Saturday, October 27, 2012

ಮನದ ಅಂಗಳದಿ.....


ಬೆಳೆ ಇಲ್ಲದ ಜಾಗದಲ್ಲಿ

ಬೆಳೆವುದು ಕಳೆ

ಯಥೇಚ್ಚ



ಪೈರನ್ನೇ ಹಿಮ್ಮೆಟ್ಟಿಸಿ

ಹುಲುಸಾಗುವಲ್ಲೇ

ವಿಕಟಾಟ್ಟಹಾಸ



ಉಳಿವಿಗಾಗಿ

ಪೈಪೋಟಿಯಲ್ಲಿ

ಸಮರ್ಥ ಕಳೆಗೇ

ಉಳಿವು



ಕಳೆಯ ನಿರ್ಮೂಮಲನೆಗೋ

ಹತ್ತೆಂಟು ಹಾದಿ

ಕಿತ್ತಷ್ಟೂ

ಮತ್ತೆ ಚಿಗುರುವ

ರಕ್ತ ಬೀಜಾಸುರನ

ವಂಶ

ಬೆಳೆಗೇಕಿಲ್ಲ

ಆ ಒಂದೂ

ಅಂಶ?



ಬೆಳೆಯನೇ

ಬಳಸುವ

ಧೃತರಾಷ್ಟ್ರಾಲಿಂಗನ

ಎತ್ತಲಿಂದಲೋ

ಬಂದವತರಿಸಿದ

ಪಾಥೇನಿಯಂ

ಪಯಣ!



ಕಳೆಯ ನಾಶದತ್ತಲೇ

ಕೇಂದ್ರೀಕೃತ ಮನವ

ಬೆಳೆಯ

ಸದೃಢಗೊಳಿಸುವತ್ತ

ಕೊಂಡೊಯ್ದರೆ ಹೇಗೆ?



ಸಮರ್ಥ ಬೆಳೆ

ನಿಂತೀತು

ಕಳೆಯನೇ ಮೆಟ್ಟಿ

ಗೊಬ್ಬರವಾಗಿಸಿಕೊಳ್ಳುತ್ತಾ.....









3 comments:

  1. ಆಶಯ ದೊಡ್ಡದಾಗಿದೆ, ಆಶಯ ಸರಿಯಾಗಿದೆ. ಇದು ಫಲಿಸೀತು ಎಂದು ಹಾರೈಸೋಣವೆ?

    ReplyDelete
  2. ಸಮರ್ಥ ಬೆಳೆ ನಿಂತೀತು ಕಳೆಯನೇ ಮೆಟ್ಟಿ ಗೊಬ್ಬರವಾಗಿಸಿಕೊಳ್ಳುತ್ತಾ.....as similar as survival of fittest... ಅಂದ ಹಾಗೆ ಪಾರ್ಥೇನಿಯಂ ಇಂದ ಕೂಡ ಗೊಬ್ಬರವನ್ನು ತಯಾರಿಸಬಹುದು... ಇದು ಸ್ವಅನುಭವ ಕೂಡ...ಅರ್ಥಪೂರ್ಣವಾಗಿದೆ..

    ReplyDelete
  3. ಪ್ರಭಾ ಅವರೇ,
    ಸದಾಶಯದ ಕವನ.
    ಮನವು ಸುಂದರ ತೋಟವಾಗಲಿ

    ReplyDelete