Thursday, August 19, 2010

'ಹನಿ'ಗಳು

ಸ್ವಶಿಸ್ತು
ಹರಡಿದೆ ಇರುವೆಗಳ
ಚೆಲ್ಲಾಪಿಲ್ಲಿ
ಹೊರಟವವು
ಸರತಿ ಸಾಲಿನಲ್ಲಿ!

ಭೇದ
ಸಾಕು ಗಿಣಿ
ತಿ೦ದು ಚೆಲ್ಲಿದ
ಆಹಾರದ ತುಣಕು
ಇರುವೆಗೆ ಹೊಟ್ಟೆ ಬಿರಿದು
ಸಾಗಿಸುವ ಸರಕು

ಓದು
ಆಗಬಾರದು
ಚಿಟ್ಟೆ ಹೀರಿದ
ಹಲವು ಹೂಗಳ
ಬ೦ಡು
ಆಗಬೇಕು
ಜೆನ್ನೋಣ ಸ೦ಗ್ರಹಿಸಿದ
ಅಪ್ಪಟ ಮಧು!

ಭರವಸೆ
ನಾಳಿನ ಸು೦ದರ
ಚಿಟ್ಟೆಗಳ ಕನಸಿನಲಿ
ಸಹಿಸಿದೆ
ಕ೦ಬಳಿಹುಳುಗಳ ಕಾಟ
ರಕ್ಷಿಸುತ್ತಿದ್ದೇನೆ
ಕೊಶಾವಸ್ಥೆಯ ಹೂಟ!

ಸ್ತರಾ೦ತರ
ಹೊರಳುವ ಹುಳಗಳ
ನಡುವಿನಿ೦ದ ಹಾರಿದ್ದು
ಅರಳುವ 'ಹೂ'ಗಳೆಡೆಗೆ!

22 comments:

  1. ಹನಿಗವನಗಳು ತುಂಬಾ ಚೆನ್ನಾಗಿವೆ ಮೇಡಂ.ಖುಶಿಕೊಡುವಂತಿವೆ.ಧನ್ಯವಾದಗಳು.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

    ReplyDelete
  2. hanigavana chennaage ide.... aadare kotta shirshoke soopar.... matte matte oduvante maaDitu.... tumbaa yochane maaDi kottiddaa shirshike athavaa shirshike baredu hanigavana barediddaa....

    ReplyDelete
  3. @ ದಿನಕರ ಮೊಗೇರ ಅವರೇ,
    ಶೀಘ್ರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. 'ಹನಿ'ಹೊಳೆಯುತ್ತಿದ್ದ೦ತೆಯೇ ಶೀರ್ಷಿಕೆಯೂ ಹೊಳೆಯುತ್ತದೆ. ಒ೦ದು ರೀತಿಯ simultanious process! ಇತ್ತೀಚೆಗೆ ಒ೦ದು ಹನಿಗಳೂ ಹೊಳೆಯುತ್ತಿಲ್ಲ! ಇವು ನನ್ನ 'ಗುಟ್ಟು' ಸ೦ಕಲನದಲ್ಲಿನ 'ಹನಿ'ಗಳು. ಬರುತ್ತಿರಿ.

    ReplyDelete
  4. ಹನಿಗವನ ಸೊಗಸಾಗಿದೆ

    ಒಳ್ಳೆಯ ಚುರುಕಿನ ಹನಿಗವನ

    ReplyDelete
  5. ಸು೦ದರ ಹನಿಗವನಗಳು..

    ReplyDelete
  6. ಸು೦ದರ ಹನಿಗಳು...!ಚೆನ್ನಾಗಿ ಬರೆದಿದ್ದೀರಿ.

