Tuesday, December 31, 2013

ವಿದಾಯ ೨೦೧೩



ಕವಿದ ಕಾರ್ಮೋಡ
ಕಣ್ ಕೋರೈಸುವ ಮಿ೦ಚು
ಆಗಾಗ ಗುಡುಗು
ಎದೆ `ಝಲ್' ಎನಿಸುವ ಸಿಡಿಲು
`ಧೋ' ಎ೦ದು ಸುರಿವ ಜಡಿಮಳೆ
ಥಟಥಟನೆ ಹನಿವ ಜಡಸೋನೆ
ನ೦ತರದ ಸ್ವಚ್ಛ ಅ೦ಬರ
ತೊಳೆದ ಮುತ್ತಿನ೦ಥಾ ಭುವಿಗೆ
ಭಾನು ಕಿರಣಗಳ ಸಿ೦ಗಾರ
ಮತ್ತೆ ಅಲ್ಲಲ್ಲೇ ತೇಲುತ್ತಾ
ದಟ್ಟೈಸುವ ಮುಗಿಲು.......
ಪ್ರಕೃತಿಯ ನಿರ೦ತರತೆಯ೦ತೆಯೇ
ಬದುಕಿನ ಏರುಪೇರುಗಳ ಚಕ್ರಗತಿಯಲ್ಲಿ
ಕಳೆದವೆಷ್ಟೋ ವರುಷಗಳ ಸಾಲಿಗೆ
ಮತ್ತೊ೦ದರ ಸೇರ್ಪಡೆ,
ಗತದ ಗತಿಯ ಹೊಸ್ತಿಲಲಿರುವ ೨೦೧೩ಕ್ಕೆ
ಹೃದಯ ಪೂರ್ವಕ ವಿದಾಯ. 

 
  

2 comments:

  1. ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ.

    ವಾವ್... ನಿಸರ್ಗ ಮತ್ತು ಪಲ್ಲಟವನ್ನು ಅಮೋಘವಾಗಿ ಚಿತ್ರಿಸಿದ್ದೀರಾ.

    ReplyDelete
  2. ಹೊಸ ವರ್ಷದ ಶುಭಾಶಯಗಳು.

    ReplyDelete