Sunday, March 4, 2012

ಮನದ ಅಂಗಳದಿ.........೮೨.ಕ್ವಾಂಟಂ ಜಂಪಿಂಗ್

ಕ್ವಾಂಟಂ ಜಂಪಿಂಗ್ ಬಗ್ಗೆ ಭೌತಶಾಸ್ತ್ರದಲ್ಲಿ ಪರೀಕ್ಷೆಗಾಗಿ ಓದಿದ್ದನ್ನು ಹೊರತುಪಡಿಸಿ ನಂತರ ಆಲೋಚಿಸಿರಲಿಲ್ಲ. ಎಷ್ಟೋ ವರ್ಷಗಳ ನಂತರ ಹೊಸ ಆಯಾಮ ಪಡೆದ ‘ಕ್ವಾಂಟಂ ಜಂಪಿಂಗ್’ ನನ್ನತ್ತ ಜಂಪ್ ಮಾಡಿ ನನ್ನನ್ನೇ ತನ್ನಲ್ಲಿ ಲೀನಗೊಳಿಸಿಕೊಳ್ಳುತ್ತದೆಂದು ಎಂದೂ ಕಲ್ಪಿಸಿರಲೂ ಇಲ್ಲ! ಏನಿದು ‘ಕ್ವಾಂಟಂ ಜಂಪಿಂಗ್?’
ನಮ್ಮ ಸುಪ್ತಮನಸ್ಸಿನಲ್ಲಿ ಅಡಗಿರುವ ಮಹಾನ್ ಸಾಮರ್ಥ್ಯವನ್ನು ತಟ್ಟಿ ಎಚ್ಚರಿಸಿ ನಮಗೆ ಅಗತ್ಯವಾದದ್ದನ್ನು ನಮ್ಮೊಳಗಿನಿಂದಲೇ ಪಡೆದುಕೊಳ್ಳುವ ವಿಧಾನವೇ ಕ್ವಾಂಟಂ ಜಂಪಿಂಗ್! ನಮ್ಮೊಳಗೇ ಅರಿವಿದ್ದೋ ಇಲ್ಲದೆಯೋ ಹುದುಗಿರುವ ಸೃಜನಾತ್ಮಕತೆಯನ್ನು , ಅದರಲ್ಲಿ ಈಗಾಗಲೇ ಪರಿಣಿತನಾಗಿರುವ ನಮ್ಮ ಆಂತರ್ಯದೊಂದಿಗೆ ಸಂಪರ್ಕಿಸಿ ಪಡೆದುಕೊಂಡು ನಮ್ಮ ವಾಸ್ತವ ಜೀವನಕ್ಕೆ ಅಳವಡಿಸಿಕೊಳ್ಳುವುದು. ಒಟ್ಟಾಗಿ ಹೇಳುವುದಾದರೆ ಕ್ವಾಂಟಂ ಜಂಪಿಂಗ್ ಒಂದು ನವೀನ ರೀತಿಯ ಧ್ಯಾನಮಾಡುವ ಮತ್ತು ಮುನ್ನೋಟವನ್ನು ಹೊಂದುವ ತಂತ್ರ. ಇದು ‘ಅಮೇರಿಕನ್ ಮಾಂಕ್’ ಎಂದೇ ಖ್ಯಾತಿ ಹೊಂದಿದ ಬರ್ಟ್ ಗೋಲ್ಡ್ಮನ್ರವರ ೩೦ವರ್ಷಗಳ ದೀರ್ಘಕಾಲದ ಕಲಿಕೆ ಮತ್ತು ಸಾಧನೆಯ ಫಲ! ತಮ್ಮ ೧೯ನೆಯ ವಯಸ್ಸಿನಲ್ಲಿಯೇ ಈ ಬಗ್ಗೆ ಆಸಕ್ತಿಹೊಂದಿದ ಬರ್ಟ್ ಗೋಲ್ಡ್ಮನ್ ಮೊದಲು ‘ಸಿಲ್ವ ವಿಧಾನ’ದಿಂದ ರೂಪಿಸಲಾರಂಭಿಸುತ್ತಾರೆ. ನಂತರ ಭಾರತದ ಸಾಧಕರಿಂದ ಪಡೆದುಕೊಂಡ ಆಳವಾದ ಜ್ಞಾನ, ಹವಾಯನ್ನ ಕಹೂನಾ ರವರಿಂದ ಹಾಗೂ ತಮ್ಮ ಬದುಕಿನ ದಾರಿಯಲ್ಲಿ ಸಂಧಿಸಿದ ಇತರ ಪರಿಣತರ ಸಹಕಾರದಿಂದ ಪರಿಣಾಮಕಾರಿ ಮತ್ತು ಶಕ್ತಿಶಾಲಿಯಾದ ತಂತ್ರವನ್ನು