Friday, January 31, 2014

`ಹನಿ'ಗಳು

ಈ ಕ್ಷಣ
ಭೂತಕ್ಕೆ ಬ೦ಧಿಯಾಗದೇ
ಭವಿಷ್ಯಕ್ಕೆ ಜೋತುಬೀಳದೇ
ವರ್ತಮಾನದಲೇ ........
ನೆಲೆಯಾಗುವ ಮನ
ಆನ೦ದದ ನೆಲೆವೀಡು!

ಮನವೆ೦ಬ...........
`ಒ೦ದೇ ಕ್ಷಣ
ಇಲ್ಲೇ ಕುಳಿತಿರು'
ಎ೦ದಿದ್ದೆ,
ಮೇಲಿನ-ಕೆಳಗಿನ
ರೆ೦ಬೆಗಳಲೆಲ್ಲಾ
ನೆಗೆದಾಡಿ
ಅತ್ಯುನ್ನತದೆಡೆಗೆ
ಹಾರಲುಪಕ್ರಮಿಸಿ
ಇನ್ನೇನು........
ಅಧೋಪ್ರಪಾತದೊಳಗೇ
ಜಾರಲಿದ್ದೆಯಲ್ಲಾ.........!

ಸಾಸಿವೆ ಸ್ವಗತ!
ಚಟಪಟ ಸಿಡಿದು
ಉ೦ಡವರ
ಒಡಲ ಸೇರುವ ಬದಲು
ಚಟ್ಟನೆ ಸಿಡಿದಾಗಲೇ
ಭುವಿಯ ಮಡಿಲ ಸೇರಿದ್ದರೆ..........
ಕುಲ ಬೆಳೆಸಿದ
ಕುಡಿಯಾಗುತ್ತಿದ್ದೆ.....ನೇ.....ನೋ...!

9 comments:

  1. ಆದರ್ಶ ಮತ್ತು ವಾಸ್ತವ ಬೆರೆತ ನಿಮ್ಮ ಹನಿಗಳು ತುಂಬ ಸೊಗಸಾಗಿವೆ.

    ReplyDelete
    Replies
    1. `ಹನಿ'ಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸುನಾಥ್ ಸರ್ , ಬರುತ್ತಿರಿ.

      Delete
  2. ಮೂರೂ ಮನೋ ಪರಿವರ್ತಕ ಹನಿಗಳೇ.

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.

      Delete
  3. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಪದ್ಮಾ ಭಟ್ ರವರೇ, ಬರುತ್ತಿರಿ.

    ReplyDelete
  4. ಒಂದೊಂದು ಹನಿಗಳೂ
    ಸೊಗಸಾಗಿವೆ....

    ಸಾಸಿವೆಯ ಸ್ವಗತವಂತೂ ತುಂಬಾ ಇಷ್ಟವಾಯಿತು.......

    ReplyDelete
  5. ಪ್ರಭಾ ಜೀ -
    ಮೂರೂ ಹನಿಗಳು ತುಂಬಾನೇ ಇಷ್ಟವಾದವು - ಒಂದಕಿಂತ ಒಂದು....

    ReplyDelete