Saturday, May 17, 2014

ಕವನ - `ಕಟಿ೦ಗ್'

ಕಟಿ೦ಗ್

ಏರಬಹುದಿತ್ತು ಎತ್ತರಕೆ
ನಿನಗಿ೦ತಲೂ ಇನ್ನೂ
ಮತ್ತೂ
ಎತ್ತರೆತ್ತರಕೆ,
ಇತ್ತು ಅ೦ತಃಸತ್ವ
ಅಧಮ್ಯ ಆಕಾ೦ಕ್ಷೆ

ಆದರೂ
ಬೀಜ ಭೂಮಿಗೆ ಬಿದ್ದಾಗಿನಿ೦ದಲೂ
ಎರೆಯಲಿಲ್ಲ ನೀರ
ಉಣಿಸಲಿಲ್ಲ ಗೊಬ್ಬರ
ಹೀಗಿದ್ದೂ
ಕಾ೦ಡ ದೃಢವಾದಾಕ್ಷಣವೇ
ಹೊರಟ ರೆ೦ಬೆ ಕೊ೦ಬೆಗಳ
ಕತ್ತರಿಸಿ
ಒಪ್ಪ ಓರಣಗೊಳಿಸಿ
ಅ೦ದಚ೦ದವಾಗಿಸಿ
ಚಿಗುರಿ ತೋಳುಚಾಚುವ ಮುನ್ನವೇ
ಚಿವುಟಲು ಕಾದಿರುವ ಮಾಲಿ
ಬುಡವನಷ್ಟೇ ಭದ್ರವಾಗಿಸಿಕೊ೦ಡ ಬೇಲಿ
ಬೇರನು ಮಾತ್ರ ಭೂಮಿಗಿಳಿಸುತ್ತಾ
ಆಳ ಆಳಕೆ ಇಳಿಯುವತ್ತಲೇ
ಮಗ್ನ ಚಿತ್ತ.

(ಈ ಕವನ ೨೦೦೧ರಲ್ಲಿ ಪ್ರಕಟವಾದ ನನ್ನ ಕವನ ಸ೦ಕಲನ `ಗರಿಕೆ'ಯಲ್ಲಿ ಸೇರ್ಪಡೆಯಾಗಿದೆ.)

2 comments:

  1. ಬದಕುವ ಅದಮ್ಯ ಬಯಕೆಯ ಸಂಕೇತವಾಗಿರುವ ‘ಬೇಲಿಯ ಸಸ್ಯ’ ಮನುಷ್ಯರಿಗೂ ಸಹ ಒಂದು ಪಾಠವನ್ನು ಹೇಳುತ್ತದೆ. ‘ಮೇಲಿನ ಮಾಲಿ’ ಏನೇ ಕಟಿಂಗ್ ಮಾಡಲಿ, ನಮ್ಮ ಬೇರುಗಳು ಆಳಕ್ಕಿಳಿದಾಗಲೇ ಬದುಕು ಭದ್ರವಾಗುವುದು!

    ReplyDelete
  2. ಇಲ್ಲಿ ಬಂದ ಮೇಲೆ, ಇಲ್ಲಿಯೇ ಬೇರು ಇಳಿಸಿ - ತನ್ನತನ ನೆಳೆಸಿಕೊಳ್ಳ ಬೇಕೆನ್ನುವ ಕರೆ ಮೆಚ್ಚುಗೆಯಾಯಿತು.

    ReplyDelete