ಸಂಶೋಧಸಿದರು. ತಮ್ಮ ೮೦+ ವಯಸ್ಸಿನಲ್ಲಿ ಅವರು ರೈಡಿಂಗ್, ಪೇಂಟಿಂಗ್, ಮ್ಯೂಸಿಕ್, ಫೋಟೋಗ್ರಫಿಗಳಲ್ಲಿ ಪರಿಣತರಾಗಿದ್ದಾರೆ. ತಾವು ಕಂಡ ಈ ವೈಶಿಷ್ಟ್ಯವನ್ನು ಬರಹರೂಪಕ್ಕೆ ಇಳಿಸುವ ಮೂಲಕ ಲೇಖಕರೂ ಆಗಿದ್ದಾರೆ. ಫೋಟೋಗ್ರಫರ್ ಆದದ್ದನ್ನು ಈ ರೀತಿಯಾಗಿ ತಿಳಿಸುತ್ತಾರೆ:
‘ನಾನು ನನ್ನ ಆಂತರ್ಯದ ಜಗತ್ತಿಗೆ ಜಿಗಿದು ಗ್ರೇಟ್ ಫೋಟೋಗ್ರಫರ್ ಬರ್ಟ್ ಗೋಲ್ಡ್ಮನ್ ನನ್ನು ಸಂಧಿಸಿದೆ. ಅವನು ವಿಂಟೇಜ್ ಕ್ಯಾಮೆರಾ ಎದುರು ನಿಂತಿದ್ದ. ನಾನು ಅವನಿಗೆ ‘ಗ್ರೇಟ್ ಫೋಟೋಗ್ರಫರ್ ಆಗಲು ನಿನ್ನಿಂದ ಸಲಹೆ ಪಡೆಯಲು ಬಂದೆ,’ ಎಂದು ಹೇಳಿದೆ. ಅದಕ್ಕೆ ಉತ್ತರವಾಗಿ ನನಗೆ ಎರಡು ಸ್ಪಷ್ಟ ಪದಗಳು ಕೇಳಿಸಿದವು, `plant yourself’ಹಾಗೆಂದರೇನು?’ ನಾನು ಕೇಳಿದೆ. ಸ್ವಲ್ಪ ಕಾಲದ ನಂತರ `Take a lot of pictures,’ ಎಂಬ ಉತ್ತರ ಬಂತು. ಆಗ ನನಗೆ ಏನೂ ಅರ್ಥವಾದಂತೆ ಕಾಣಲಿಲ್ಲ. ನಾನು ನನ್ನ ವಾಸ್ತವ ಪ್ರಪಂಚಕ್ಕೆ ಬಂದೆ ಮತ್ತು ಒಂದು ಕ್ಯಾಮೆರಾವನ್ನು ತೆಗೆದುಕೊಂಡೆ. ನಾನು ಸಾನ್ ದಿಯಾಗೊದಲ್ಲಿನ ಮರೀನ ಬೀಚ್ ಗೆ ಹೋಗಿ ಅನೇಕ ಚಿತ್ರಗಳನ್ನು ತೆಗೆದೆ. ನಾನು ಬಂಡೆಗಳ ಮೇಲೆ ಹೋದಾಗ ಅವು ತುಂಬಾ ಜಾರುತ್ತಿದ್ದವು. ನಾನು ಬಹಳ ನಿಗಾ ವಹಿಸಿ ಜಾರದಂತಹ ಒಂದು ಜಾಗವನ್ನು ಆಯ್ಕೆ ಮಾಡಿಕೊಂಡು ಜಾಗ್ರತೆಯಾಗಿ ನಿಂತುಕೊಂಡೆ. ಓಹ್, ತತ್ ಕ್ಷಣವೇ ನನಗೆ ಹೊಳೆಯಿತು. ಈಗ ನಾನು ನನ್ನನ್ನು ‘ಪ್ಲಾಂಟ್? ಮಾಡಿಕೊಳ್ಳುತ್ತಿದ್ದೇನೆ- ‘Now I am PLANTING myself,’ ಎಂದು! ಬಹುಷಃ ಇದೇ ನನ್ನ ಆಂತರ್ಯ(twinself-doppleganger) ನನಗೆ ನೀಡಿದ ಸೂಚನೆಯಿರಬಹುದು. `plant yourself’ ಎಂದರೆ ‘ಒಂದು