    ReplyDelete
  7. ಮೇಡಂ, ಹನಿಗಳು ಅರ್ಥಗರ್ಭಿತವಾಗಿವೆ.
    ನಿಮ್ಮಂಥ ಸಾಹಿತಿಗಳು ಪರಿಚಯವಾದದ್ದಕ್ಕೆ ಧನ್ಯವಾದಗಳು. ನನ್ನನ್ನು ತಮಗೆ ಪರಿಚಯಿಸಿದವರ ಬಗ್ಗೆ ಹೇಳಿದರೆ ಮತ್ತೂ ಧನ್ಯವಾಗುತ್ತೇನೆ.

    ReplyDelete
  8. ಪ್ರಭಾಮಣಿಯವರೆ...

    ಪ್ರತಿಯೊಂದೂ ಸಾಲುಗಳು ಅರ್ಥಗರ್ಭಿತವಾಗಿವೆ...

    ಅಭಿನಂದನೆಗಳು ಸುಂದರ ಚುಟುಕುಗಳಿಗೆ...

    ReplyDelete
  9. ‘ಹು’ಳಗಳ ನಡುವಿನಿಂದ ‘ಹೂ’ಗಳೆಡೆಗೆ ಹಾರುವ ಹನಿಗವನಗಳು ಅರ್ಥಗರ್ಭಿತವಾಗಿವೆ.

    ReplyDelete
  10. @ ಸೀತಾರಾಂ ರವರೆ, @ ವಿ. ಆರ್. ಭಟ್ ರವರೆ,
    ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  11. @ ಕೃಷ್ಣ ಮೂರ್ತಿಯವರೇ,
    ನಿಮ್ಮ ಬ್ಲಾಗ್ ಗೆ ಹೋಗಿ 'ಬೇಸಿಗೆಯ ತ೦ಗಾಳಿ'ಯ ಆನ೦ದ ಪಡೆದು ಬ೦ದೆ ಸರ್. ಕವನ ಅದ್ಭುತವಾಗಿದೆ , ನನ್ನ 'ಹನಿ'ಗಳಿಗೆ ಆತ್ಮೀಯ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  12. @ ಡಾ. ಗುರುಮೂರ್ತಿ ಯವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಯಿ೦ದ ಹರ್ಷಿತಳಾಗಿದ್ದೇನೆ. ಬರೆಯುವ ಉತ್ಸಾಹ ಹೆಚ್ಚಾಗಿದೆ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  13. @ ಮನಮುಕ್ತಾ ರವರೇ,
    ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಯಿ೦ದ ಉಲ್ಲಾಸಿತಳಾಗಿ ಬರೆಯುವ ಉತ್ಸಾಹ ಹೆಚ್ಚಾಗಿದೆ. ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  14. @ಸುನಾಥ್ ರವರೆ,
    ಉತ್ತಮ ಅ೦ಶವನ್ನು ಗಮನಿಸಿರುವ ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  15. @ಪ್ರಕಾಶ್ ರವರೆ,
    ನಿಮ್ಮ ಆತ್ಮೀಯ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  16. @ ಗುಬ್ಬಿ ಸತೀಶ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಡಾ. ಕೃಷ್ಣಮೂರ್ತಿಯವರ ಬ್ಲಾಗ್ ನ ಮೂಲಕ ನಿಮ್ಮ ಬ್ಲಾಗ್ ಗೆ ಹೋಗಿದ್ದೆ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  17. Thanks For visiting My blog Madam,"Hanigalu" its very nice madam.

    ReplyDelete
  18. prabhamaniyavare nimma blogge bandidde manadalada maatu,mattu taaee maguvina anivaryate hrudayasparshiyagide.namma blog ge bandiddakkagi dhanyavadagalu.heege sagali nimma baraha

    ReplyDelete
  19. @ ವೆಂಕಟೇಶ್ ಹೆಗ್ಡೆ ಯವರೇ,
    ನನ್ನ 'ಹನಿ'ಗಳನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  20. @ ಕಲಾವತಿಯವರೇ,
    ನನ್ನ ಬರಹ & ಕವನಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete