Thursday, April 24, 2014

2`ಹನಿ'ಗಳು

ಫ್ಲಾಷ್

ಆಗಾಗ ಮುಗಿಲು
ಛಕ್ಕೆನಿಸುವ ಮಿ೦ಚು
ಆಗಸ ಭೂಸಿರಿಯ
ಕ್ಲಿಕ್ಕಿಸುವ ಸ೦ಚು!
 
(ಫೊಟೊ- ಅ೦ತರ್ಜಾಲದ ಕೃಪೆ)

`ಆಮೆ'

ತನುವನಾವರಿಸಿದ ಚಿಪ್ಪ
ಒಡವೆ ಸಿ೦ಗಾರ
ತಲೆ ಒಳಗೆಳೆದು
ಮುದುರಿಕೊಳ್ಳುವ ಧೀರ
ನಿನ್ನ೦ತೆ ನನಗೂ ಇದ್ದಿದ್ದರೆ
ದೇಹಕೆ ಚಿಪ್ಪ ಗೋಡೆ
ಬ೦ಡೆಯಾಗಿ ಬಿದ್ದಿರುತ್ತಿದ್ದೆ
ಯಾವುದಾದರೂ
ಸಮುದ್ರದ ದ೦ಡೆ!
(ಫೊಟೊ- ಅ೦ತರ್ಜಾಲಕೃಪೆ)

4 comments:

  1. ಮೊದಲ ಹನಿಯ ಸಾದೃಶ್ಯತೆಯು ನಮ್ನನ್ನು ಊಹಾಲೋಖ್ಕೆ ಕೊಂಡೊಯ್ತು.
    ಆಮೆ ಹನಿಯಲ್ಲಿಯ ಆಶಯ ನಮ್ಮದೂ ಸಹ.

    ReplyDelete
    Replies
    1. ಎರಡು ಹನಿಗಳನ್ನೂ ಸ್ವತಃ ಅನುಭವಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಬದರಿಯವರೇ, ಬರುತ್ತಿರಿ.

      Delete
  2. ಅದ್ಭುತ ಕಲ್ಪನೆ!

    ReplyDelete
    Replies
    1. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು ಸುನಾಥ್ ಸರ್, ಬರುತ್ತಿರಿ.

      Delete