ಜಾಗದಲ್ಲಿ ಸ್ಥಿರವಾಗಿ ನಿಲ್ಲು,’ ಎಂದು ಅರ್ಥವೆಂದು ತಿಳಿಯಿತು. ಈರೀತಿ ನನ್ನನ್ನು ನಾನು ‘ಪ್ಲಾಂಟ್’ ಮಾಡಿಕೊಂಡು ಸಾಕಷ್ಟು -ನನಗೆ ಖಚಿತವಾಗಿ ನೆನಪಿದೆ ೧೩೦ ಚಿತ್ರಗಳನ್ನು ತೆಗೆದೆ! ಇವುಗಳಲ್ಲಿ ಒಂದು ಉತ್ತಮವಾಗಿ ಇರಲೇಬೇಕು. ಅವುಗಳನ್ನು ಪ್ರಿಂಟ್ ಹಾಕಿಸಿ ನನ್ನ ಹೊಟೆಲ್ನ ರೂಂಗೆ ಹೋಗಿ ಉತ್ತಮವಾದದ್ದನ್ನು ಆಯ್ಕೆಮಾಡಲು ಹಾಸಿಗೆಯ ಮೇಲೆ ಹರಡಿದೆ. ಆದರೆ ಅವುಗಳನ್ನು ಹಾಸಿಗೆಯಮೇಲೆ ಹಾಕುತ್ತಿದ್ದಂತೆ ಅವು ಬೇರೆಬೇರೆ ಚಿತ್ರಗಳಲ್ಲ, ಒಂದೇ ಚಿತ್ರ ಎನ್ನುವಂತೆ ಕಂಡುಬಂದವು. ಅವೆಲ್ಲವೂ ಒಂದು ಸುಂದರವಾದ ‘ಜಿಗ್ ಝಾ ಪಝಲ್? ನಂತೆ ಒಂದರೊಡನೊಂದು ಹೊಂದಿಕೊಂಡವು. ನನಗೆ ನಂಬಲಸಾಧ್ಯವಾಗುವಂತೆ ಅದು ಅದ್ಭುತವಾಗಿತ್ತು. ನಾನು ಒಂದು ಫೋಂ ಬೋರ್ಡನ್ನು ತಂದು ಅವುಗಳನ್ನೆಲ್ಲಾ ಒಂದು ಚಿತ್ರದಂತೆ ಅಂಟಿಸಿದೆ.
ಆ ದಿನದಿಂದ ‘ಮಾಂಟೇಜಸ್’ ((Montages)) ಎಂದು ನಾನೇ ಹೆಸರಿಸಿದ ಇಂಥಾ ಅನೇಕ ಚಿತ್ರಗಳನ್ನು ತೆಗೆದೆ. ಅವು ಎಷ್ಟೊಂದು ಪ್ರಸಿದ್ಧಿಯಾದವೆಂದರೆ ೨೪ ಅಂಥಾ ಚಿತ್ರಗಳು ಅಮೇರಿಕಾದ ಒಂದು ಸುಪ್ರಸಿದ್ಧ ಗ್ಯಾಲರಿಯಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿವೆ!?
‘ಕ್ವಾಂಟಂ ಜಂಪಿಂಗ್ಅನ್ನು ಉಪಯೋಗಿಸಲಾರಂಭಿಸಿದ ಸುಮಾರು ೩೦ದಶಕಗಳ ನಂತರ, ನನ್ನನ್ನು ಪರಿವರ್ತಿಸಬಹುದಾದ ಇನ್ನೂ ಇತರ ನೂತನ ವಿಧಾನಗಳ ಬಗ್ಗೆ ಸಂಶೋಧಿಸುತ್ತಿದ್ದೇನೆ,’ ಎನ್ನುತ್ತಾರೆ ಬರ್ಟ್ ಗೋಲ್ಡ್ಮನ್! ‘ನಾನು ಕ್ವಾಂಟಂ ಜಂಪಿಂಗ್ಅನ್ನು ಬಳಸಿ ನನ್ನೊಳಗಿನ ನನ್ನನ್ನು ಸಂಪರ್ಕಿಸಿ ಕಲಿಯುತ್ತಾ ಅದ್ಭುತವಾದದ್ದನ್ನು ಪಡೆದುಕೊಳ್ಳಲಾರಂಭಿಸಿದ ನಂತರ ನನ್ನ ಜೀವನವೇ ಪುನಶ್ಚೇತನಗೊಂಡು