Thursday, August 25, 2011

ಆಕೆಯೊ೦ದು ಗುಲಾಬಿ

ಆಕೆಯೊ೦ದು ಗುಲಾಬಿ

ನಿಜ
ಪಟ್ಟ ನೋವುಗಳೆಲ್ಲಾ
ಮುಳ್ಳಾಗಿ ಮಾರ್ಪಟ್ಟು
ಆಗೊ೦ದು
ಈಗೊ೦ದು

ಹೂನಗೆ!


ಅದನೂ ಕೀಳಲು
ಧಾವಿಸಿದವರಿಗೆ

ಮುನಿದು

ಚುಚ್ಚುವಳು

ಹೂಗಳೆಲ್ಲವ ಕಿತ್ತು

ಬರಿದಾಗಿಸಿದ ದಿನ

ಇರುಳೆಲ್ಲಾ ನೊ೦ದು

ಮಿಡಿದ ಅಶ್ರು ಬಿ೦ದು

ಮು೦ಜಾನೆ

ಎಲೆಯ ಮೇಲೆಲ್ಲಾ!

ಹುಟ್ಟೇ ಮುಳ್ಳಾಗಲೆ೦ಬ೦ತೆ

ಮುಳ್ಳೇ ತಾನಾದ೦ತೆ

ನೊ೦ದ ಜೀವಕೆ

ಸಿಕ್ಕೀತೇ ತ೦ಪು?

ಈಗೀಗ

ಕೈತೋಟ

ಪಾರ್ಕುಗಲ್ಲೆಲ್ಲಾ

ಬಣ್ಣ ಬಣ್ಣದ

ಹೂ ನಗೆ

ಬರವಿಲ್ಲ

ಪ್ರದರ್ಶನಕೆ!




11 comments:

  1. ಗುಲಾಬಿ ಹೂವಿನ ಪ್ರತೀಕವನ್ನು ಬಳಸಿಕೊಂಡು ತುಂಬ ಸುಂದರವಾದ ಕವನವನ್ನು ಹೆಣೆದಿದ್ದೀರಿ. ಅಭಿನಂದನೆಗಳು.

    ReplyDelete
  2. ಮೇಡಂ;ಜಗದ ತಂಟೆಗಳ ಮುಳ್ಳುಗಳ ನಡುವೆ ಬಾಳನ್ನು ಹಸನಾಗಿಸಲು ಗುಲಾಬಿಯ ಒಂದು ಮುಗುಳು!ಜಗತ್ತಿನಲ್ಲಿ ಸಮಸ್ಯೆಯ ಜೊತೆ ಪರಿಹಾರವೂ ಜೊತೆ ಜೊತೆಯಾಗಿಯೇ ಇದೆ.ಸುಂದರ ಕವನ.ಅಭಿನಂದನೆಗಳು.

    ReplyDelete
  3. @ ಸುನಾಥ್ ರವರೆ,
    @ಡಾ. ಕೃಷ್ಣ ಮೂರ್ತಿಯವರೆ,
    @ಮ೦ಜುನಾಥ್ ರವರೆ,
    @ ರಘುರವರೆ,
    ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.

    ReplyDelete
  4. prabha maniyavare sundaravaada hrudayasparshiyaada kavana.abhinandanegalu.

    ReplyDelete
  5. ಚೆನ್ನಾಗಿದೆ ಕವನ.

    ReplyDelete
  6. @ ಸತೀಶ್ ರವರೆ,
    @ಕಲಾವತಿಯವರೆ,
    ಆತ್ಮೀಯವಾಗಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  7. @ಈಶ್ವರ್ ಭಟ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ಕವನ ಚೆನ್ನಾಗಿದೆ ಎ೦ದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ವ೦ದನೆಗಳು.

    ReplyDelete
  8. ಸುಂದರ ಕಲ್ಪನೆ! ಚೆನ್ನಾಗಿದೆ!

    ReplyDelete