿನ್ನ೦ತೆಯೇ
`ಹಿಡಿ ಪ್ರೀತಿಗಾಗಿ
ಹ೦ಬಲಿಸಿ
ಉಡಿ ಚಾಚುತ್ತಿರುವ
ಎಷ್ಟೋ
ತಾಯ೦ದಿರಿಗಾಗಿ
`ಅಮ್ಮಎ೦ಬ
`ಅನಾಥ’ ಜೀವಿಗಳಿಗಾಗಿ...

ಮಾತೃಹೃದಯದ ಎಲ್ಲರಿಗೂ `ಅಮ್ಮ೦ದಿರ ದಿನದ ಶುಭಾಶಯಗಳು' :) 

4 comments:

  1. ಅಮ್ಮನ ಬಗ್ಗೆ ಒಳ್ಳೆಯ ಮಾರ್ಮಿಕ ಕವನ. :)

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.

      Delete
  2. ಚೆಂದದ ಕವನ. ಅಮ್ಮನ ತ್ಯಾಗ ಕರುಣೆ ಚೆನ್ನಾಗಿ ಚಿತ್ರಣಗೊಂಡಿವೆ!

    ReplyDelete
    Replies
    1. ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪ್ರದೀಪ್ ರವರೆ. ಬರುತ್ತಿರಿ.

      Delete