ನವನವೀನವಾಗುತ್ತಿದೆ ಎನಿಸುತ್ತಿದೆ. ನನ್ನ ಈ ಪಯಣದ ಉತ್ತಮ ಭಾಗವೆಂದರೆ ನಾನು ಕಂಡುಕೊಂಡ ಈ ಮಹತ್ತರವಾದ ತಂತ್ರವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದು. ನನ್ನ ಈ ೮೩ನೆಯ ವಯಸ್ಸಿನಲ್ಲಿಯೂ ಮೆದುಳಿನ ಅಗಾಧ ಸಾಮರ್ಥ್ಯವನ್ನು ಕಂಡುಹಿಡಿದ ಪ್ರಾರಂಭದಲ್ಲಿನ ಉತ್ಸಾಹವೇ ನನಗಿದೆ. ಆಲ್ಫ ಹಂತವನ್ನು ಪ್ರವೇಶಿಸಿ ಮೆದುಳಿನ ಈ ಅದ್ಭುತ ಶಕ್ತಿಯ ಲಾಭಗಳನ್ನು ಪಡೆದುಕೊಳ್ಳುವ ವಿಧಾನವನ್ನು ನಾನು ನಿಮಗೆ ತಿಳಿಸುತ್ತೇನೆ.....
ನನ್ನ ಈ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಸುತ್ತಿ, ಸೆಮಿನಾರ್ಗಳನ್ನು ನಡೆಸುವುದು ಕಷ್ಟಕರ. ಆದ್ದರಿಂದ ನಾನು ಇಂಟರ್ನೆಟ್ ಮೂಲಕ ನನಗೆ ತಿಳಿದದ್ದನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.’
ಬರ್ಟ್ ಗೋಲ್ಡ್ಮನ್ರವರ ಫೇಸ್ ಬುಕ್ ನ ಇತ್ತೀಚಿನ ಪೋಸ್ಟಿಂಗ್, `Energizing a glass of water’
ಈ ರೀತಿಯ ಸಾಧಕರ ವಿಚಾರಗಳನ್ನು ತಿಳಿದಾಗಲೆಲ್ಲಾ ‘ಆನಂದ’ ಎಂಬ ಶೀರ್ಷಿಕೆಯ ಈ ‘ಹನಿ’ ನೆನಪಾಗುತ್ತದೆ,
‘ಕಣ್ಣು ಹಾಯಿಸಿದಲ್ಲೆಲ್ಲಾ
ಬೆಳೆ ತುಂಬಿದ ಬಯಲು
ಇಳಿದಿದ್ದೇನೆ ಆರಿಸಿ ಕೊಯ್ಯಲು
ಕನಜ ತುಂಬಿದ ನಂತರ
ಹದವರಿತು ಬಿತ್ತಲು!’
ಜಗತ್ತಿನಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದಂಥಾ ಮಹನೀಯರು ನಮ್ಮೊಡನೆ ಮೂರ್ತ ಅಥವಾ ಅಮೂರ್ತ ರೂಪದ ತಮ್ಮ ಕೃತಿಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಅವುಗಳನ್ನು ಒಳಿತಿಗಾಗಿ ಬಳಸಿ, ಉಳಿಸಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿದೆ.

