Sunday, July 14, 2013

ಗಾಳಿಪಟ `ಹನಿ'ಗಳು

       ೧.
ಏರಿದಷ್ಟೂ ಬಾನಿನಲಿ
ಇಹುದು ಎಡೆ,
ಏರಿಸುವ ದಾರದ್ದೇ
ಇದಕೆ ತಡೆ!

      ೨.
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!

       ೩.
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!

3 comments:

  1. ಪ್ರತ್ಯೇಕವಾಗಿ ಓದಿಕೊಂಡರೂ ಹನಿಗಳೇ - ಪೂರ್ತಿಯಾಗಿ ಓದಿಕೊಂಡರೆ ಕವಿತೆಯೇ
    ತುಂಬಾ ಇಷ್ಟವಾಯಿತು.

    ReplyDelete
  2. ತುಂಬಾ ಚೆನ್ನಾಗಿವೆ ಮೇಡಂ ಹನಿಗಳು

    ReplyDelete
  3. ತುಂಬ ಅರ್ಥಪೂರ್ಣ ಹನಿಗಳು!

    ReplyDelete