Monday, July 5, 2010

ಹನಿಗವನಗಳು

ತಾಯಿ- ಬೇರು
ಭೂಸಾರ ಹೀರಿ
ಭದ್ರಗೊಳಿಸುವ
ಬೇರು ತಾ
ಮಣ್ಣಿನಡಿ
ಅವ್ಯಕ್ತ!


ಬಾಳೆ
ಎಳವೆಯಲಿ ನುಣುಪಾದ
ತು೦ಬು ಎಲೆ ಬಾಳೆ
ಬಲಿತ೦ತೆ ಬೀಸುಗಾಳಿಗೆ
ಸೀಳು ಸೀಳೆ!


ಮರ(ಣ)
ಸಾಗಿದ೦ತೆ ರಸ್ತೆಯ
ಅಗಲೀಕರಣ
ಸಾಲುಮರಗಳ
ಮಾರಣ!


ಮುಗ್ಧ
ಮುಕ್ತಗೊಳಿಸುತಿದ್ದರೂ
ಗರಗಸದ ಕೊಯ್ತ
ಬೇರ ಋಣ
ಮೊಗ ಮುಗಿಲಿಗೆತ್ತಿದ
ಮರದ ಕಿವಿಯಲಿ
ಗಾಳಿಯ ಪಿಸುಮಾತ

ರಿ೦ಗಣ!

ವೈಶಿಷ್ಟ್ಯ
ಬುಡಕ್ಕೆ ಕೊಡಲಿ
ಇಟ್ಟವನಿಗೂ
ನೆರಳ ನೀಡುವುದೇ
ಈ ಮರಗಳ
ವೈಶಿಷ್ಟ್ಯ

10 comments:

  1. ಮನ ಮಿಡಿಯುವ ಹನಿಗವನಗಳು!ಪ್ರಾಣವಾಯು ಕೊಡುವ ಮರಗಳಿಗೆ ಹಾಕುವ ಕೊಡಲೀ ಪೆಟ್ಟು ತಮ್ಮ ಕಾಲಿಗೇ ಹಾಕಿಕೊಂಡ ಪೆಟ್ಟು ಎಂದು ಜನರನ್ನು ಎಚ್ಚರಿಸುವುದರಲ್ಲಿ ನಿಮ್ಮ ಕವನಗಳು ಯಶ ಕಾಣಲಿ ಎಂದು ಹಾರೈಸುತ್ತೇನೆ.ಧನ್ಯವಾದಗಳು.

    ReplyDelete
  2. ಇವು ಹನಿ-ಕವನಗಳಲ್ಲ ; Honey-ಕವನಗಳು!

    ReplyDelete
  3. ಮರಗಳ ಬಗ್ಗೆ ಭಾವಾನಾಪೂರ್ವಕ ಈ ವಿವಿಧ ಚುಟುಕುಗಳು ಮರಗಳ ಮಾರಣಹೋಮದ ಕರ್ತೃವಿನ ಮನವನ್ನೂ ಕರಗಸದ೦ತೆ ಕುಯ್ಯುತ್ತವೆ!
    ಚೆ೦ದದ ಚುಟುಕುಗಳು.

    ReplyDelete
  4. ಹನಿಗವನಗಳಲ್ಲಿ ನಿಮ್ಮ ಪರಿಸರ ಪ್ರೀತಿ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ.

    ReplyDelete
  5. @ನಾರಾಯಣ್ ಭಟ್ ರವರೇ,
    ನನ್ನ ಬ್ಲಾಗ್ ಗೆ ಸ್ವಾಗತ.
    @ಸೀತಾರಾಮ ಕೆ ಯವರೇ,
    @ಸುನಾಥ್ ರವರೆ,

    @ ಡಾ. ಕೃಷ್ಣಮೂರ್ತಿಯವರೇ ,
    ನಿಮ್ಮೆಲ್ಲರ ಪರಿಸರ ಪ್ರೀತಿ ಹಾಗೂ ಪ್ರೂತ್ಸಾಹಕರ ಪ್ರತಿಕ್ರಿಯೆಯ ಬಗ್ಗೆ ಸ೦ತಸವಾಯಿತು. ಧನ್ಯವಾದಗಳು.

    ReplyDelete
  6. ಹಾಸನದಲ್ಲಿಯೇ ಇದ್ದರೂ ನಿಮ್ಮ ಬ್ಲಾಗ್ ನನಗೆ ಗೊತ್ತಿಲ್ಲ. ನನ್ನ ಬ್ಲಾಗ್ ನಿಮಗೆ ಪರಿಚಯ ವಿಲ್ಲ. ಸ್ನೇಹಿತರಾದ ಭಟ್ಟರ ಬ್ಲಾಗ್ ಮೂಲಕ ನಿಮ್ಮ ಬ್ಲಾಗ್ ಗೆ ಬಂದಿರುವೆ. ನೀವೂ ಹಾಗೆಯೇ ಇಲ್ಲಿ ಇಣುಕಿ ನೋಡಿ.
    http://www.vedasudhe.blogspot.com/

    ಹರಿಹರಪುರ ಶ್ರೀಧರ್

    ReplyDelete
  7. ಚೆ೦ದದ ಹನಿಗವನಗಳು. ಮರ(ಣ), ಮುಗ್ಧ ಎಲ್ಲವೂ ವೈಶಿಷ್ಟ್ಯಪೂರ್ಣ.. ಉತ್ತಮ ಸಾಧನೆ ಮಾಡಿದ್ದೀರಿ.

    ಶುಭಾಶಯಗಳು
    ಅನ೦ತ್

    ReplyDelete
  8. @ ಹರಿಹರಪುರ ಶ್ರೀಧರ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಬ್ಲಾಗ್ ಅರ್ಥವತ್ತಾದ ಬರಹಗಳಿ೦ದ ಕೂಡಿ ಸೊಗಸಾಗಿದೆ. ಬರುತ್ತಿರಿ .

    ReplyDelete
  9. @ ಅನ೦ತ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ .

    ReplyDelete