11 comments:

  1. Replies
    1. @ ವಿಜಯಶ್ರೀಯವರೇ'
      ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
  2. ಬರ್ಟರ ಈ ತಂತ್ರ ನನಗೆ ನೆಚ್ಚಿಗೆಯಾಯಿತು. ಕ್ವಾಂಟಂ ಜಂಪಿಂಗ್ ಮೂಲಕ ನನ್ನ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬಲ್ಲೆ ಎನ್ನುವ ನಂಬಿಕೆ ಈಗ ಬಂದಿದೆ.

    ಕಡೆಯಲ್ಲಿ ಉಲ್ಲೇಖಿಸಿರುವ ಹನಿಗವನವೂ ಚೆಲುವಾಗಿದೆ.

    ಇಂತಹ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. @ಬದರಿನಾಥ್ ಪಳವಲ್ಲಿಯವರೇ,
      ಲೇಖನ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು, `ಕ್ವಾಂಟಂ ಜಂಪಿಂಗ್' ಆಡಿಯೋ ಬುಕ್ ನಲ್ಲಿ ರಿಲ್ಯಾಕ್ಸೆಶನ್ ತಂತ್ರಗಳಿವೆ. ಅವುಗಳ ಮೂಲಕ ನಮಗೆ ಅಗತ್ಯವಾದ ಲಾಭಗಳನ್ನು ನಿಜಕ್ಕೂ ಪಡೆಯಬಹುದು.

      Delete
  3. ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಮೇಡ೦.‘ಕ್ವಾಂಟಂ ಜಂಪಿಂಗ್’ ಬಗ್ಗೆ ಅಲ್ಪವಾಗಿ ತಿಳಿದಿದ್ದ ನನಗೆ ನಿಮ್ಮ ಲೇಖನವು ತು೦ಬಾ ಉಪಯುಕ್ತವಾಯಿತು.

    ಅನ೦ತ್

    ReplyDelete
    Replies
    1. @ಅನಂತ್ ರಾಜ್ ರವರೆ,
      ಉತ್ತಮ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಆ ಮಹನೀಯರು ನೀಡಿರುವ ಕೊಡುಗೆಯನ್ನು ನಾವೆಲ್ಲರೂ ಸದುಪಯೋಗ ಪಡಿಸಿಕೊಳ್ಳೋಣ.

      Delete
  4. ಹೊಸ ಹೊಸ ವಿಚಾರಗಳನ್ನು, ಹೊಸ ಹೊಸ ವಿಧಾನಗಳನ್ನು ತಿಳಿಸುತ್ತಿರುವ ನಿಮಗೆ ಅನೇಕ ಧನ್ಯವಾದಗಳು.

