Saturday, July 28, 2012

`ಮೌನ’ದುತ್ತರ

ಎಲ್ಲೋ ಹುಟ್ಟಿ
ತಗ್ಗಿನತ್ತಲೇ ಸಾಗಿ
ತೊರೆಝರಿಗಳನೆಲ್ಲಾ
ತನ್ನುದರದಲಿ ಸೇರಿಸಿ....

ಹಿಗ್ಗುತ್ತಾ
ಹಠಾತ್ತನೆದುರಾಗುವ
ಆಳಗಳೊಳಗೆ
ಧುಮ್ಮಿಕ್ಕಿ
ಅಬ್ಬರಿಸಿ
ಅಲ್ಲಲ್ಲಿ
ಸುಳಿ ನಿರ್ಮಿಸಿ....

ಅಡ್ಡಿಗಳ ಮೀರಲು
ಅಪ್ಪಳಿಸಿದರೂ
ಸಿಗುವ
ಅವಕಾಶಗಳಲೇ
ನುಗ್ಗಿ ನುಸುಳಿ....

ಹರಿವ ನದಿಗೆ
ಎದುರಾಗುವ
ಹೆಬ್ಬ೦ಡೆಗಳ
ಅಚಲತೆಯ ಬಗ್ಗೆ
ಅಪಹಾಸ್ಯ!

[olಸುತ್ತ ಬಳಸಿ ನೇವರಿಸಿ
ತು೦ತುರು ಸಿಡಿಸಿದ
ಭಾವಗಳ ಚಿತ್ತಾರ

ಅ೦ಧ ಗಾಯನ
ಚಮತ್ಕಾರಕೂ
ಅಲ್ಲಾಡದ ಬ೦ಡೆ!

ನದಿ ಸಾಗಿ ಬ೦ದ
ಬೀಗುತ್ತಿರುವ
ವೈಭವಕೆ
ಗ೦ಭೀರ
ಮೌನದುತ್ತರ!

ಹಿ೦ದೆ ಹಾಕಲಾರೆ
ಮು೦ದೆಯೂ ನೂಕಲಾರೆ
ಇದ್ದಲ್ಲೇ ಇರುವ
ನನ್ನೇ ಬಳಸಲು
ಬ೦ದೇ ಬರುವೆ
ಇ೦ದಿನ೦ತೆಯೇ ನಾಳೆ....

ಕಳೆದುಕೊ೦ಡ
ಅಸ್ಥಿತ್ವಕೆ ತಹತಹಿಸಿ
ಮೇಲೇರಿ
ಮುಗಿಲಸೇರಿ.....

4 comments:

  1. ನದಿ ಮತ್ತು ಹೆಬ್ಬಂಡೆ ಪ್ರತಿಮೆಗಳು ನನಗೆ ಪತಿ ಪತ್ನಿಯರ ಹಾಗೆ ಕಂಡವು.

    ಉತ್ತಮ ಕವನ ವಸ್ತುವಿನ ಅನಾವರಣವಾಗಿದೆ.

    ReplyDelete
  2. ಪ್ರವಾಹ ಮತ್ತು ಬಂಡೆ ಇವುಗಳ ಭಾವನೆಗಳು ಚೆನ್ನಾಗಿ ಮೂಡಿ ಬಂದಿವೆ!

    ReplyDelete
  3. ಮೇಡಂ;ತುಂಬಾ ಸುಂದರವಾಗಿ ಹರಿದ ಲಹರಿ!ನದಿಯಂತೆಯೇ ಹರಿದು,ಸಾಗರವನ್ನು ಸೇರಿ ನಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಮೇಲೇರಿ ಮುಗಿಲಾಗುವುದೇ ನಮ್ಮೆಲ್ಲರ ಗುರಿಯೂ ಅಲ್ಲವೇ!!?ನನ್ನಬ್ಲಾಗಿಗೂ ಭೇಟಿ ಕೊಡಿ.ನಮಸ್ತೆ.

    ReplyDelete
  4. ಸೊಗಸಾದ ಲೇಖನ
    ಪ್ರತಿಯೊಂದಕ್ಕೂ ತನ್ನತನದಲ್ಲಿ ತನ್ನದೇ ಆದ ಶಕ್ತಿಯಿದೆ,ಅಪಹಾಸ್ಯ ಸಲ್ಲದು

    ReplyDelete