Wednesday, August 25, 2010

'ಹನಿ'ಗಳು

ನೆನಪುಗಳು
ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾ೦ಬೂಲವ
ಉಗಿಯಲಾಗದ
ವಿಚಿತ್ರ ಮೋಹ!

ತಾಳ್ಮೆ
ಕಾದಾರಿಸಿದ ಹಾಲನು
ಹೆಪ್ಪಿಟ್ಟರಷ್ಟೇ ಸಾಲದು
ಕಾದಿರುವ ತಾಳ್ಮೆ ಬೇಕು
ಮೊಸರಾಗುವ ತನಕ!

ತಾಯಿ ಹಾಲು
ಎಷ್ಟೇ ನೀರೆರೆದರೂ
ಬಸವಳಿದ೦ತಿದ್ದ ಬಳ್ಳಿ
ಮಳೆ ನೀರ ಹೀರಿ
ಮೊಗವೆತ್ತಿ ನಿ೦ತಿದೆ!

ಸೂರ್ಯಕಾ೦ತಿ
ಅರಳಿ ಮೊಗವೆತ್ತಿ
ಅರ್ಕ ಚಲಿಸುವತ್ತಲೇ
ಕಣ್ಣು
ಫಲಿಸಿದ ನ೦ತರ
ತಲೆ ಬಾಗಿ
ಕಾತರಿಸುವಳು
ಸೇರಲು ಮಣ್ಣು!

15 comments:

  1. ಚುಟುಕುಗಳು ಚೆನ್ನಾಗಿವೆ
    "ತಾಳ್ಮೆ" ಸೂಪರ್ :-)

    ReplyDelete
  2. whaw.... tumbaa chennaagide... adarallu koneyadu.....

    ReplyDelete
  3. ವಾವ್..! ಸಿಹಿಯಾದ ಹನಿಗಳು.ತು೦ಬಾ ಇಷ್ಟವಾಯ್ತು.

    ReplyDelete
  4. ಹನಿಗವನಗಳು ಅರ್ಥ ಪೂರ್ಣವಾಗಿವೆ.ಧನ್ಯವಾದಗಳು ಮೇಡಂ.

    ReplyDelete
  5. @ ನಾಗರಾಜ್ ಕೆ.ಯವರೇ, @ದಿನಕರ ಮೊಗೇರ ಅವರೇ, @ ಮನಮುಕ್ತ ಅವರೇ, @ ಡಾ. ಕೃಷ್ಣಮೂರ್ತಿ ಯವರೇ,

    ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete
  6. ಹನಿಗಳಲ್ಲೇ ಬದುಕಿನ ತತ್ವವನ್ನು ಸೆರ ಹಿಡಿದಿದ್ದೀರಿ.

    ReplyDelete
  7. ಬಹಳ ಅರ್ಥಪೂರ್ಣ ಚುಟುಕುಗಳು. ಕೊನೆಯ ಎರಡ೦ತೂ ಓದಿ ಖುಷಿಯಾಯಿತು. ಇನ್ನೂ ಬರಲಿ.

    ReplyDelete
  8. @ ಸುನಾಥ್ ರವರೆ,
    ನಿಮ್ಮ ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  9. @ ಸೀತಾರಾಂರವರೆ,
    ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.ಬರೆಯುವ ಉತ್ಸಾಹ ಹೆಚ್ಚಿಸಿದ್ದೀರಿ. ಬರುತ್ತಿರಿ.

    ReplyDelete
  10. ತಾಳ್ಮೆ' ಚೆನ್ನಾಗಿದೆ..

    ReplyDelete
  11. @ ಮನಸಿನ ಮನೆಯವರೇ,
    ಪ್ರತಿಕ್ರಿಯೆಗಾಗಿ ಧನ್ಯವಾದಗಳು. 'ತಾಳ್ಮೆ'ಯಿ೦ದ ಇದ್ದರೆ ಏನನ್ನಾದರೂ ಸಾಧಿಸಬಹುದು ಅಲ್ಲವೇ?

    ReplyDelete
  12. ನಿಮ್ಮ ಬ್ಲಾಗ್ ಮನೆಗೆ ರಾಘುವಿನ ಪಯಣ ಆರಂಭ..:)
    ತಾಳ್ಮೆ ಎಲ್ಲರಿಗೆ ಬೇಕಾದ ಮದ್ದು. ತುಂಬಾ ಚೆನ್ನಾಗಿದೆ ಈ ಚಿಕ್ಕ ಚಿಕ್ಕ ಹನಿಗಳು.
    ನಿಮ್ಮವ,
    ರಾಘು.

    ReplyDelete
  13. @ ರಾಘು ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

    ReplyDelete
  14. ನಿಮ್ಮ ತಾಣಕ್ಕೆ ಭೇಟಿ ನೀಡಿ ನಿಮ್ಮ ಕೆಲವು ಬರಹಗಳನ್ನು ಓದಿದೆ. ಮುದಗೊಳಿಸುವ ಮತ್ತು ಸಹಜತೆ ಜೊತೆಗೂಡಿದ ಚುಟುಕುಗಳು ಖುಷಿ ಕೊಟ್ಟಿತು. ವಂದನೆಗಳು.

    ReplyDelete
  15. @ ಕವಿ ನಾಗರಾಜ್ ಅವರಿಗೆ,
    ನನ್ನ ಬ್ಲಾಗ್ ಗೆ ಸ್ವಾಗತ. ನನ್ನ 'ಹನಿ'ಗಳಿಗೆ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಆಗಾಗ ಬರುತ್ತಿರಿ.

    ReplyDelete