    ReplyDelete
    Replies
    1. @ಸುನಾಥ್ ರವರೆ,
      ತಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ನಮಗೆ ಯಾವುದು ಆಸಕ್ತಿಕರವೋ, ಆನ೦ದದಾಯಕವೊ ಅದನ್ನೇ ಪಡೆದುಕೊಳ್ಳುತ್ತಾ ಸಾಗುತ್ತೇವೆ ಎನ್ನುವುದಕ್ಕೆ ಇದೊ೦ದು ಉದಾಹರಣೆ. ಹೊಸಹೊಸ ವಿಚಾರ ಮತ್ತು ವಿಧಾನಗಳನ್ನು ಸ್ವೀಕರಿಸುತ್ತಿರುವ ತಮಗೆ ನನ್ನ ನಮನಗಳು.

      Delete
  5. ನಮ್ಮ ಎಲ್ಲ ಸಮಸ್ಯೆಗಳ ಮೂಲ ನಮ್ಮೊಳಗೇ ಇದೆ. ಒಳಹೊಕ್ಕು ನೋಡಿದರೆ ಮೂಲವೂ ತಿಳಿಯುತ್ತದೆ, ತನ್ಮೂಲಕ ಪರಿಹಾರವೂ ದೊರೆಯುತ್ತದೆ. ಪ್ರತಿಯೊಬ್ಬನೂ ತನ್ನೊಳಹೊಕ್ಕು ನೋಡುವ ಕಲೆ ಕರಗತ ಮಾಡಿಕೊಳ್ಳಲು ತನಗೆ ಒಗ್ಗುವ ತಂತ್ರ ಅಳವಡಿಸಿಕೊಳ್ಳಬೇಕು. ಅದರ ಹೆಸರು, ಅದನ್ನು ಆವಿಷ್ಕರಿಸಿದವರು ಯಾವ ಮತೀಯರು ---ಇವೆಲ್ಲ ಅಮುಖ್ಯ

    ReplyDelete
  6. hosa vicharagLu tiLisiddakke thank you...

    ReplyDelete
  7. ಪ್ರಭಾಮಣಿ ಮೇಡಂ...ಕ್ವಾಂಟಮ್ ಜಂಪ್ ಭೌತಶಾಸ್ತ್ರದ ಮೂಲದ್ದಾದರೂ ಅದರ ಟೆಂಟಕಲ್ಸ್..ಕಲ್ಸೋ ಪಾಠ ಅಭೂತವಾದದ್ದು. ಇದನ್ನ ಎಲ್ಲಾ ಕ್ಷೇತ್ರದಲ್ಲೂ ಕಾಣಬಹುದು ಅಳವಡಿಸಬಹುದು... ರಾಮಾಯಣದ ಹನುಮಂತನದ್ದು ಕ್ವಾಂಟಮ್ ಜಂಪ್ಗೆ ಮಹತ್ತರ ಉದಾಹರಣೆ (ತಾತ್ವಕ ರೂಪದ್ದಲ್ಲ ಸಾಮ್ಯಕ ಸೂಪದ್ದು). ಜೀವನದ ಸಣ್ಣ ಪುಟ್ಟ ತಪ್ಪು ಒಪ್ಪು ಮಾಡೊಳ್ಳೋದು ನಮ್ಮ ಮಟ್ಟಿನ ಕ್ವಾಂಟಮ್ ಆದ್ರೆ ಸಾಧು ಸಂತ ಸಾಧಕರದ್ದು ಹಿರಿ ಮಟ್ಟದ ಕ್ವಾಂಟಮ್..ಎಲ್ಲರೂ ಜಂಪ್ ಮಾಡುವವರೇ,,,ಆದರೆ...ಕ್ವಾಂಟಮ್ ?? ಅವರವರ ಭಾವಕ್ಕೆ...
    ಚನ್ನಾಗಿದೆ...ಬರಹ.

    ReplyDelete